ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಕಳ್ಳನ ಬಂಧನ- 32 ಬೈಕ್‌ ವಶಕ್ಕೆ

By Ashwath
|
Google Oneindia Kannada News

ಬೆಂಗಳೂರು, ಜೂ.30: ನಕಲಿ ಕೀ ಬಳಸಿ ದ್ವಿಚಕ್ರ ವಾಹನ ದೋಚುತ್ತಿದ್ದ ಕಳ್ಳನನ್ನು ಕಾಡುಗೋಡಿ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿ 20 ಲಕ್ಷ ರೂ. ಮೌಲ್ಯದ 32 ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಮಾರತ್‍ಹಳ್ಳಿ ಪವನ್ ಕುಮಾರ್ ರೆಡ್ಡಿ(19) ಬಂಧಿತ ಆರೋಪಿ. ಏಳು ತಿಂಗಳ ಕಾಲ ಗ್ಯಾರೇಜ್‌ನಲ್ಲಿ ಕೆಲಸ ಮಾಡಿದ್ದ ಇವನು ಬಳಿಕ ಬೈಕ್‌ ಕಳ್ಳತನ ಮಾಡಿ ಮಾರಾಟ ಮಾಡುವ ಕೆಲಸ ಮಾಡಿಕೊಂಡಿದ್ದ. ಖಚಿತ ಮಾಹಿತಿ ಮೇರೆಗೆ ಬೈಕ್‌ ಖರೀದಿಸುವ ಗ್ರಾಹಕರ ಸೋಗಿನಲ್ಲಿ ಪೊಲೀಸರು ತೆರಳಿ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಆರೋಪಿಯ ಬಂಧನದಿಂದಾಗಿ ಎಚ್‌.ಎ.ಎಲ್. ಪೊಲೀಸ್ ಠಾಣಾ ವ್ಯಾಪ್ತಿಯ 17 ಪ್ರಕರಣಗಳು, ಕಾಡುಗೋಡಿ ಪೊಲೀಸ್ ಠಾಣೆಯ ವ್ಯಾಪ್ತಿಯ ಒಂದು ದ್ವಿಚಕ್ರ ವಾಹನ ಕಳವು ಪ್ರಕರಣ ಮತ್ತು ನೆಲಮಂಗಲ ಪೊಲೀಸ್ ಠಾಣಾ ಸರಹದ್ದಿನಲ್ಲಿ ಕಳುವಾದ ಒಂದು ದ್ವಿಚಕ್ರ ವಾಹನ ಕಳವು ಪ್ರಕರಣ ಒಟ್ಟು 19 ಪ್ರಕರಣಗಳನ್ನು ಪತ್ತೆಯಾಗಿದೆ. ಉಳಿದ ವಾಹನಗಳ ವಾರಸುದಾರರ ಪತ್ತೆ ಕಾರ್ಯವನ್ನು ಪೊಲೀಸರು ಆರಂಭಿಸಿದ್ದಾರೆ.

ಈ ಎಲ್ಲಾ ಪ್ರಕರಣಗಳನ್ನು ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಡಾ.ಟಿ.ಡಿ. ಪವಾರ್ ಹಾಗೂ ಏರ್‌‌‌ಪೋರ್ಟ್‌ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಎಸ್.ಹೆಚ್.ದುಗ್ಗಪ್ಪ ರವರುಗಳ ಮಾರ್ಗದರ್ಶನದಲ್ಲಿ ಕಾಡುಗೋಡಿ ಪೊಲೀಸ್ ಠಾಣೆಯ ಪೊಲೀಸ್ ಇನ್‌‌ಸ್ಪೆಕ್ಟರ್‌ ಸಿ. ಬಾಲಕೃಷ್ಣ ಹಾಗೂ ಪಿ.ಎಸ್.ಐ ಪ್ರದೀಪ್ ಸಿಂಗ್, ಎ.ಎಸ್.ಐ ರಾಜಣ್ಣ ಹಾಗೂ ಸಿಬ್ಬಂದಿಯವರಾದ ಚಂದ್ರಶೇಖರ್, ಶಿವಸ್ವಾಮಿ ಪ್ರಭುಗೌಡ, ಮಮತೇಶ್‍ಗೌಡ, ರಾಜಗೋಪಾಲ, ಗಂಗರಾಜು ಮತ್ತು ಮಂಜುನಾಥ.ಕೆ. ಕಾರ್ಯಾಚರಣೆ ನಡೆಸಿ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

Kadugodi police bike thives
English summary
The Kadugodi police arrested a bike lifter on Monday and recovered 32 two-wheelers worth Rs 20 lakh. Police have identified 19 cases and searching for the other owners.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X