ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೇನು ಓಡಿಸಲು ಹೋಗಿ 32ನೇ ಮಹಡಿಯಿಂದ ಬಿದ್ದು ವ್ಯಕ್ತಿ ಸಾವು

|
Google Oneindia Kannada News

ಬೆಂಗಳೂರು, ಮಾರ್ಚ್ 4: ಜೇನು ಓಡಿಸಲು ಹೋಗಿ 32ನೇ ಮಹಡಿಯಿಂದ ಬಿದ್ದು ಕಾರ್ಮಿಕನೊಬ್ಬ ಮೃತಪಟ್ಟಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.

ಘಟನೆ ಅಮೃತ್‌ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ವೀರಣ್ಣಪಾಳ್ಯ ನಿವಾಸಿ ವಾಸುದಾಸ್ (21) ಮೃತ ಕಾರ್ಮಿಕ. ಈ ಕುರಿತು ಗೌರಿ ಕನ್‌ಸ್ಟ್ರಕ್ಷನ್ ಉಸ್ತುವಾರಿ ಸುನಿಲ್ , ಮೇಲ್ವಿಚಾರಕ ಕುಮಾರ್, ಗುತ್ತಿಗೆದಾರ ಗುರುದೇವ್ ಗೋಪಾ ಹಾಗೂ ದಿನೇಶ್ ಎಂಬುವರ ವಿರುದ್ಧ ನಿರ್ಲಕ್ಷ್ಯ ಪ್ರಕರಣದಡಿ ದೂರು ದಾಖಲಿಸಿಕೊಳ್ಳಲಾಗಿದೆ.

ಲಾಲ್‌ಬಾಗ್: ಜೇನು ದಾಳಿ ಕಡಿವಾಣಕ್ಕೆ ಸಿಬ್ಬಂದಿಗಳಿಗೆ ತರಬೇತಿ ಲಾಲ್‌ಬಾಗ್: ಜೇನು ದಾಳಿ ಕಡಿವಾಣಕ್ಕೆ ಸಿಬ್ಬಂದಿಗಳಿಗೆ ತರಬೇತಿ

ಹೆಬ್ಬಾಳ ಹೊರವರ್ತುಲ ರಸ್ತೆಯ ವೀರಣ್ಣ ಪಾಳ್ಯದ ಕ್ಲಾರಾಮೌಂಟ್‌ನ 40ನೇ ಅಂತಸ್ತಿನ ಅಪಾರ್ಟ್‌ಮೆಂಟ್ ಕಟ್ಟಡ ಕಾಮಗಾರಿ ನಡೆಯುತ್ತಿದೆ. ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಸಣ್ಣ ಪುಟ್ಟ ಕೆಲಸಗಳು ನಡೆಯುತ್ತಿವೆ. ಈ ಕಟ್ಟಡದಲ್ಲಿ ವಾಸುದೇವ್ ಸೇರಿದಂತೆ ಇನ್ನೂ ಮೂರ್ನಾಲ್ಕು ಮಂದಿ ಕೆಲಸ ಮಾಡುತ್ತಿದ್ದರು.

Man clearing beehives falls to death

ಕಾರ್ಮಿಕರು 40ನೇ ಅಂತಸ್ತಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಜೇನು ಹುಳುಗಳು ತೊಂದರೆ ನೀಡುತ್ತಿದ್ದವು. 32ನೇ ಮಹಡಿಯಲ್ಲಿ ಕಟ್ಟಿದ್ದ ಜೇನುಹುಳುಗಳನ್ನು ಸಂಜೆ ಬಳಿಕ ಅಲ್ಲಿಂದ ಓಡಿಸಬೇಕು ಎಂದು ಹೇಳಿದ್ದರು.

ಜೇನುಹುಳು ಓಡಿಸಲು ಸಿಬ್ಬಂದಿಗೆ ಸುರಕ್ಷತಾ ಸಾಧನಗಳನ್ನು ನೀಡಿರಲಿಲ್ಲ. ನಿರ್ಲಕ್ಷ್ಯದಿಂದ ಅವಘಡ ಸಂಭವಿಸಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

English summary
A 21-year-old construction labourer fell to his death from the 32nd floor of an underconstruction apartment complex while clearing beehives at Veerannapalya, near Manyata Tech Park, north Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X