ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: 'ಕನ್ನಡ ಗೊತ್ತಿಲ್ಲ' ಅಂದವನ ಹಲ್ಲು ಉದುರಿಸಿದರು

|
Google Oneindia Kannada News

ಬೆಂಗಳೂರು, ಜುಲೈ 27: ನಗರದಲ್ಲಿ 'ಕನ್ನಡ್ ಗೊತ್ತಿಲ್ಲ' ಎನ್ನುವ ಹೊರ ರಾಜ್ಯದವರ ಹಾವಳಿ ಗೊತ್ತಿರುವುದೇ. ಅವರಿಗೆ ಪ್ರೀತಿಯಿಂದ ನಮ್ಮ ಭಾಷೆ ಕಲಿಸುವ ಬದಲಿಗೆ ಬಲವಂತವಾಗಿ ಕನ್ನಡ ಹೇರಲು ಹೋಗಿ ಎಡವಟ್ಟು ಮಾಡಿದ್ದಾರೆ ಕೆಲವು ಮಂದಿ ಬೆಂಗಳೂರಿಗರು.

ನಗರದಲ್ಲಿ ಖಾಸಗಿ ಸಂಸ್ಥೆಯೊಂದರಲ್ಲಿ ಎಚ್‌ಆರ್‌ ಕನ್ಸಲ್‌ಟೆಂಟ್‌ ಆಗಿ ಕೆಲಸ ಮಾಡುತ್ತಿದ್ದ ಧೃವ ಗುಪ್ತಾ ಎಂಬುವರ ಮೇಲೆ ಹಲ್ಲೆ ನಡೆದಿದ್ದು, ಕನ್ನಡ ಮಾತನಾಡಲಿಲ್ಲ ಎಂಬ ಕಾರಣಕ್ಕೆ ಹಲ್ಲೆ ಮಾಡಲಾಗಿದೆ. ಜುಲೈ 24 ರಂದು ಆರ್‌ಟಿ ನಗರದ ಕಾರ್ಪೊರೇಷನ್ ಬ್ಯಾಂಕ್ ಬಳಿ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಗೌರಿಯ ತೆಕ್ಕೆಯಿಂದ ಓಡಿ ಬಂದ ನರಸಿಂಗರಾಯ ಮತ್ತೆಂದೂ ಅತ್ತ ಸುಳಿಯಲಿಲ್ಲ ಗೌರಿಯ ತೆಕ್ಕೆಯಿಂದ ಓಡಿ ಬಂದ ನರಸಿಂಗರಾಯ ಮತ್ತೆಂದೂ ಅತ್ತ ಸುಳಿಯಲಿಲ್ಲ

ಜುಲೈ 24 ರಂದು ರಾತ್ರಿ 11:30 ರ ವೇಳೆಗೆ ಧೃವ ಗುಪ್ತಾ ತನ್ನ ಇನ್ನಿಬ್ಬರು ಗೆಳೆಯರೊಂದಿಗೆ ಸಿಗರೇಟು ಕೊಳ್ಳಲೆಂದು ಕಾರ್ಪೊರೇಷನ್ ಬಳಿಯ ಅಂಗಡಿಯೊಂದಕ್ಕೆ ಹೋಗಿದ್ದಾರೆ. ಅಂಗಡಿಯವನೊಂದಿಗೆ ಹಿಂದಿಯಲ್ಲಿ ಮಾತನಾಡಿದ್ದಾರೆ, ಅಲ್ಲೇ ನಿಂತಿದ್ದ ಐದಾರು ಮಂದಿ ಗುಂಪಿಗೆ ಇದು ಇಷ್ಟವಾಗಿಲ್ಲ.

Man assulted in Bengaluru for not speaking in Kannada

ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬ ಧೃವ ಗುಪ್ತಾ ಅವರಿಗೆ ಕನ್ನಡದಲ್ಲಿ ಮಾತನಾಡುವಂತೆ ಹೇಳಿದ್ದಾನೆ. 'ನಾನು ಉತ್ತರ ಪ್ರದೇಶದ ಲಖನೌದವನು, ನನಗೆ ಕನ್ನಡ ಬರದು, ಈಗ ಕಲಿಯುತ್ತಿದ್ದೇನೆ' ಎಂದು ಧೃವ್ ಗುಪ್ತಾ ಹೇಳಿದ್ದಾರೆ, ಆಗ ಆ ವ್ಯಕ್ತಿಯು ಧೃ್ ಗುಪ್ತಾರನ್ನು ಕನ್ನಡದಲ್ಲಿ ಬೈಯಲು ಪ್ರಾರಂಭಿಸಿದ್ದಾರೆ.

ಸಣ್ಣ ಕಥೆಗಳ ಸರಣಿ: ಗೋಪಾಲ - ಲಕ್ಷ್ಮಿಯರ ದೂತನಾಗಿ ನರಸಿಂಗರಾಯಸಣ್ಣ ಕಥೆಗಳ ಸರಣಿ: ಗೋಪಾಲ - ಲಕ್ಷ್ಮಿಯರ ದೂತನಾಗಿ ನರಸಿಂಗರಾಯ

ಧೃವ್ ಗುಪ್ತಾ ಮತ್ತು ಆತನ ಗೆಳೆಯರು ಆ ವ್ಯಕ್ತಿಯನ್ನು ಸಮಾಧಾನ ಪಡಿಸಲು ಯತ್ನಿಸುತ್ತಿರುವಾಗ ಗುಂಪಿನಲ್ಲಿದ್ದ ಮತ್ತೊಬ್ಬ ಹೆಲ್ಮೆಟ್‌ನಿಂದ ಧೃವ್ ಗುಪ್ತಾರ ಮುಖಕ್ಕೆ ಹೊಡೆದಿದ್ದಾರೆ. ಹೊಡೆತಕ್ಕೆ ಧೃವ್ ಗುಪ್ತಾರ ಮೂಗಿನಲ್ಲಿ ರಕ್ತ ಬಂದಿದೆ. ಕೂಡಲೇ ಧೃವ್ ಗುಪ್ತಾರ ಗೆಳೆಯರಿಬ್ಬರು ಅವರನ್ನು ತಡೆಯಲು ಮುಂದಾಗಿದ್ದಾರೆ ಆದರೆ ಹೆಚ್ಚು ಜನವಿದ್ದ ಅವರು ಈ ಮೂವರ ಮೇಲೆರಗೆ ಹಲ್ಲೆ ನಡೆಸಿದ್ದಾರೆ. ಈ ಗಲಾಟೆಯಲ್ಲಿ ಧೃವ್ ಗುಪ್ತಾ ಅವರ ಹಲ್ಲು ಸಹ ಉದುರಿದ್ದು, ತುಟಿಗೆ ಪೆಟ್ಟಾಗಿದೆ.

English summary
A Uttar Pradesh man Druv Gupta assulted by a group in Benagaluru for not speaking in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X