ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡೇಟಿಂಗ್ ಮಾಡಲು ನಂಬರ್ ಕೊಟ್ಟ ಯುವಕ 1.35 ಲಕ್ಷ ಕಳೆದುಕೊಂಡ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 13 : ಡೇಟಿಂಗ್ ಮೊಬೈಲ್ ಅಪ್ಲಿಕೇಶನ್ ಮೂಲಕ ಪ್ರೀತಿ ಹುಡುಕಲು ಹೋದ ಯುವಕನೊಬ್ಬ 1.35 ಲಕ್ಷ ಕಳೆದುಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಡೇಟಿಂಗ್ ಆಪ್ ಮೂಲಕ ಯುವಕನೊಬ್ಬ ಪ್ರೀತಿ ಹುಡುಕಲು ಮುಂದಾಗಿದ್ದ. ಅಲ್ಲಿ ಪರಿಚಿತಳಾದ ಯುವತಿ ಜೊತೆ ಚಾಟಿಂಗ್ ಆರಂಭಿಸಿದ್ದ. ಕಳೆದ ವಾರ ಯುವಕನಿಗೆ ಕರೆ ಮಾಡಿದ್ದ ಯುವತಿ ಮಂಗಳವಾರ ಮೀಟ್ ಆಗೋಣ ಎಂದು ಹೇಳಿದ್ದಳು.

ಸಂಚಾರ ಪೊಲೀಸರಿಗೂ ಮುಲಾಜಿಲ್ಲದೆ ದಂಡ ವಿಧಿಸಿದ ಬಿಟಿಪಿಸಂಚಾರ ಪೊಲೀಸರಿಗೂ ಮುಲಾಜಿಲ್ಲದೆ ದಂಡ ವಿಧಿಸಿದ ಬಿಟಿಪಿ

ಬೊಮ್ಮನಹಳ್ಳಿಯಲ್ಲಿರುವ ತನ್ನ ಅಪಾರ್ಟ್‌ಮೆಂಟ್‌ಗೆ ಆಕೆಯನ್ನು ಆಹ್ವಾನಿಸಿದ್ದ. ಆಕೆ ಮನೆಗೆ ಬಂದಾಗ ತಿಳಿಸಿದ್ದು ಆಕೆ ಯುವತಿಯಲ್ಲ ತೃತೀಯ ಲಿಂಗಿ ಎಂದು. ಮನೆಯನ್ನು ಹೊರಹೋಗುವಂತೆ ಯುವಕ ಗಲಾಟೆ ಮಾಡಿದ್ದ.

ಬೆಂಗಳೂರಲ್ಲಿ ಓಲಾದಿಂದ self drive ಬಾಡಿಗೆ ಕಾರು ಸೇವೆಬೆಂಗಳೂರಲ್ಲಿ ಓಲಾದಿಂದ self drive ಬಾಡಿಗೆ ಕಾರು ಸೇವೆ

Man Shared Number In Dating App Gang Robbed

ಆಗ ತನ್ನ ಇನ್ನಿಬ್ಬರು ಸ್ನೇಹಿತರನ್ನು ಕರೆಸಿಕೊಂಡ ತೃತೀಯ ಲಿಂಗಿ ಯುವಕನನ್ನು ಕಟ್ಟಿಹಾಕಿ ಥಳಿಸಿದ್ದಾರೆ. ಆತನ ಮೊಬೈಲ್, ಪರ್ಸ್‌ ಕಸಿದುಕೊಂಡಿದ್ದಾರೆ. ಬಳಿಕ ಎಟಿಎಂ ಕಾರ್ಡ್‌ ಪಡೆದು, ಪಿನ್ ನೀಡುವಂತೆ ಹಿಂಸೆ ನೀಡಿದ್ದಾರೆ.

ನೌಕರರಿಗೆ ಪಿಎಫ್ ನೀಡಲು ಕೂಡ ಬಿಎಂಟಿಸಿ ಬಳಿ ಹಣ ಇಲ್ವಂತೆನೌಕರರಿಗೆ ಪಿಎಫ್ ನೀಡಲು ಕೂಡ ಬಿಎಂಟಿಸಿ ಬಳಿ ಹಣ ಇಲ್ವಂತೆ

ಯುವಕ ಪಿನ್ ನಂಬರ್ ಹೇಳುತ್ತಿದ್ದಂತೆ 1.35 ಲಕ್ಷ ಹಣವನ್ನು ಡ್ರಾ ಮಾಡಿಕೊಂಡು ಮೂವರ ಪರಾರಿಯಾಗಿದ್ದಾರೆ. ಪೊಲೀಸರಿಗೆ ದೂರು ನೀಡದಂತೆ ಮೂವರು ಬೆದರಿಗೆ ಹಾಕಿದ್ದರು. ಬಂಡೆಪಾಳ್ಯ ಪೊಲೀಸರಿಗೆ ಈ ಕುರಿತು ಯುವಕ ದೂರು ನೀಡಿದ್ದಾನೆ.

ಅಪಾರ್ಟ್‌ಮೆಂಟ್‌ಗೆ ಆಗಮಿಸಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿದ್ದು, ತನಿಖೆ ಕೈಗೊಂಡಿದ್ದಾರೆ. ಪ್ರೀತಿಯ ಆಸೆಗೆ ಬಿದ್ದ ಯುವಕ, ಹಣವನ್ನು ಕಳೆದುಕೊಂಡಿದ್ದಾನೆ.

English summary
Gang of three members beat and snatched phone, wallet and withdrew Rs 1.35 lakh from ATM card in Bengaluru. Youth shared his mobile number and address through dating application.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X