• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹೆಂಡತಿ ನೋಡಲು ಬೆಂಗಳೂರಿಗೆ ಬಂದವನ ವಿರುದ್ಧ ಕ್ರಿಮಿನಲ್ ಕೇಸ್!

|

ಬೆಂಗಳೂರು, ಮೇ 26 : ಆತ ಕೊರೊನಾ ಹಾಟ್ ಸ್ಪಾಟ್ ಮುಂಬೈನಲ್ಲಿ ಚಾಲಕನ ಕೆಲಸ ಮಾಡುತ್ತಿದ್ದ. ಲಾಕ್‌ ಡೌನ್ ಘೋಷಣೆಯಾದ ಬಳಿಕ ಬೆಂಗಳೂರಿಗೆ ಬರಲಾಗದೆ ಪರಿತಪಿಸುತ್ತಿದ್ದ. ಲಾರಿಯೊಂದರಲ್ಲಿ ಕುಳಿತು ಪಾಸು ಇಲ್ಲದೇ ಬೆಂಗಳೂರಿಗೆ ಬಂದ. ಈಗ ಆತನ ವಿರುದ್ಧ ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲು ಮಾಡಿದ್ದಾರೆ.

   ಲಾಕ್‌ಡೌನ್ ನಂತರ ಹಾರಿದ ಮೊದಲ ವಿಮಾನದಲ್ಲಿನ ಕನ್ನಡದ ಗಗನಸಖಿ| Kannadati Air Hostess Explain Current situation

   ಮೊಹಮ್ಮದ್ ಅಯೂಬ್ ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಮನೆ ಹೊಂದಿದ್ದಾರೆ. ಮರಗಳನ್ನು ತುಂಬಿಕೊಂಡು ಹೋಗುತ್ತಿದ್ದ ಲಾರಿಯಲ್ಲಿ ಮುಂಬೈನಿಂದ ಬೆಂಗಳೂರಿಗೆ ಬಂದ ಈತನ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

   ಮುಂಬೈ ಟು ಉಡುಪಿ: ನಾಲ್ಕು ಜನರಿಗೆ ಕೊರೊನಾ ಪಾಸಿಟಿವ್

   ಹೊರ ರಾಜ್ಯದಿಂದ ಯಾರೇ ಬೆಂಗಳೂರು ನಗರಕ್ಕೆ ಬಂದರೆ ಕ್ವಾರಂಟೈನ್ ಕಡ್ಡಾಯವಾಗಿದೆ. ಮುಂಬೈನಂತಹ ಕೊರೊನಾ ಹಾಟ್ ಸ್ಪಾಟ್ ಪ್ರದೇಶದಿಂದ ನಗರಕ್ಕೆ ಬಂದರೂ ಮೊಹಮ್ಮದ್ ಅಯೂಬ್ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಿರಲಿಲ್ಲ.

   ಬಿಗ್ ನ್ಯೂಸ್; ಸರ್ಕಾರಿ ಕ್ವಾರಂಟೈನ್ ನಿಯಮ ಬದಲಿಸಿದ ಕರ್ನಾಟಕ

   ಕ್ವಾರಂಟೈನ್ ಮಾಡುತ್ತಾರೆ ಎಂಬ ಭಯದಿಂದ ಮನೆಗೆ ಬಂದವನೆ ಅಡಗಿ ಕುಳಿತಿದ್ದ. ಪೊಲೀಸ್ ಪೇದೆಯೊಬ್ಬರ ಸಮಯ ಪ್ರಜ್ಞೆಯಿಂದ ಮೊಹಮ್ಮದ್ ಅಯೂಬ್ ಸಿಕ್ಕಿಬಿದಿದ್ದಾನೆ. ಆರೋಗ್ಯ ಇಲಾಖೆ ಅಧಿಕಾರಿಗಳು ಆತನನ್ನು ಕ್ವಾರಂಟೈನ್‌ಗೆ ಹಾಕಿದ್ದು, ಆತನ ಜೊತೆ ಸಂಪರ್ಕದಲ್ಲಿ ಇದ್ದವರ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ.

   ದೆಹಲಿಯಿಂದ ಬಂದ ಸಹೋದರರ ಕ್ವಾರಂಟೈನ್ ವ್ಯವಸ್ಥೆ ಹೇಗಿದೆ ನೋಡಿ!

   ಹೆಂಡತಿ ನೋಡಲು ಬಂದ : ಲಾಕ್ ಡೌನ್ ಘೋಷಣೆಯಾದ ಬಳಿಕ ಮೊಹಮ್ಮದ್ ಅಯೂಬ್ ಮನೆಗೆ ಬರಲು ಆಗಿರಲಿಲ್ಲ. ಕಳೆದ ವಾರ ಲಾರಿಯಲ್ಲಿ ಮುಂಬೈನಿಂದ ಬೆಂಗಳೂರಿಗೆ ಬಂದಿದ್ದ. ಮಧ್ಯರಾತ್ರಿ ಲಾರಿಯಿಂದ ಇಳಿದು ಆತ ಮನೆಗೆ ಹೋಗುವುದನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರು ನೋಡಿದ್ದರು.

   ಮರುದಿನ ಬೆಳಗ್ಗೆ ಆ ಪ್ರದೇಶದಲ್ಲಿ ಪೊಲೀಸರು ಹುಡುಕಾಟ ನಡೆಸಿದಾಗ ಮೊಹಮ್ಮದ್ ಅಯೂಬ್ ಯಾವುದೇ ಪಾಸು ಇಲ್ಲದೇ, ಅಧಿಕಾರಿಗಳಿಗೆ ಮಾಹಿತಿ ನೀಡದೆ ಆಗಮಿಸಿರುವುದು ಬೆಳಕಿಗೆ ಬಂದಿದೆ. ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ.

   English summary
   Bengaluru police booked criminal case against Mohammed Ayub the driver who come to house in Bengaluru-Tumakuru road without informing to officials in the fear of quarantine. Mohammed Ayub come to Bengaluru in a truck to see wife.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more