ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಜನರೇ ಸಿಮ್ ಕದ್ದು ಹಣ ಎಗರಿಸುತ್ತಾರೆ ಹುಷಾರ್!

|
Google Oneindia Kannada News

ಬೆಂಗಳೂರು, ಆಗಸ್ಟ್ 08: ಬ್ಯಾಂಕ್ ಖಾತೆಯಲ್ಲಿ ಹಣವಿಟ್ಟರೇ ಸೇಫ್ ಎಂದುಕೊಳ್ಳುವ ಜನರು ಓದಲೇ ಬೇಕಿರುವ ವರದಿಯಿದು. ಬ್ಯಾಂಕ್ ನಲ್ಲಿ ಹಣವಿಟ್ಟು ಫೋನ್ ನಂಬರ್ ಕೊಟ್ಟು ಫೋನ್ ಪೇ, ಗೂಗಲ್ ಪೇ, ವಾಟ್ಸ್‌ಆಪ್ ಪೇ, ಪೇಟಿಎಂ ಸೇರಿದಂತೆ ಯಾವುದೇ ಆಪ್ ಬಳಸದಿದ್ದರು ನಿಮ್ಮ ಖಾತೆಗೆ ಕನ್ನ ಹಾಕಬಹುದು. ಸಿಮ್ ಕದ್ದು ಲಕ್ಷ ಲಕ್ಷ ಹಣ ಎಗರಿಸಿದ್ದ ಖದೀಮನ ಖತರ್ನಾಕ್ ಕಹಾನಿಯಿದು.

ಹಣದ ವ್ಯವಹಾರವನ್ನು ಮಾಡಲು ಬ್ಯಾಂಕ್‌ಗೆ ಹೋಗಬೇಕೆಂದಿಲ್ಲ. ಹಣಕಾಸಿನ ವ್ಯವಹಾರವನ್ನು ನಡೆಸಲು ಅಂಗೈನಲ್ಲಿ ಫೋನ್ ಇದ್ದರೆ ಸಾಕು. ಕ್ಷಣ ಮಾತ್ರದಲ್ಲಿ ಹಣವನ್ನು ವರ್ಗಾಯಿಸಬಹುದು, ಸ್ವೀಕರಿಸಲೂ ಬಹುದು. ಆದರೆ, ಆ ವ್ಯವಹಾರವೇ ಕಳ್ಳ ಖದೀಮರ ಪಾಲಿಗೆ ವರವಾಗಿ ಪರಿಣಮಿಸಿಬಿಟ್ಟಿದೆ.

ಈಶಾನ್ಯ ವಿಭಾಗದ ಸಿಇಎನ್ (ಸೈಬರ್) ಪೊಲೀಸರು ಮಹತ್ವದ ಕಾರ್ಯಚರಣೆಯನ್ನು ನಡೆಸಿ ಸಿಮ್ ಕದ್ದು ಸಾರ್ವಜನಿಕರ ಖಾತೆಗೆ ಕನ್ನ ಹಾಕಿ ಖಾತೆಗೆ ಹಣವನ್ನು ವರ್ಗಾಯಿಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಮೀಪದಲ್ಲೇ ಕುಳಿತು ಮಾತನಾಡಿಸುತ್ತಾ ಸಿಮ್ ಕಳವು ಮಾಡಿ. ಅದೇ ಸಿಮ್‌ನಿಂದ ಕೆಲವು ಅಪ್ಲಿಕೇಷನ್ ಬಳಕೆಯನ್ನು ಮಾಡಿ ವಂಚಿಸುತ್ತಿದ್ದ ಪ್ರಕಾಶ್ ಜಿಬಿ ಎಂಬುವವರನ್ನು ಬಂಧಿಸಲಾಗಿದೆ.

 3.45 ಲಕ್ಷ ಹಣ ಗಯಾಬ್

3.45 ಲಕ್ಷ ಹಣ ಗಯಾಬ್

ವಿಮಲ ಎಂಬ ಮಹಿಳೆಯ ಎಸ್‌ಬಿಐ ಅಕೌಂಟಿಗೆ ಕನ್ನವನ್ನು ಹಾಕಲಾಗಿದೆ. ಮೇ 8 ರಿಂದ ಮೇ 14ರ ಅವಧಿಯಲ್ಲಿ 3.45 ಲಕ್ಷ ಹಣವನ್ನು ಬ್ಯಾಕಿನಿಂದ ಅನಧಿಕೃತವಾಗಿ ಕಾಣೆಯಾಗಿದೆ. ತಾನೂ ಯಾವುದೇ ನೆಟ್ ಬ್ಯಾಂಕಿಂಗ್, ಆಪ್‌ಗಳನ್ನು ಬಳಕೆಯನ್ನು ಮಾಡುವುದಿಲ್ಲ. ಆಪ್ ಗಳನ್ನು ಇನ್ಸ್ಟಾಲ್ ಸಹ ಮಾಡಿರುವುದಿಲ್ಲ. ಯುಪಿಐ ನಂಬರ್ ಸಹ ಇಲ್ಲ. ಯಾವುದೇ ಓಟಿಪಿಯನ್ನು ಸಹ ಯಾರೊಂದಿಗೂ ಶೇರ್ ಮಾಡಿರುವುದಿಲ್ಲ. ಈ ಬ್ಯಾಂಕ್ ಖಾತೆಗೆ ಏರ್‍‌ಟೆಲ್ ನಂಬರ್ ಲಿಂಕ್ ಆಗಿದ್ದು. ಸಿಮ್ ಕಾರ್ಡ್‌ ಮೇ 8 ರಿಂದ ಮೇ 14ರವರೆಗೆ ಬ್ಲಾಕ್ ಆಗಿರುತ್ತದೆ. ಮತ್ತೊಂದು ಸಿಮ್ ಅನ್ನು ಮೇ 14 ರಂದು ತೆಗೆದುಕೊಂಡು ಆಕ್ಟೀವ್ ಮಾಡಿದಾಗ 3.45 ಲಕ್ಷ ಹಣ ಹೋಗಿರುವುದು ಬೆಳಕಿಗೆ ಬಂದಿದೆ ಎಂದು ದೂರನ್ನು ನೀಡಲಾಗಿತ್ತು.

 ಸಿಮ್ ಕಾರ್ಡ್‌ ಬ್ಲಾಕ್ ಆಗಿದೆ ಎಂಬ ತಪ್ಪು ಕಲ್ಪನೆ

ಸಿಮ್ ಕಾರ್ಡ್‌ ಬ್ಲಾಕ್ ಆಗಿದೆ ಎಂಬ ತಪ್ಪು ಕಲ್ಪನೆ

ವಿಮಲ ಎಂಬುವವರ ಬಳಿಯಲ್ಲಿ ಕರೆಯನ್ನು ಮಾಡಿಕೊಡುವುದಾಗಿ ಹೇಳಿ ಮೊಬೈಲ್ ಅನ್ನು ಪ್ರಕಾಶ್ ಪಡೆದುಕೊಂಡಿದ್ದ. ಆ ಸಮಯದಲ್ಲೇ ಪ್ರಕಾಶ ವಿಮಲ ಎಂಬುವವರ ಗಮನಕ್ಕೆ ಬಾರದಂತೆ ಅವರ ಸಿಮ್ ಕಾರ್ಡ್‌ ತೆಗೆದು ಅದೇ ಜಾಗದಲ್ಲಿ ಬೇರೆ ಸಿಮ್ ಕಾರ್ಡ್‌ ಅನ್ನು ಹಾಕಿ ವಾಪಸ್ಸು ಮೊಬೈಲ್ ಕೊಟ್ಟಿದ್ದ. ಆ ವೇಳೆಯಲ್ಲಿ ಸಿಮ್ ಬ್ಲಾಕ್ ಆಗಿದೆ ಎಂದು ವಿಮಲ ತಿಳಿದುಕೊಂಡಿದ್ದರು. ಸಮಯದಲ್ಲೇ ಕದ್ದ ಸಿಮ್ ಕಾರ್ಡ್‌ ಅನ್ನು ಇನ್ನೊಂದು ಮೊಬೈಲ್ ನಲ್ಲಿ ಹಾಕಿಕೊಂಡ ಪ್ರಕಾಶ ಹಂತಹಂತವಾಗಿ ಹಣವನ್ನು ವಿಥ್ ಡ್ರಾ ಮಾಡಿಕೊಂಡಿದ್ದ. ವಿಮಲ ಅಕೌಂಟ್ ನಲ್ಲಿ 3.45 ಲಕ್ಷ ಹಣವನ್ನು ಎಗರಿಸಿದ್ದ ಆರೋಪಿ ಪ್ರಕಾಶ್.

 ಅಕೌಂಟ್‌ನಲ್ಲಿದ್ದ 1.30 ಲಕ್ಷ ಹಣ ಫ್ರೀಜ್

ಅಕೌಂಟ್‌ನಲ್ಲಿದ್ದ 1.30 ಲಕ್ಷ ಹಣ ಫ್ರೀಜ್

ಸಿಮ್ ಕದ್ದು ಹಣ ಎಗರಿಸಿದ್ದ ಆರೋಪಿ ಮೂಲತಃ ಮಂಡ್ಯ ಜಿಲ್ಲೆ ದುದ್ದ ಹೋಬಳಿ ಗುನ್ನ ನಾಯಕ ಹಳ್ಳಿ ನಿವಾಸಿಯಾಗಿದ್ದ. ಈತನು ತನ್ನ ಅಕೌಂಟಿಗೆ ಹಣವನ್ನು ಕಾಕಿಕೊಂಡಿದ್ದ ಕಾರಣ ಸುಲಭವಾಗಿ ಸಿಕ್ಕಿಬಿದ್ದಿದ್ದಾನೆ. ಪ್ರಕಾಶ್ ನನ್ನು ಬಂಧಿಸಿದ ಸಿಇಎನ್ ಈಶಾನ್ಯ ವಿಭಾಗದ ಪೊಲೀಸರು 1.30 ಲಕ್ಷ ಹಣವನ್ನು ಅಕೌಂಟ್‌ನಲ್ಲಿ ಫ್ರೀಜ್ ಮಾಡಲಾಗಿದೆ. ಇನ್ನು ಆರೋಪಿತ ಕದ್ದ ಹಣದಿಂದ ಕದ್ದಿದ್ದ ಡಿಯೋ ಬೈಕ್ ಮತ್ತು ಕೃತ್ಯಕ್ಕೆ ಬಳಸಿದ್ದ ಎರಡು ಫೋನ್ ಅನ್ನು ವಶಕ್ಕೆ ಪಡೆಯುವಲ್ಲಿ ಇನ್ಸ್ ಪೆಕ್ಟರ್ ಸಂತೋಷ್ ರಾಮ್ ನೇತೃತ್ವದ ತಂಡ ಯಶಸ್ವಿಯಾಗಿದೆ.

 ಹಣ ಕದೀಮರ ಪಾಲಾಗುವ ಮುನ್ನ ಎಚ್ಚರಿಕೆ ಅಗತ್ಯ

ಹಣ ಕದೀಮರ ಪಾಲಾಗುವ ಮುನ್ನ ಎಚ್ಚರಿಕೆ ಅಗತ್ಯ

*ನಿಮ್ಮ ಮೊಬೈಲ್ ಸಿಮ್ ಕಾರ್ಡ್‌ ಕಾರ್ಯನಿರ್ವಹಿಸುತ್ತಿಲ್ಲಎಂದು ತಿಳಿದ ಕೂಡಲೇ ಸಂಬಂಧಿಸಿದ ಸಿಮ್ ಸರ್ವೀಸ್ ಸೆಂಟರ್‍‌ಗೆ ಹೋಗಿ ಹೊಸ ಸಿಮ್ ಕಾರ್ಡ್‌ ಖರೀದಿಸುವುದು.

* ನಿಮ್ಮ ಮೊಬೈಲ್ ಪೋನ್ ಲಾಕ್ ಆಗಿದೆ , ಅಪ್ಲೀಕೇಷನ್ ಲಾಕ್ ಆಗಿದೆ. ಯಾರು ಏನು ಮಾಡಲಾರರು ಎಂಬ ತಪ್ಪು ಕಲ್ಪನೆಯಿಂದ ಎಲ್ಲೆಂದರಲ್ಲಿ ಮೊಬೈಲ್ ಫೋನ್ ಬಿಡದೆ ಅಥವಾ ಯಾರಿಗೂ ಮೊಬೈಲ್ ಕೊಡದೇ ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಉತ್ತಮ.

*ನಿಮ್ಮ ಮೊಬೈಲ್ ಫೋನ್ ಕಳೆದು ಹೋದಲ್ಲಿ ಅಥವಾ ಕಳ್ಳತನವಾದಲ್ಲಿ ತಡಮಾಡದೇ ನಿಮ್ಮ ಬ್ಯಾಂಕ್‌ಗೆ ಕರೆಯನ್ನು ಮಾಡಿ ನಿಮ್ಮ ಬ್ಯಾಂಕ್ ಖಾತೆಯನ್ನು ಬ್ಲಾಕ್ ಮಾಡಿಸಿ ಎಂದು ಪೊಲೀಸರು ತಿಳಿಸಿದ್ದಾರೆ.

Recommended Video

ಮನೆ ನಾಯಿ ಜೊತೆ ಟೈಮ್ ಪಾಸ್ ಮಾಡಿದ ಜಗ್ಗೇಶ್ | OneIndia Kannada

English summary
This report is a must read for people who think they are safe with money in a bank account. By paying money in the bank and giving your phone number, your account can be hacked without using any app including Phone Pay, Google Pay, WhatsApp Pay, Paytm. This is the tragic story of accused who had stolen a SIM card and spent lakhs of money, know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X