ಫಾಸ್ಟ್ಟ್ಯಾಗ್ ಹೆಸರಲ್ಲಿ ಯುವಕರಿಗೆ 64 ಸಾವಿರ ವಂಚನೆ
ಬೆಂಗಳೂರು, ಆಗಸ್ಟ್ 16 : ಫಾಸ್ಟ್ಟ್ಯಾಗ್ ಹೆಸರಿನಲ್ಲಿ ಬೆಂಗಳೂರಿನ ಯುವಕನೊಬ್ಬರಿಗೆ 64 ಸಾವಿರ ರೂ. ವಂಚನೆ ಮಾಡಲಾಗಿದೆ. ಹಣ ಕಳೆದುಕೊಂಡ ಯುವಕ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾನೆ.
ನಿಮ್ಮ ಫಾಸ್ಟ್ಟ್ಯಾಗ್ ಕಾರ್ಡ್ ಅವಧಿ ಮುಗಿದಿದೆ ಎಂದು ಕರೆ ಮಾಡಿದ್ದ ವ್ಯಕ್ತಿ ಕಾರ್ಡ್ ಅವಧಿ ವಿಸ್ತರಣೆ ಮಾಡಲು ಸಹಾಯ ಮಾಡುವುದಾಗಿ ಹೇಳಿದ್ದ. ನಾವು ಕಳಿಸುವ ಲಿಂಕ್ನಲ್ಲಿ ವಿವರಗಳನ್ನು ಭರ್ತಿ ಮಾಡಿ ಎಂದು ತಿಳಿಸಿದ್ದ.
ಸೈಬರ್ ಕ್ರೈಂ; ನೋ ಬ್ರೋಕರ್ ಸಂಸ್ಥಾಪಕರ ವಿರುದ್ಧ ಎಫ್ಐಆರ್
ಫಾಸ್ಟ್ಟ್ಯಾಗ್ ಕಸ್ಟ್ಮೇರ್ ಕೇರ್ನಿಂದ ಹೇಳಿದ್ದ ವ್ಯಕ್ತಿಯ ಮಾತು ನಂಬಿದ ಯುವಕ ಲಿಂಕ್ಗೆ ವಾಹನದ ನಂಬರ್, ಬ್ಯಾಂಕ್ ಖಾತೆ ವಿವರಗಳನ್ನು ಭರ್ತಿ ಮಾಡಿ ಕಳಿಸಿದ್ದ.
ಲಾಕ್ ಡೌನ್ ಅವಧಿಯಲ್ಲಿ ಬೆಂಗಳೂರಲ್ಲಿ ಸೈಬರ್ ಅಪರಾಧ ಹೆಚ್ಚಳ
ಲಿಂಕ್ಗೆ ವಿವರ ಭರ್ತಿ ಮಾಡಿದ ಕೆಲವೇ ಕ್ಷಣಗಳಲ್ಲಿ ಯುವಕನ ಖಾತೆಯಿಂದ 2 ಬಾರಿ ಹಣ ಕಡಿತಗೊಂಡಿದೆ. ಖಾತೆಯಿಂದ ಒಟ್ಟು 64 ಸಾವಿರ ರೂ. ಹಣವನ್ನು ವಿತ್ ಡ್ರಾ ಮಾಡಲಾಗಿದೆ.
ಐಟಿ ವಲಯಕ್ಕೆ ಸಿಹಿ ಸುದ್ದಿ; ಸೈಬರ್ ಸೆಕ್ಯೂರಿಟಿ ಉದ್ಯೋಗಕ್ಕೆ ಹೆಚ್ಚಿದ ಬೇಡಿಕೆ
ವಂಚನೆಗೊಳಗಾದ ಮಾಹಿತಿ ತಿಳಿದ ಯುವಕ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.