ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಡಿಯೋ: ಮಲ್ಲೇಶ್ವರದ ರಸ್ತೆಯಲ್ಲಿ ನಡೆಯಲಾಗದು, ಭರತನಾಟ್ಯವೇ ಮಾಡಬೇಕು!

|
Google Oneindia Kannada News

ಬೆಂಗಳೂರು, ಅಕ್ಟೋಬರ್ 22: ಮಲ್ಲೇಶ್ವರದ 16ನೇ ಕ್ರಾಸ್‌ನ ರಸ್ತೆ ದಾಟಲು ನಡೆಯಲಾಗದು ಅಲ್ಲಿ ಭರತನಾಟ್ಯವೇ ಮಾಡಬೇಕು!

ಮಲ್ಲೇಶ್ವರ್ 16ನೇ ಕ್ರಾಸ್‌ನ ರಸ್ತೆಗೆ ಫುಟ್‌ಪಾತ್‌ ಬೇಕು ಎಂದು ವಿನೂತನವಾಗಿ ಮತ್ತು ಪರಿಣಾಮಕಾರಿಯಾಗಿ ಪ್ರತಿಭಟಿಸುವ ತಂಡವೊಂದು ಭರತನಾಟ್ಯ ಮಾಡಿಕೊಂಡು ರಸ್ತೆ ದಾಟುವ ಮೂಲಕ ತಮ್ಮ ಆಗ್ರಹವನ್ನು ಮಂಡಿಸಿದ್ದಾರೆ.

ಬೆಂಗಳೂರು : ರೋಡ್ ರೋಲರ್ ಕದಿಯಲು ವಿಫಲ ಯತ್ನ!ಬೆಂಗಳೂರು : ರೋಡ್ ರೋಲರ್ ಕದಿಯಲು ವಿಫಲ ಯತ್ನ!

ಮಲ್ಲೇಶ್ವರ ಸೋಷಿಯಲ್‌ ಎಂಬ ತಂಡವು ಈ ವಿನೂತನ ಪ್ರತಿಭಟನೆಯ ರೂವಾರಿಗಳಾಗಿದ್ದು, ರಸ್ತೆಯ ಇಕ್ಕೆಲಗಳಲ್ಲಿ ಇಟ್ಟಿರುವ ಕಲ್ಲುಗಳು, ತೂತಾಗಿರುವ ಮೋರಿಯ ಸ್ಲಾಬ್‌ಗಳ ಮೇಲೆ ಭರತನಾಟ್ಯ ಮಾಡುತ್ತಾ ರಸ್ತೆ ದಾಟುತ್ತಿರುವ ವಿಡಿಯೋ ಗಮನ ಸೆಳೆಯುತ್ತಿದೆ.

Malleshwaram social video protest against BBMP

ನೀರು, ಒಳಚರಂಡಿ ಸಂಪರ್ಕಕ್ಕೆ ರಸ್ತೆ ಅಗೆಯಲು ಬಿಬಿಎಂಪಿ ಅನುಮತಿ ಕಡ್ಡಾಯನೀರು, ಒಳಚರಂಡಿ ಸಂಪರ್ಕಕ್ಕೆ ರಸ್ತೆ ಅಗೆಯಲು ಬಿಬಿಎಂಪಿ ಅನುಮತಿ ಕಡ್ಡಾಯ

#footpathbeku ಎಂಬ ಹ್ಯಾಷ್‌ಟ್ಯಾಗ್ ಅಡಿಯಲ್ಲಿ ಈ ರೀತಿಯ ವಿನೂತನ ಪ್ರತಿಭಟನೆಯನ್ನು ಈ ತಂಡ ಮಾಡಿದೆ. ಫುತ್‌ ಪಾತ್ ಅತಿಕ್ರಮಣ, ಫುತ್‌ಪಾತ್‌ ಮೇಲೆ ಗಾಡಿಗಳನ್ನು ನಿಲ್ಲಿಸುವುದು, ಫುಟ್‌ಪಾತ್‌ ಅನ್ನು ಸರಿಯಾಗಿ ನಿರ್ವಹಣೆ ಮಾಡದಿರುವುದು ಹೀಗೆ ಎಲ್ಲದನ್ನು ಈ ತಂಡ ಭರತನಾಟ್ಯದ ಮೂಲಕವೇ ಬಿಬಿಎಂಪಿ ಗಮನಕ್ಕೆ ತಂದಿದೆ.

ಢಂ ಢಂ ಪಟಾಕಿನ ಧಾಂ ಧೂಂ ಅಂತ ಎಲ್ಲೆಂದರಲ್ಲಿ ಮಾರುವಹಾಗಿಲ್ಲ! ಢಂ ಢಂ ಪಟಾಕಿನ ಧಾಂ ಧೂಂ ಅಂತ ಎಲ್ಲೆಂದರಲ್ಲಿ ಮಾರುವಹಾಗಿಲ್ಲ!

ಪ್ರೀತಿ ಸುಂದರಯ್ಯನ್, ಸೌಮ್ಯಾ ತಂತ್ರಿ ಅವರುಗಳು ಭರತನಾಟ್ಯ ಪ್ರದರ್ಶನ ಮಾಡಿದ್ದಾರೆ. ಶ್ರೀರಾಮ್, ರಾಘವೇಂದ್ರ ಪೈ, ಸುದರ್ಶನ್ ಗೋಪಾಲನ್ ಅವರುಗಳು ವಿಡಿಯೋದಲ್ಲಿ ನಟಿಸಿದ್ದಾರೆ. ಶ್ರೀರಾಮ್ ಅವರ ನಿರ್ದೇಶನ ಮತ್ತು ಸಂಗೀತದ ಈ ವಿಡಿಯೋ 'ಮಲ್ಲೇಶ್ವರಂ ಸೋಷಿಯಲ್‌'ನ ಪ್ರಯತ್ನ.

English summary
Malleshwaram social asking to make footpath in Malleshwaram 16nth cross by a unique video protest. Malleshwaram social uploaded a video in twitter in which young girls performing Bharathnatyam on the street.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X