ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಸರ್ಜಾಪುರ ಠಾಣೆಯಲ್ಲಿ ಲಾಕಪ್ ಡೆತ್?

By Mahesh
|
Google Oneindia Kannada News

ಬೆಂಗಳೂರು, ಸೆ.21: ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ವ್ಯಕ್ತಿಯೊಬ್ಬರು ಲಾಕಪ್ ಡೆತ್ ಆಗಿರುವ ಘಟನೆ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಅದರೆ, ಬೆಂಗಳೂರಿನಲ್ಲಿ ಯಾವುದೇ ಲಾಕಪ್ ಡೆತ್ ಪ್ರಕರಣ ನಡೆದಿಲ್ಲ ಎಂದು ಆಯುಕ್ತ ಎಂ.ಎನ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ಕಳೆದ ನಾಲ್ಕು ದಿನಗಳ ಕಾಲ ಪೊಲೀಸರ ವಶದಲ್ಲಿ ವಿಚಾರಣೆಗೊಳಪಟ್ಟಿದ್ದ 55 ವರ್ಷದ ಪಿಳ್ಳಪ್ಪ ನಿನ್ನೆ ಸಂಜೆ ಪೊಲೀಸ್ ​ಠಾಣೆಯಲ್ಲಿ ಸಾವನ್ನಪ್ಪಿದ್ದರು. ವಿಚಾರಣೆ ವೇಳೆ ಪಿಳ್ಳಪ್ಪ ಅವರಿಗೆ ಹೃದಯಾಘಾತವಾಯಿತು. ಅವರನ್ನು ಉಳಿಸುವ ಪ್ರಯತ್ನ ವಿಫಲವಾಯಿತು ಎಂದು ಸರ್ಜಾಪುರ ಪೂಲೀಸರು ಹೇಳಿದ್ದಾರೆ. ಅದರೆ, ಪೊಲೀಸರ ಸಮಜಾಯಿಸಿ ನೀಡಿದ್ದನ್ನು ನಂಬದ ಪಿಳ್ಳಪ್ಪ ಅವರ ಕುಟುಂಬದವರು ಪೊಲೀಸರ ಕಿರುಕುಳದಿಂದಲೇ ಸಾವನ್ನಪ್ಪಿದ್ದಾರೆ. ಇದು ಲಾಕಪ್ ಡೆತ್ ಪ್ರಕರಣ ಎಂದು ದೂರಿದ್ದಾರೆ.

Man Dies in Sarjapur police Custody, Kin Cry Foul

32ವರ್ಷ ವಯಸ್ಸಿನ ಹರೀಶ್ ಎಂಬಾತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸೂರು ರಸ್ತೆ ತಿಂಡ್ಲು ನಿವಾಸಿಯಾದ ಪಿಳ್ಳಪ್ಪ ಅವರು ತಮ್ಮ ಹಿರಿಯ ಸೋದರ ನಾರಾಯಣ ಸ್ವಾಮಿ ಜೊತೆ ಸರ್ಜಾಪುರ ಪೊಲೀಸ್ ಠಾಣೆಗೆ ವಿಚಾರಣೆಗಾಗಿ ಬಂದಿದ್ದರು.

ಸರ್ಜಾಪುರ ಬಳಿ ಗೋಣಿಚೀಲವೊಂದರಲ್ಲಿ ಹರೀಶ್ ಶವವಾಗಿ ಪತ್ತೆಯಾಗಿದ್ದ. ಹರೀಶ್ ಗೂ ಪಿಳ್ಳಪ್ಪನವರ ಮಗಳಿಗೂ ಪ್ರೇಮ ಸಂಬಂಧವಿತ್ತು. ಇಬ್ಬರೂ ಮದುವೆಯಾಗಿದ್ದರು. ಇದಕ್ಕೆ ಪಿಳ್ಳಪ್ಪ ಅವರ ಕುಟುಂಬ ವಿರೋಧ ವ್ಯಕ್ತಪಡಿಸಿತ್ತು ಎನ್ನಲಾಗಿದೆ. ಈ ಬಗ್ಗೆ ಸ್ಪಷ್ಟನೆ ಕೇಳಲು ಠಾಣೆಗೆ ಪಿಳ್ಳಪ್ಪ ಅವರನ್ನು ಪೊಲೀಸರು ಕರೆಸಿಕೊಂಡಿದ್ದಾರೆ.

ಸೆ.15ರಂದು ಠಾಣೆಗೆ ಹೋದ ಪಿಳ್ಳಪ್ಪ ಅವರನ್ನುಸುಪಾರಿ ಕೊಟ್ಟು ಹರೀಶ್ ಕೊಲೆಗೈದ ಆರೋಪ ಹೊರೆಸಲಾಗಿದೆ. ನಿನ್ನೆ ದಿನ ವಿಚಾರಣೆ ನಡೆಯುವ ವೇಳೆಯಲ್ಲಿ ಪಿಳ್ಳಪ್ಪ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಪೊಲೀಸರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅದರೆ, ಮಾರ್ಗಮಧ್ಯದಲ್ಲೇ ಪಿಳ್ಳಪ್ಪ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ನಂತರ ಪಿಳ್ಳಪ್ಪ ಅವರ ಕುಟುಂಬಕ್ಕೆ ಪೊಲೀಸರು ವಿಷಯ ತಿಳಿಸಿದ್ದಾರೆ. ಅದರೆ, ಪಿಳ್ಳಪ್ಪ ಅವರ ಸಾವಿಗೆ ಪೊಲೀಸರು ನೀಡಿದ ಮಾನಸಿಕ ಹಿಂಸೆಯೇ ಕಾರಣ, ಇದು ಲಾಕಪ್ ಡೆತ್ ಪ್ರಕರಣ ಎಂದು ಪಿಳ್ಳಪ್ಪ ಅವರ ಕುಟುಂಬದವರು ಆರೋಪಿಸಿದ್ದಾರೆ.

English summary
A 55-year-old man Pillappa, who was being interrogated by Sarjapur police in connection with murder of Harish, died on Saturday. His relatives alleged that its a lockup death. Police commissioner MN Reddi denied any lockup death case in Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X