ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚೀನಾದ 'ಸಿನೋಫಾರ್ಮ್' ಲಸಿಕೆ ಪಡೆದ ಬೆಂಗಳೂರು ವ್ಯಕ್ತಿಗೆ ಕೊರೊನಾ ಸೋಂಕು

|
Google Oneindia Kannada News

ಬೆಂಗಳೂರು, ಏಪ್ರಿಲ್ 02: ಚೀನಾದ ಸಿನೋಫಾರ್ಮ್ ಕೊರೊನಾ ಲಸಿಕೆ ಪಡೆದಿದ್ದ ಬೆಂಗಳೂರು ವ್ಯಕ್ತಿಗೆ ಕೊರೊನಾ ಸೋಂಕು ತಗುಲಿದೆ.

ದುಬೈನಲ್ಲಿ ಲಸಿಕೆ ಪಡೆದು ಬೆಂಗಳೂರಿಗೆ ಆಗಮಿಸಿರುವ ಇವರಲ್ಲಿ ಸೋಂಕು ಕಾಣಸಿಕೊಂಡಿದೆ. ದುಬೈನಲ್ಲಿ ಕೆಲಸ ಮಾಡುತ್ತಿದ್ದ 44 ವರ್ಷದ ವ್ಯಕ್ತಿಯೊಬ್ಬರು, ಅಲ್ಲಿದ್ದಾಗ ಚೀನಾ ದೇಶ ಅಭಿವೃದ್ಧಿಪಡಿಸಿದ್ದ ಸಿನೊಫಾರ್ಮ್ ಕೋವಿಡ್- ಲಸಿಕೆಯ ಎರಡು ಡೋಸ್ ಪಡೆದುಕೊಂಡಿದ್ದರು. ಆದರೆ, ಈ ವಾರ ಬೆಂಗಳೂರಿಗೆ ವಾಪಸಾದ ನಂತರ ಅವರಿಗೆ ಪಾಸಿಟಿವ್ ದೃಢಪಟ್ಟಿದೆ.

ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಳ, ಇಂದು ಕಠಿಣ ಮಾರ್ಗಸೂಚಿ ಪ್ರಕಟ: ಸುಧಾಕರ್ ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಳ, ಇಂದು ಕಠಿಣ ಮಾರ್ಗಸೂಚಿ ಪ್ರಕಟ: ಸುಧಾಕರ್

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅಧ್ಯಕ್ಷ ಡಾ. ಆರಿಫ್ ಅಲ್ವಿ ಇಬ್ಬರೂ ಮಾರ್ಚ್ ನಲ್ಲಿ ಸಿನೊಫಾರ್ಮ್ ಲಸಿಕೆಯ ಮೊದಲ ಡೋಸ್ ತೆಗೆದುಕೊಂಡಿದ್ದರು. ಆದರೆ, ಕೆಲವು ದಿನಗಳ ನಂತರ ಅವರಿಬ್ಬರಿಗೂ ಕೊರೊನಾ ಸೋಂಕು ತಗುಲಿತ್ತು.

ಜನವರಿ 31ರಂದು ಮೊದಲಡೋಸ್ ಪಡೆದಿದ್ದರು

ಜನವರಿ 31ರಂದು ಮೊದಲಡೋಸ್ ಪಡೆದಿದ್ದರು

ಜನವರಿ 31ರಂದು ಮೊದಲ ಡೋಸ್ ಪಡೆದಿದ್ದು, ಫೆಬ್ರವರಿ 25ರಲ್ಲಿ ವಿದೇಶದಲ್ಲಿಯೇ ಎರಡನೇ ಡೋಸ್ ಪಡೆದುಕೊಂಡಿದ್ದಾರೆ. ತನ್ನ ಕುಟುಂಬಸ್ಥರನ್ನು ಭೇಟಿಯಾಗಲು ಗುವಾಹಟಿಗೆ ಬಂದಿದ್ದಾರೆ. ನಂತರ ದುಬೈಗೆ ಮತ್ತೆ ತೆರಳಲು ಆರ್ ಟಿ-ಪಿಸಿಆರ್ ಪರೀಕ್ಷೆ ನಡೆಸಿದ್ದು, ನೆಗೆಟಿವ್ ವರದಿ ಬಂದಿದೆ. ಹಾಗೆಯೇ ದುಬೈ ಸರ್ಕಾರದ ನೀಡಿರುವ ಅನುಮತಿಯನ್ನು ಏರ್ ಲೈನ್ಸ್ ಕೇಳಿದ್ದು, ಅದು ಆತನ ಬಳಿ ಇಲ್ಲದಿದ್ದರಿಂದ ಮಾರ್ಚ್ 27 ರಂದು ವಿಮಾನ ಮಿಸ್ ಆಗಿದೆ.

ಎರಡನೇ ಬಾರಿಗೆ ಪರೀಕ್ಷಿಸಿದಾಗಲೂ ಪಾಸಿಟಿವ್ ಬಂದಿದೆ

ಎರಡನೇ ಬಾರಿಗೆ ಪರೀಕ್ಷಿಸಿದಾಗಲೂ ಪಾಸಿಟಿವ್ ಬಂದಿದೆ

ಮಾರ್ಚ್ 30ರಂದು ಎರಡನೇ ಬಾರಿಗೆ ಆರ್ ಟಿ- ಪಿಸಿಆರ್ ಪರೀಕ್ಷೆ ಮಾಡಿಸಿದಾಗಲೂ ಪಾಸಿಟಿವ್ ಬಂದಿದೆ. ಬಿಬಿಎಂಪಿ ನಿಯಮದಂತೆ ಅವರನ್ನು ಪ್ರತ್ಯೇಕ ಮನೆಯಲ್ಲಿ ಐಸೋಲೇಷನ್ ನಲ್ಲಿ ಇರಿಸಲಾಗಿದೆ. ಆತ ಇನ್ನೂ 14 ದಿನಗಳ ಕಾಲ ಕ್ವಾರಂಟೈನ್ ನಲ್ಲಿ ಇರಬೇಕಾಗುತ್ತದೆ. ಯಾವುದೇ ರೋಗ ಲಕ್ಷಣ ಇಲ್ಲದಿರುವುದರಿಂದ ಯಾವುದೇ ಚಿಕಿತ್ಸೆ ನೀಡುತ್ತಿಲ್ಲ. ಕೋವಿಡ್ ಶಿಷ್ಟಚಾರವನ್ನು ಪಾಲಿಸಲಾಗುತ್ತಿದೆ ಎಂದು ಆತನ ಸಂಬಂಧಿಕರು ತಿಳಿಸಿದ್ದಾರೆ.

ದುಬೈ ಸರ್ಕಾರದಿಂದ ಅನುಮತಿ ಪಡೆಯದೆ ಸಂಚಾರ

ದುಬೈ ಸರ್ಕಾರದಿಂದ ಅನುಮತಿ ಪಡೆಯದೆ ಸಂಚಾರ

ಬೆಂಗಳೂರಿನಲ್ಲಿರುವ ಅವರ ಸಂಬಂಧಿಕರು ದುಬೈ ಸರ್ಕಾರದಿಂದ ಯಾವುದೇ ಅನುಮೋದನೆ ಪಡೆಯದೆ ದುಬೈಗೆ ನೇರ ವಿಮಾನ ಸೇವೆ ನಡೆಸುತ್ತಿರುವ ಬೇರೆ ವಿಮಾನಯಾನ ಕಂಪನಿಯನ್ನು ಪತ್ತೆ ಹಚ್ಚಿದ್ದಾರೆ. ಆದ್ದರಿಂದ ಅವರು ಅದೇ ದಿನ ಇಲ್ಲಿಗೆ ಬಂದಿದ್ದಾರೆ. ಆರ್ ಟಿ-ಪಿಸಿಆರ್ ಪರೀಕ್ಷೆ ನಡೆದ 72 ಗಂಟೆ ಮುಗಿದಿದ್ದರಿಂದ ಮತ್ತೆ ಮರುಪರಿಶೀಲನೆಗಾಗಿ ಮನೆಯಿಂದ ಸ್ವಾಬ್ ಸಂಗ್ರಹಕ್ಕೆ ಹೇಳಿದಾಗ, ಆಶ್ಚರ್ಯ ಕಾದಿತ್ತು. ಮಾರ್ಚ್ 29 ರಂದು ಅದು ಪಾಸಿಟಿವ್ ಆಗಿತ್ತು. ತಾಪಮಾನ ಅಥವಾ ಆಮ್ಲಜನಕ ಪ್ರಮಾಣದಲ್ಲಿ ಇಳಿಕೆಯಂತಹ ಯಾವುದೇ ರೋಗ ಲಕ್ಷಣವಿರಲಿಲ್ಲ ಎಂದು ಅವರ ಸಂಬಂಧಿಕರು ಹೇಳಿದರು.

Recommended Video

ಯುವತಿ ಕೊಟ್ಟ ಆಡಿಯೋ, ವಿಡಿಯೋ ಜಾರಕಿಹೊಳಿಗೆ ಸಂಕಷ್ಟ..!? | Oneindia Kannada
ಡಿಸೆಂಬರ್‌ನಲ್ಲಿ ಸಿನೋಫಾರ್ಮ್ ಲಸಿಕೆಗೆ ಅನುಮೋದನೆ

ಡಿಸೆಂಬರ್‌ನಲ್ಲಿ ಸಿನೋಫಾರ್ಮ್ ಲಸಿಕೆಗೆ ಅನುಮೋದನೆ

ಡಿಸೆಂಬರ್ 9, 2020 ರಂದು ಸಿನೋಫಾರ್ಮ್ ಲಸಿಕೆಯನ್ನು ಅನುಮೋದಿಸಿದ ಯುನೈಟೆಡ್ ಅರಬ್ ಎಮಿರೇಟ್ಸ್ ಲಸಿಕೆ ಶೇ. 86 ರಷ್ಟು ಪರಿಣಾಮಕಾರಿ ಎಂದು ಹೇಳಿದೆ, ಲಸಿಕೆಯ ಮೂರು ಹಂತದ ಪ್ರಯೋಗಗಳು ಶೇ. 79 ರಷ್ಟು ಪರಿಣಾಮಕಾರಿತ್ವವನ್ನು ಹೊಂದಿವೆ ಎಂದು ಸಿನೋಫಾರ್ಮ್ ಡಿಸೆಂಬರ್ 30, 2020 ರಂದು ಘೋಷಿಸಿತು.

English summary
A 44-year-old Indian sales representative working in Dubai, who took both doses of the China-made Sinopharm COVID-19 vaccine there, tested positive after his arrival in Bengaluru this week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X