ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹಿಳೆಯರ ಏಳ್ಗೆಗಾಗಿ ಶ್ರಮಿಸುವ ಸಂಘಕ್ಕೆ 30 ಲಕ್ಷ ರು. ವಂಚನೆ

ವ್ಯಕ್ತಿಯೊಬ್ಬನಿಂದ ಬನ್ನೇರುಘಟ್ಟದ ಮಹಿಳಾ ಸಂಘಟನೆಯೊಂದಕ್ಕೆ ಮೋಸ. ನಾರಿ ಶಕ್ತಿ ಎಂಬ ಮಹಿಳಾ ಸಂಘಟನೆಗೆ 30 ಲಕ್ಷ ರು. ಗಳ ಮೋಸ.

By ಒನ್ ಇಂಡಿಯಾ ನ್ಯೂಸ್ ಡೆಸ್ಕ್
|
Google Oneindia Kannada News

ಬೆಂಗಳೂರು, ಜುಲೈ 4: ಮಹಿಳೆಯರ ಏಳಿಗೆಗಾಗಿ ಶ್ರಮಿಸುತ್ತಿರುವ ಪ್ರಮುಖ ಸ್ವಯಂ ಸೇವಾ ಸಸ್ಥ 'ನಾರಿ ಶಕ್ತಿಗೆ ' ವ್ಯಕ್ತಿಯೋರ್ವ ಸುಮಾರು 30 ಲಕ್ಷ ರು.ಗಳಷ್ಟು ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಕಲಘಟಗಿಯಲ್ಲಿ ನೂರಾರು ಕೋಟಿ ವಂಚಿಸಿದ್ದ ಸಹೋದರರು ಅರೆಸ್ಟ್!ಕಲಘಟಗಿಯಲ್ಲಿ ನೂರಾರು ಕೋಟಿ ವಂಚಿಸಿದ್ದ ಸಹೋದರರು ಅರೆಸ್ಟ್!

ಬೆಂಗಳೂರಿನ ಬನ್ನೇರುಘಟ್ಟ ದ ಫ್ರಾನ್ಸಿಸ್ ಎಂಬಾತ ನಾರಿ ಶಕ್ತಿ ಗೆ ನೊಂದಾಯಿಸುವುದಾಗಿ ಸುಳ್ಳು ಹೇಳಿ ಸುಮಾರು 5ಸಾವಿರ ಮಹಿಳೆಯರಿಂದ ಹಣ ವಸೂಲಿ ಮಾಡಿ ತಲೆ ತಪ್ಪಿಸಿಕೊಂಡಿದ್ದಾನೆ .

Man Cheated Rs. 30 lakhs to a Non-Government Women Organization

ನಾರಿ ಶಕ್ತಿ ಸದಸ್ತ್ವಕಾಗಿ ಹಣ ಕೊಟ್ಟ ಮಹಿಳೆಯರು ಇದೀಗ ಸ್ವಯಂ ಸೇವಾ ಸಂಸ್ಥೆಯ ಬಾಗಿಲು ಬಡಿಯುತ್ತಿದ್ದಾರಿ ಸುಮಾರು 30 ಲಕ್ಷದೊಂದಿಗೆ ಪರಾರಿಯಾಗಿರುವ ಫ್ರಾನ್ಸಿಸ್ ಬಹಳಷ್ಟು ಮಹಿಳೆಯರಿಗೆ ತಾನು ಹಣವನ್ನು ಸಂಸ್ಥೆಗೆ ಕಟ್ಟಿರುವುದಾಗಿ ಹೇಳಿದ್ದಾನೆ ಆದರೆ ವಾಸ್ತವದಲ್ಲಿ ನಾರಿ ಶಕ್ತಿ ಎಂಬ ಹೆಸರಿನಲ್ಲಿ ಹುಟ್ಟುಹಾಕಿರುವ ಫ್ರಾನ್ಸಿಸ್ ಆ ಮೂಲಕ ವಂಚನೆ ನೆಡೆಸಿದ್ದಾನೆ ..

ನಾರಿ ಶಕ್ತಿ ಸ್ವಯಂ ಸೇವಾ ಸಂಸ್ಥೆಯ ಮುಖ್ಯಸ್ಥೆ ಸಫೀನ ಜೋಸೆಫ್ ಹೇಳುವಂತೆ ಫ್ರಾನ್ಸಿಸ್ ಕೇವಲ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಈ ಅವದಿಯಲ್ಲಿ ಸಂಸ್ಥೆಯ ಕಾರ್ಯ ಚಟುವಟಿಕೆಗಳ ಬಗ್ಗೆ ತಿಳಿದುಕೊಂಡು ಅಮಾಯಕ ಮಹಿಳೆಯರಿಗೆ ಸಂಸ್ಥೆಯಿಂದ ಸವಲತ್ತುಗಳನ್ನು ಕೊಡಿಸಿ ಕೊಡುವುದಾಗಿ ಅದಕ್ಕಾಗಿ ಸಂಸ್ಥೆಯ ಸದಸ್ಯತ್ವ ಪಡೆಯಬೇಕೆಂದು ಅಪಾರ ಪ್ರಮಾಣದ ಹಣ ವಸೂಲಿ ಮಾಡಿರುತ್ತಾನೆ ಈತ ಸಂಸ್ಥೆಯ ಚೆಕ್ಗಳನ್ನು ಕೂಡ ದುರುಪಯೋಗ ಮಾಡಿಕೊಂಡಿದ್ದಾನೆ ಎಂದು ಸಫೀನ ಜೋಸೆಫ್ ದೂರಿದ್ದಾರೆ.

ಶಿವಮೊಗ್ಗ ಕಾರ್ಪೋರೇಷನ್ ಬ್ಯಾಂಕ್ ನಲ್ಲಿ ರೈತರಿಗೆ ಹತ್ತು ಕೋಟಿ ವಂಚನೆಶಿವಮೊಗ್ಗ ಕಾರ್ಪೋರೇಷನ್ ಬ್ಯಾಂಕ್ ನಲ್ಲಿ ರೈತರಿಗೆ ಹತ್ತು ಕೋಟಿ ವಂಚನೆ

ಈತನ ವಿರುದ್ಧ ಹಲಸೂರು , ಬನ್ನೇರುಘಟ್ಟ , ಸಂಜಯ್ನಗರ , ಠಾಣೆಯಲ್ಲಿ ದೂರುಗಳ ದಾಖಲಾಗಿದ್ದರು ಪೋಲೀಸರು ಫ್ರಾನ್ಸಿಸ್ ನನ್ನು ಬಂಧಿಸುವಲ್ಲಿ ವಿಫಲರಾಗಿದ್ದಾರೆ.

ಫ್ರಾನ್ಸಿಸ್ ನನ್ನು ಕೂಡಲೇ ಬಂಧಿಸಿ ನ್ಯಾಯಾಲಯದ ವಿಚಾರಣೆಗೆ ಒಳಪಡಿಸಿ ತಮಗೆ ನ್ಯಾಯ ಒದಗಿಸಿಕೊಡಬೇಕೆಂದು ಹಣ ಕಳೆದುಕೊಂಡಿರುವ ಅಮಾಯಕ ಮಹಿಳೆಯರು ಕೇಳಿಕೊಂಡಿದ್ದಾರೆ ಹಾಗೆಯೇ ಈತನ ವಂಚನೆಯಿಂದಾಗಿ ಅಪಖ್ಯಾತಿಗೆ ಈಡಾಗಿರುವ ನಾರಿ ಶಕ್ತಿಯ ಹೆಸರನ್ನು ಕೂಡ ಈ ಪ್ರಕರಣದಿಂದ ಮುಕ್ತಗೊಳಿಸಬೇಕೆಂದು ಸಫೀನ ಜೋಸೆಫ್ ಕೇಳಿಕೊಂಡಿದ್ದಾರೆ.

English summary
A man has cheated about Rs. 30 lakhs to a Non-Government Women organisation named Naari Shankti which in functioning in Bannerughatta Police station limits.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X