• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಾರ್ ಗರ್ಲ್‌ಗೆ ದುಬಾರಿ ಉಡುಗೊರೆ ನೀಡಲು ವ್ಯಕ್ತಿ ಮಾಡಿದ್ದೇನು?

|

ಬೆಂಗಳೂರು, ಜನವರಿ 29: ಬಾರ್‌ ಗರ್ಲ್‌ಗೆ ದುಬಾರಿ ಉಡುಗೊರೆ ನೀಡಲು ವ್ಯಕ್ತಿಯೊಬ್ಬ ವಾಚ್ ಅಂಗಡಿಗೆ ಕನ್ನ ಹಾಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ನಾಗವಾರದ ನಿವಾಸಿ ಸೈಯದ್ ಮೊಹಮ್ಮದ್ ಫೈಸಲ್ ಹಾಗೂ ಆತನ ಸಹಚರ ದೊಡ್ಡ ಬೆಟ್ಟಹಳ್ಳಿಯ ಮಹಮದ್ ಯೂಸುಫ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಮುಂಬೈನಂತೆ ಬೆಂಗಳೂರು ಮಲ್ಟಿಪ್ಲೆಕ್ಸ್ ಸಂಸ್ಕೃತಿಗೆ ಒಗ್ಗಬೇಕೇ?

ಆರೋಪಿಗಳಿಂದ 6.5 ಲಕ್ಷ ಮೌಲ್ಯದ ವಿವಿಧ ಕಂಪನಿಯ ವಾಚುಗಳು, ಸೌಂದರ್ಯ ವರ್ಧಕಗಳು ಹಾಗೂ ಬೆಲೆ ಬಾಳುವ ಸಿಗರೇಟ್ ಸೇರಿದಂತೆ ಇನ್ನಿತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಇತ್ತೀಚೆಗೆ ಅಶೋಕನಗರ ಮತ್ತು ವಿಲ್ಸನ್ ಗಾರ್ಡನ್‌ ಸರಹದ್ದಿನಲ್ಲಿ ರಾತ್ರಿ ವೇಳೆ ಅಂಗಡಿಗಳ ಕಳ್ಳತನ ಹೆಚ್ಚಾಗಿದ್ದವು. ಈ ಸರಣಿ ಕೃತ್ಯಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಸಿಸಿಟಿವಿ ಕ್ಯಾಮರಾ ಹಾಗೂ ಮೊಬೈಲ್ ಕರೆಗಳ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಮೋಜಿನ ಜೀವನಕ್ಕೆ ಬಿದ್ದಿದ್ದ ಫೈಸಲ್‌ಗೆ ಬಾರ್ ಗರ್ಲ್ಸ್‌ಗಳ ಮೇಲೆ ವಿಪರೀತ ವ್ಯಾಮೋಹವಿತ್ತು. ದುಬಾರಿ ಉಡುಗೊರೆ ನೀಡುವ ಮೂಲಕ ಆ ಯುವತಿಯರ ಒಲವು ಗಳಿಸಿಕೊಳ್ಳಲು ಆತ ಪ್ರಯತ್ನಿಸುತ್ತಿದ್ದ. ಇದಕ್ಕಾಗಿಯೇ ಸೌಂದರ್ಯವರ್ಧಕ ಹಾಗೂ ವಾಚ್‌ ಮಾರಾಟ ಮಳಿಗೆಗಳನ್ನ ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ.

ರಾತ್ರಿ ವೇಳೆ ಕಳ್ಳತನಕ್ಕೆ ಬಂದ ಫೈಸಲ್ ತನ್ನ ಗೆಳೆಯನಿಗೆ ವಿಡಿಯೋ ಕಾಲ್ ಮಾಡಿ ತಾನು ಕಳ್ಳತನ ಮಾಡುವುದನ್ನು ತೋರಿಸುತ್ತಿದ್ದ. ಇತ್ತೀಚೆಗೆ ಅಶೋಕನಗರ ವ್ಯಾಪ್ತಿಯಲ್ಲಿ ಅಂಗಡಿ ಕಳ್ಳತನವಾಗಿತ್ತು. ಈ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಈ ಕಳ್ಳರು ಸಿಕ್ಕಿಬಿದ್ದಿದ್ದಾರೆ.

English summary
A man who stole expensive goods to please Bar Girls was arrested by Ashok Nagar police recently. The accused Syed Mohammed Faisal (23), is a resident of Nagawara.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X