ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಕಲಿ ನೆಗಟಿವ್ ಕೋವಿಡ್ ರಿಪೋರ್ಟ್ ಕೊಡ್ತಿದ್ದ ವ್ಯಕ್ತಿ ಬಂಧನ

|
Google Oneindia Kannada News

ಬೆಂಗಳೂರು, ಮೇ. 13: ಹೊರ ರಾಜ್ಯಗಳಿಗೆ ಹೋಗುವ ಪ್ರಯಾಣಿಕರಿಗೆ ಬೋಗಸ್ ಕೊರೊನಾ ನೆಗಟಿವ್ ವರದಿ ನೀಡಿ ಹಣ ಪಡೆದು ಮೋಸ ಮಾಡುತ್ತಿದ್ದ ಕಿಲಾಡಿಯನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಉಪ್ಪಾರಪೇಟೆ ಸಮೀಪದಲ್ಲಿಯೇ ಅಂಗಡಿ ಇಟ್ಟುಕೊಂಡು ನಕಲಿ ಕೋವಿಡ್ ನೆಗಟಿವ್ ವರದಿ ನೀಡುತ್ತಿದ್ದ ಸಂಪತ್ ಲಾಲ್ ಬಂಧಿತ ಆರೋಪಿ. ಈತನ ಆಪ್ತ ತಲೆ ಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಕೊರೊನಾ ಸೋಂಕು ಹೆಚ್ಚಾದ ಬೆನ್ನಲ್ಲೇ ಸೆಮಿ ಲಾಕ್ ಡೌನ್ ಘೋಷಣೆ ಮಾಡಲಾಯಿತು. ಆನಂತರ ಪೂರ್ಣ ಲಾಕ್ ಡೌನ್ ನ್ನು ಸರ್ಕಾರ ಪ್ರಕಟಿತು. ಕೊರೊನಾ ಭೀತಿ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿದ್ದ ಹೊರ ರಾಜ್ಯದ ನಿವಾಸಿಗಳು ಹೊರ ಹೋಗಲು ಪ್ರಯತ್ನಿಸಿದರು. ರೈಲು ಪ್ರಯಾಣ ಮಾಡುವರಿಗೆ ಕೋವಿಡ್ ನೆಗಟಿವ್ ವರದಿ ಕಡ್ಡಾಯಗೊಳಿಸಿ ರೈಲ್ವೆ ಅಧಿಕಾರಿಗಳು ಆದೇಶ ಹೊರಡಿಸಿದ್ದರು. ಪಾಸಿಟಿವ್ ವರದಿ ಬಂದರೆ ಊರಿಗೆ ಹೋಗಲು ಸಾಧ್ಯವಾಗುತ್ತರಲಿಲ್ಲ. ಇದನ್ನು ಅರಿತಿದ್ದ ಸಂಪತ್ ಲಾಲ್ ತನ್ನ ಸಹಚರನ ಜತೆ ಸೇರಿಕೊಂಡು ಡಯೋಗ್ನಾಸ್ಟಿಕ್ ಲ್ಯಾಬ್ ಗಳ ಹೆಸರಿನಲ್ಲಿ ಲೆಟೆರ್ ಹೆಡ್ ಮಾಡುತ್ತಿದ್ದ. ಯಾವುದೋ ವೈದ್ಯರ ಹೆಸರಿನಲ್ಲಿ ನಕಲಿ ಸಹಿ ಮಾಡಿ ಅಗತ್ಯ ಇರುವವರಿಗೆ ನೆಗಟಿವ್ ವರದಿ ನೀಡಿ ಹಣ ಪೀಕುತ್ತಿದ್ದ. ಕಳೆದ ಹದಿನೈದು ದಿನದಿಂದ ಸುಮಾರು ಮಂದಿಯಿಂದ ಹಣ ಪೀಕಿದ್ದ. ಒಂದು ನಕಲಿ ನೆಗಟಿವ್ ವರದಿಗೆ 3 ರಿಂದ 4 ಸಾವಿರ ಹಣ ವಸೂಲಿ ಮಾಡುತ್ತಿದ್ದ.

Bengaluru: Man arrested for selling negative Covid reports

Recommended Video

ಅಗ್ರ ಸ್ಥಾನಕ್ಕೆ Pollard & ABD ಫೈಟ್ ! | Oneindia Kannada

ಈ ಕುರಿತು ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಉಪ್ಪಾರಪೇಟೆ ಪೊಲೀಸರು ಸಂಪತ್ ಲಾಲ್ ನನ್ನು ಬಂಧಿಸಿದ್ದಾರೆ. ಆತನ ಕಚೇರಿಯಲ್ಲಿ ನಕಲಿ ಕೋವಿಡ್ ನೆಗಟಿವ್ ವರದಿಗಳು, ಹಲವು ಕ್ಲಿನಿಕ್ ಹಾಗೂ ಡಯಾಗ್ನಸ್ಟಿಕ್ ಸೆಂಟರ್ ಗಳ ಸಂಪರ್ಕ ಸಂಖ್ಯೆಗಳನ್ನು ಪಡೆದು ಕೃತ್ಯ ಎಸಗಿರುವುದಕ್ಕೆ ಕೆಲವು ಸಾಕ್ಷಾಧಾರಗಳು ಸಿಕ್ಕಿವೆ. ಮೊದಲು ಟ್ರಾವೆಲ್ ಏಜೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ಸ ಸಂಪತ್ ರಾಜ್‌ಗೆ ಹೊರ ರಾಜ್ಯಗಳ ನಡುವಿನ ಬಸ್ ಸಂಚಾರ ಸ್ಥಗಿತ ಆಗಿರುವ ಬಗ್ಗೆ ಗೊತ್ತಿತ್ತು. ರೈಲು ಹಾಗೂ ವಿಮಾನ ಪ್ರಯಾಣಿಕರಿಗೆ ಕಡ್ಡಾಯ ನಕಲಿ ವರದಿ ಬೇಕಿರುವುದನ್ನು ತಿಳಿದ ಸಂಪತ್ ಲಾಲ್, ನಕಲಿ ವರದಿಗಳನ್ನು ತಯಾರಿಸಿ ಹಣ ಮಾಡುವ ದಂಧೆಯಲ್ಲಿ ತಡೊಗಿಸಿಕೊಂಡಿದ್ದ. ಈತನನ್ನು ಬಂಧಿಸಿದ್ದು, ಈತನ ಸಹಚರನಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ ಎಂ. ಪಾಟಿಲ್ ವರು ತಿಳಿಸಿದರು.

English summary
Upparpete police have been arrested a man who is providing fake covid reports to inter state passengers know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X