ಗೆಳತಿ ವಿಡಿಯೋ ಇಟ್ಟುಕೊಂಡು 3 ಲಕ್ಷಕ್ಕೆ ಬೇಡಿಕೆ; ಬಂಧನ
ಬೆಂಗಳೂರು, ಫೆಬ್ರವರಿ 23 : ಮಾಜಿ ಪ್ರೇಯಸಿಯ ಖಾಸಗಿ ವಿಡಿಯೋ ಇಟ್ಟುಕೊಂಡು 3 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಧ್ಯಪ್ರದೇಶದಲ್ಲಿದ್ದ ಆರೋಪಿ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದ.
ಬಂಧಿತ ಆರೋಪಿಯನ್ನು ದೀಪಕ್ ಸೇರ್ಕರ್ ಎಂದು ಗುರುತಿಸಲಾಗಿದೆ. ಮಧ್ಯಪ್ರದೇಶದ ಬೆತುಲ್ ಗ್ರಾಮದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಬೆಂಗಳೂರಿಗೆ ಕರೆತರುತ್ತಿದ್ದಾರೆ.
ಬಾಹುಬಲಿ ವಿಡಿಯೋ ಹಂಚಿಕೊಂಡ ಡೊನಾಲ್ಡ್ ಟ್ರಂಪ್
ಮಾಜಿ ಪ್ರೇಯಸಿ ಸ್ನಾನ ಮಾಡುವ ವಿಡಿಯೋವನ್ನು ಇಟ್ಟುಕೊಂಡಿದ್ದ ಆರೋಪಿ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದ. 3 ಲಕ್ಷ ರೂ. ಹಣವನ್ನು ಕೊಡದಿದ್ದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಹೇಳಿದ್ದ.
ವೈರಲ್ ವಿಡಿಯೋ ; ಭೂಮಿಗೆ ಬಂದ ಗಗನ ಯಾತ್ರಿಗೆ ಎಂಥ ಸ್ವಾಗತ
ವಿಡಿಯೋವನ್ನು ಯುವತಿಗೆ ಮೇಲ್ ಮಾಡಿದ್ದ ಆರೋಪಿ ಹಣ ಕಳಿಸದಿದ್ದರೆ ವಿಡಿಯೋವನ್ನು ಎಲ್ಲಾ ಕಡೆ ಹಾಕುವುದಾಗಿ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದ. ಯುವತಿ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಳು. ಆರೋಪಿಯನ್ನು ಮಧ್ಯಪ್ರದೇಶದಲ್ಲಿ ಬಂಧಿಸಲಾಗಿದೆ.
ಪ್ರೇಮಿಗಳ ದಿನ; ನಿತ್ಯಾನಂದ ಸ್ವಾಮಿ ವಿಡಿಯೋ ವೈರಲ್!
ಕೆ. ಆರ್. ಪುರ ಪೊಲೀಸರು ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚನೆ ಮಾಡಿದ್ದರು. ತನಿಖಾ ತಂಡ ಆರೋಪಿಯ ದೂರವಾಣಿ ಕರೆಯ ಜಾಡು ಹಿಡಿದು ಮಧ್ಯಪ್ರದೇಶದಲ್ಲಿ ಆತನನ್ನು ಬಂಧಿಸಿದ್ದಾರೆ.