ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಮಗಳ ಮೇಲೆ ತಂದೆಯಿಂದಲೇ ಅತ್ಯಾಚಾರ

By Ashwath
|
Google Oneindia Kannada News

ಬೆಂಗಳೂರು, ಜೂ.16: ತನ್ನ 18 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಹಾಸನ ಮೂಲದ ವ್ಯಕ್ತಿಯೊಬ್ಬನನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ.

ಮಹಾದೇವ ಶೆಟ್ಟಿ(44) ಬಂಧಿತ ಆರೋಪಿ. ಮೂಲತಃ ಹಾಸನ ಹೊಳೆ ನರಸೀಪುರದ ಮಹಾದೇವ ಶೆಟ್ಟಿ ಪತ್ನಿ ಮಗ, ಮಗಳ ಜೊತೆ ಗೋವಿಂದ ಪಾಳ್ಯದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ.

ಮಹಾದೇವ ಶೆಟ್ಟಿಯ ಪತ್ನಿ, ಮಗ, ಮಗಳು ಎಲೆಕ್ಟ್ರಾನಿಕ್ಸ್‌ ಸಿಟಿಯಲ್ಲಿರುವ ಸಿದ್ದ ಉಡುಪು ಕಾರ್ಖಾ‌ನೆಯಲ್ಲಿ ಕೆಲಸ ಮಾಡುತ್ತಿದ್ದು, ಪತ್ನಿ ಹಾಗೂ ಮಗ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಮನೆಯಲ್ಲಿ ಒಬ್ಬಂಟಿಯಾಗಿ ಇರುತ್ತಿದ್ದ ಮಗಳ ಮೇಲೆ ಆತ ಅತ್ಯಾಚಾರ ನಡೆಸುತ್ತಿದ್ದ. ಒಂದು ವೇಳೆ ಈ ವಿಚಾರವನ್ನು ಬೇರೆಯವರಿಗೆ ಹೇಳಿದರೆ ಕೊಲೆ ಮಾಡುವುದಾಗಿ ಮಗಳಿಗೆ ಬೆದರಿಸಿದ್ದ. ಹೀಗಾಗಿ ಮಗಳು ಯಾರೊಂದಿಗೂ ತಿಳಿಸಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.[ಅಪಾರ್ಟ್ ಮೆಂಟಿನಲ್ಲಿ ಅಟ್ಟಾಡಿಸಿ ಎಚ್ಆರ್ ಹತ್ಯೆ]

rape bangalore

ಕಳೆದ ಮೂರು ದಿನಗಳ ಹಿಂದೆ ಮಗಳು ತಾಯಿಯೊಂದಿಗೆ ವಿಚಾರ ತಿಳಿಸಿದ್ದಾಳೆ. ನಂತರ ಈ ವಿಚಾರವಾಗಿ ತಾಯಿ ಮತ್ತು ತಂದೆ ಜಗಳವಾಡಿದ್ದು ಶನಿವಾರ ಮಹಾದೇವ ಶೆಟ್ಟಿಯನ್ನು ಮನೆಯಿಂದ ಹೊರಗೆ ಕಳುಹಿಸಿದ್ದಾರೆ.

ಇದರಿಂದ ಸಿಟ್ಟಾದ ಮಹಾದೇವ ಶೆಟ್ಟಿ ಶನಿವಾರ ಸಂಜೆ ಮಗಳು ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ವೇಳೆ ದಾರಿ ಮಧ್ಯೆ ಅಡ್ಡಗಟ್ಟಿ ಸಾರ್ವಜನಿಕರ ಎದುರೇ ಲೈಂಗಿಕ ದೌರ್ಜ‌ನ್ಯ ನಡೆಸಲು ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಯುವತಿ ರಕ್ಷಣೆಗೆ ಕೂಗಿದಾಗ ಸಾರ್ವ‌ಜನಿಕರು ಯುವತಿಯನ್ನು ರಕ್ಷಿಸಿ ಹಿಗ್ಗಾಮುಗ್ಗಾ ಥಳಿಸಿ ಠಾಣೆಗೆ ಸೇರಿಸಿದ್ದಾರೆ.

ಮದ್ಯವ್ಯಸನಿಯಾಗಿರುವ ತಂದೆ ಪಾನಮತ್ತರಾಗಿ ಮನೆಗೆ ಬಂದು ನನ್ನನ್ನು ತಬ್ಬಿಕೊಳ್ಳುತ್ತಿದ್ದರು. ಗುಪ್ತಾಂಗವನ್ನು ಮುಟ್ಟಿ ದೌರ್ಜ‌ನ್ಯ ನಡೆಸುತ್ತಿದ್ದರು. ಅಲ್ಲದೇ ನನ್ನನ್ನು ಮದುವೆಯಾಗು ಎಂದು ಒತ್ತಾಯಿಸುತ್ತಿದ್ದರು. ಮೂರು ತಿಂಗಳಿನಿಂದ ನನ್ನ ಮೇಲೆ ಅತ್ಯಾಚಾರ ನಡೆಸಿದ್ದರು. ಅಲ್ಲದೇ ಅತ್ಯಾಚಾರ ವಿಚಾರವನ್ನು ಬಹಿರಂಗ ಪಡಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.

ಯುವತಿ ದೂರಿನ ಆಧಾರ ಹಿನ್ನಲೆಯಲ್ಲಿ ಅತ್ಯಾಚಾರ, ಅಪರಾಧ ಸಂಚು, ಹಲ್ಲೆ ಆರೋಪದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿ ಮಹಾದೇವ ಶೆಟ್ಟಿಯನ್ನು ಬಂಧಿಸಿದ್ದಾರೆ.

English summary
A man was arrested on Saturday for allegedly raping his 18-year-old daughter repeatedly over the past three months. The survivor works at a private garment factory in the city, while her 44-year-old father is a housekeeping worker at a factory in Electronics City. The family is from Holenarasipur, Hassan district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X