ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೊಮ್ಮಗಳ ಬಾಲ್ಯ ವಿವಾಹ ತಡೆಯಲು ಹೋದ ಅಜ್ಜ ಕೊಲೆಯಾದ

|
Google Oneindia Kannada News

ದೊಡ್ಡಬಳ್ಳಾಪುರ, ನವೆಂಬರ್ 20: ಬಾಲ್ಯ ವಿವಾಹ ಪದ್ಧತಿ ಕರ್ನಾಟಕದಲ್ಲಿ ಇಲ್ಲವೇ ಇಲ್ಲ ಶೇ. 90ರಷ್ಟು ಕಡಿಮೆಯಾಗಿದೆ ಎಂದು ಹೇಳುತ್ತಾರೆ ಆದರೆ ಹೀಗೆ ಕೆಲವೊಂದು ಘಟನೆಗಳು ದುರಂತ ಅಂತ್ಯ ಕಂಡಾಗ ಮಾತ್ರ ಬೆಳಕಿಗೆ ಬರುತ್ತವೆ. ನಮ್ಮ ಕಣ್ಣಿಗೆ ಕಾಣದ ಅದೆಷ್ಟೋ ಪ್ರಕರಣಗಳಿವೆ.

ಮೊಮ್ಮಗಳು ಇನ್ನು ಚಿಕ್ಕವಳು ಅವಳು ಶಾಲೆಗೆ ಹೋಗಬೇಕು, ಮಕ್ಕಳೊಂದಿಗೆ ಆಟ ಆಡವಾಡುತ್ತಾ ಸಂತೋಷವಾಗಿರಬೇಕು ಅದನ್ನು ನೋಡುತ್ತಾ ನಾವು ನಮ್ಮ ನೋವುಗಳನ್ನು ಮರೆಯಬೇಕು ಎಂದು ಅದೆಷ್ಟೋ ಅಜ್ಜ ಅಜ್ಜಿಯಂದಿರು ಕನಸುಗಳನ್ನಿಟ್ಟುಕೊಂಡಿರುತ್ತಾರೆ, ಹಾಗೆಯೇ ಈ ಅಜ್ಜ ಕೂಡ ತನ್ನ ಮೊಮ್ಮಗಳ ಬಗ್ಗೆ ಸಾವಿರಾರು ಕನಸುಗಳನ್ನಿಟ್ಟುಕೊಂಡಿದ್ದರು.

ಸುಡುಗಾಡು ಬಾಲ್ಯವಿವಾಹ ಮೆಟ್ಟಿನಿಂತ ಬೆಳಗಾವಿ ಹುಡುಗಿ ತುಳಸಿ ಸುಡುಗಾಡು ಬಾಲ್ಯವಿವಾಹ ಮೆಟ್ಟಿನಿಂತ ಬೆಳಗಾವಿ ಹುಡುಗಿ ತುಳಸಿ

ಮೊಮ್ಮಗಳಿಗೆ ಬಾಲ್ಯ ವಿವಾಹ ಮಾಡಲು ಹೊರಟಿದ್ದ ಮಗನನ್ನು ತಡೆದಿದ್ದಕ್ಕೆ ತಂದೆಯನ್ನೇ ಕೊಲೆ ಮಾಡಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ. ಮೊಮ್ಮಗಳ ಬಾಲ್ಯ ವಿವಾಹ ಮಾಡಲು ಹೊರಟಿದ್ದ ಮಗನ ವಿರುದ್ಧ ಸಂಬಂಧಿತ ಇಲಾಖೆಗಳಿಗೆ ಪತ್ರ ಬರೆದು ಮದುವೆ ನಿಲ್ಲಿಸಿದ ಕೋಪದಲ್ಲಿ ಪಾನಮತ್ತನಾಗಿದ್ದ ಕುಮಾರ್ ಎಂಬುವನು ತನ್ನ ತಂದೆಯನ್ನೇ ಕೊಲೆ ಮಾಡಿದ್ದಾನೆ.

Man killed his father over child marriage quarrel

ಮೃತರನ್ನು ಈಶ್ವರ್(76) ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮೃತನ ಮಗ ಕುಮಾರ್ ಮತ್ತು ಕುಮಾರ್ ಬೀಗನಾಗಿದ್ದ ಸುಬ್ರಮಣಿ ವಿರುದ್ಧ ಪ್ರಕರಣ ದಾಖಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕಾಗಿ ಗ್ರಾಮಾಂತರ ಪೊಲೀಸರು ಬಲೆ ಬೀಸಿದ್ದಾರೆ.

ಮಕ್ಕಳ ಸಹಾಯವಾಣಿಗೆ ಕರೆ, ತಪ್ಪಿತು ಬಾಲ್ಯ ವಿವಾಹಮಕ್ಕಳ ಸಹಾಯವಾಣಿಗೆ ಕರೆ, ತಪ್ಪಿತು ಬಾಲ್ಯ ವಿವಾಹ

ಪ್ರಕರಣ ಏನು? ಕುಮಾರ್ ಮಗಳಾದ ಪುಷ್ಪ ಮತ್ತು ಸುಬ್ರಮಣಿ ಮಗ ಬಾಬುಗೆ ಮದುವೆ ನಿಶ್ಚಯವಾಗಿತ್ತು ಆದರೆ ಇನ್ನು 15 ವರ್ಷದ ಮೊಮ್ಮಗಳಿಗೆ ಮದುವೆ ಮಾಡಲು ಕುಮಾರ್ ತಂದೆಗೆ ಇಷ್ಟವಿರಲಿಲ್ಲ. ಆದರೂ ನವೆಂಬರ್ 19ರಂದು ಮದುವೆ ನಿಶ್ಚಯವಾಗಿತ್ತಿ. ಹೀಗಾಗಿ ಈಶ್ವರ್ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆ ಹಾಗೂ ಪೊಲೀಸರಿಗೆ ದೂರು ನೀಡಿದ್ದ ಅವರು ಬಂದು ಮದುವೆಯನ್ನು ನಿಲ್ಲಿಸಿದ್ದರು. ಮದುವೆ ಮುರಿಯಲು ಕಾರಣರಾದ ಈಶ್ವರ್ ಮೇಲೆ ಕೋಪಗೊಂಡ ಕುಮಾರ್ ಆತನನ್ನು ಹತ್ಯೆಮಾಡಿದ್ದಾನೆ ಎನ್ನಲಾಗಿದೆ.

English summary
A man killed his father over child marriage issue in Doddaballapur. Grand father was opposing a marriage of his own grand daughter, but it was not acceptable to his son.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X