ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಮೆಟ್ರೋ ನಿಲ್ದಾಣದಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ

|
Google Oneindia Kannada News

ಬೆಂಗಳೂರು, ಏಪ್ರಿಲ್ 10: ಯಲಚೇನಹಳ್ಳಿ ನಮ್ಮ ಮೆಟ್ರೋ ನಿಲ್ದಾಣದ ಕೇಬಲ್ ನಾಳ(ಡಕ್ಟ್‌)ದಲ್ಲಿ 65 ವರ್ಷದ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮಾರುತಿನಗರ ರಿಯಲ್ ಎಸ್ಟೇಟ್ ಬ್ರೋಕರ್ ಆಗಿರುವ ನಾಗರಾಜ್ ಅವರು ಏಪ್ರಿಲ್ 4 ರಂದು ಕೇಬಲ್ ನಾಳದೊಳಗೆ ಬಿದ್ದು ಗಾಯಗೊಂಡು ಸಾವನ್ನಪ್ಪಿದ್ದರೂ ಈ ಘಟನೆ ಏಪ್ರಿಲ್ 9 ರಂದು ಬೆಳಕಿಗೆ ಬಂದಿದೆ.

ಮೈಸೂರು ರಸ್ತೆ-ಕೆಂಗೇರಿ ನಡುವೆ ಪರೀಕ್ಷಾರ್ಥ ಸಂಚಾರ ಆರಂಭಿಸಿದ ನಮ್ಮ ಮೆಟ್ರೋ ಮೈಸೂರು ರಸ್ತೆ-ಕೆಂಗೇರಿ ನಡುವೆ ಪರೀಕ್ಷಾರ್ಥ ಸಂಚಾರ ಆರಂಭಿಸಿದ ನಮ್ಮ ಮೆಟ್ರೋ

ಹೌಸ್‌ಕೀಪಿಂಗ್ ಸಿಬ್ಬಂದಿ ಶುಚಿಗೊಳಿಸುತ್ತಿರುವಾಗ ಕೆಟ್ಟ ವಾಸನೆ ಬರುವುದನ್ನು ಗಮನಿಸಿದ್ದಾರೆ ಬಳಿಕ ಬಂದು ಬಾಗಿಲು ತೆರೆದಾಗ ಶವ ಇರುವುದು ಕಂಡು ಬಂದಿದೆ ತಕ್ಷಣ ನಮಗೆ ಮಾಹಿತಿ ನೀಡಿದ್ದಾರೆ ಎಂದು ಕುಮಾರಸ್ವಾಮಿ ಲೇಔಟ್ ಪೊಲೀಸರು ಮಾಹಿತಿ ನೀಡಿದ್ದಾರೆ.

Man, 65, Mistakes Metro Station Duct For Toilet, Falls To Death

ಏಪ್ರಿಲ್ 4 ರಂದು ಸಂಜೆ ನಾಗರಾಜ್ ಮೆಟ್ರೋ ನಿಲ್ದಾಣಕ್ಕೆ ಬಂದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ , ಅದೇ ಸಮಯದಲ್ಲಿ ಅವರು ಇನ್ನೊಬ್ಬ ವ್ಯಕ್ತಿಯೊಂದಿಗೆ ಎಸ್ಕಲೇಟರ್ ಪ್ರವೇಶಿಸಿದ್ದರು.

ನಾಗರಾಜ್ ಅವರ ಕುಟುಂಬ, ಅವರ ಪತ್ನಿ ಸೇರಿದಂತೆ ಇಬ್ಬರೂ ಮದ್ಯವ್ಯಸನಿಗಳು ಹಾಗೂ ಇಬ್ಬರಿಗೂ ಮಧುಮೇಹವಿತ್ತು ಎಂಬುದು ತಿಳಿದುಬಂದಿದೆ. ಹಾಗಾಗಿ ಪ್ರತಿ ಗಂಟೆಗೆ ಎರಡು ಬಾರಿಯಾದರೂ ಮೂತ್ರ ವಿಸರ್ಜಿಸಬೇಕಿತ್ತು, ಅವರು ಕೊಳವೆಯನ್ನು ಶೌಚಾಲಯ ಎಂದು ಭಾವಿಸಿ ಅಲ್ಲಿಗೆ ಹೋಗಿದ್ದರು ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿದೆ.

Recommended Video

ಇವತ್ತಿಂದ ರಾತ್ರಿ ಬೇಕಾಬಿಟ್ಟಿ ಓಡಾಡಿದ್ರೆ ಪೊಲೀಸ್ ಏನ್ ಮಾಡ್ತಾರೆ ಗೊತ್ತಾ..? | Oneindia Kannada

ಇದನ್ನು ಅಸಹಜ ಸಾವು ಎಂದು ಪ್ರಕರಣ ದಾಖಲಿಸಲಾಗಿದೆ, ಆದರೆ ಭದ್ರತಾ ಸಿಬ್ಬಂದಿ ಲೋಪದಿಂದಲೇ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

English summary
The body of a 65-year-old man was found in a highly decomposed state on Friday in the duct of the Yelachenahalli metro station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X