ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೊಲೀಸ್ ಆಯುಕ್ತರ ಕಚೇರಿಯಿಂದ ಕಾಲ್ ಬರುತ್ತೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 27: ಮ್ಯಾಟ್ರಿಮೊನಿ ವೆಬ್ ತಾಣದಲ್ಲಿ ಸಂಗಾತಿಯನ್ನು ಹುಡುಕುವ ಮುನ್ನ ಹುಷಾರ್ ! ವ್ಯಕ್ತಿಯೊಬ್ಬ ಮ್ಯಾಟ್ರಿಮೊನಿ ವೆಬ್ ತಾಣದಲ್ಲಿ ಸಂಗಾತಿ ಹುಡುಕಿಕೊಳ್ಳಲು ಹೋಗಿ ಸರಿಯಾಗಿ ಟೋಪಿ ಹಾಕಿಸಿಕೊಂಡು ವಿಲ ವಿಲ ಒದ್ದಾಡುತ್ತಿದ್ದಾರೆ. ಮಾತ್ರವಲ್ಲ, ನ್ಯಾಯ ಕೋರಿ ಪೊಲೀಸರ ಮೊರೆ ಹೋಗಿದ್ದಾರೆ.

ಶ್ರೀಕೃಷ್ಣ ನಗರದ ನಿವಾಸಿ ವಿನಾಯಕ ಹಣ ಕಳೆದುಕೊಂಡವರು. ವಿನಾಯಕ್ ಮದುವೆಯಾಗಲು ಸಂಗಾತಿಯನ್ನು ಹುಡುಕುತ್ತಿದ್ದ. ಸ್ನೇಹಿತರೊಬ್ಬರು ವೆಬ್ ತಾಣದಲ್ಲಿ ಹುಡುಕಿದರೆ ಒಳ್ಳೆಯ ಸಂಗಾತಿ ಸಿಗುವುದಾಗಿ ಹೇಳಿದ್ದರು. ಅದರಂತೆ, ವಿನಾಯಕ್ ಶಾದಿ.ಕಾಮ್ ತಾಣದಲ್ಲಿ ಸುಂದರ ಹುಡುಗಿಯನ್ನು ನೋಡಿ ಮದುವೆಯಾಗುವುದಾಗಿ ರಿಕ್ವೆಸ್ಟ್ ಕಳಿಸಿದ್ದ. ಹಲವು ಹುಡುಗಿಯರ ಪ್ರೊಫೈಲ್ ಗೆ ರಿಕ್ವೆಸ್ಟ್ ಕಳಿಸಿ ಮದುವೆ ಕನಸು ಕಾಣುತ್ತಿದ್ದ. ಹುಡುಗಿಯಿಂದ ಕಾಲ್ ಬರಬಹುದು ಎಂಬ ಕನಸಲ್ಲಿ ತೇಲಾಡುತ್ತಿದ್ದ.

ವಿನಾಯಕ್ ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ ಹೆಸರಿನಲ್ಲಿ ಕರೆ ಮಾಡಿದ ಅಪರಿಚಿತರು, ನೀನು ಸಂಗಾತಿ ಯಾಗಲು ಬಯಲಿಸಿದ ಹುಡುಗಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ನಾವು ಪೊಲೀಸ್ ಆಯುಕ್ತರ ಕಚೇರಿಯಿಂದ ಕರೆ ಮಾಡುತ್ತಿದ್ದೇವೆ. ನೀನು ಈಗ ನಮಗೆ ಹಣ ಕೊಟ್ಟರೆ ಮಾತ್ರ ಕೇಸು ಮುಚ್ಚಿ ಹಾಕುತ್ತೇವೆ. ಇಲ್ಲದಿದ್ದರೆ ನಿಮ್ಮನ್ನು ಅರೆಸ್ಟ್ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.

Bengaluru: Man get cheated on a matrimonial site

Recommended Video

ಅಂಬಾನಿ ನಿವಾಸದ ಎದುರು ಪತ್ತೆಯಾದ ವಾಹನದಲ್ಲಿ ಸ್ಫೋಟಕದ ಜೊತೆ ಇತ್ತು 'ಎಚ್ಚರಿಕೆ ಪತ್ರ'! | Oneindia Kannada

ಪೊಲೀಸ್ ಆಯುಕ್ತರ ಹೆಸರಿನಲ್ಲಿ ಪದೇ ಪದೇ ಕರೆ ಮಾಡಿದ ಕಿರಾತಕರು, ಒಂದು ಲಕ್ಷ ರೂಪಾಯಿ ಹಣ ಪಡೆದಿದ್ದಾರೆ. ಪದೇ ಪದೇ ಬ್ಲಾಕ್ ಮೇಲ್ ಮಾಡಿ ಒಂದು ಲಕ್ಷ ರೂಪಾಯಿ ಹಣವನ್ನು ಪೀಕಿದ್ದಾರೆ. ಮೋಸ ಹೋಗಿರುವ ಸಂಗತಿ ತಡವಾಗಿ ಬೆಳಕಿಗೆ ಬಂದಿದ್ದು, ಈ ಕುರಿತು ವಿನಾಯಕ್ ದಕ್ಷಿಣ ವಿಭಾಗದ ಸಿಇಎಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

English summary
Bengaluru: Man who get cheated on a matrimonial site in the name of Police commissioner. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X