ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು; ಮಲ್ಲೇಶ್ವರದಲ್ಲಿ ವ್ಯಾಪಾರಿಗಳಿಂದ ಲಾಕ್ ಡೌನ್

|
Google Oneindia Kannada News

ಬೆಂಗಳೂರು, ಜುಲೈ 01 : ಬೆಂಗಳೂರು ನಗರದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಮಂಗಳವಾರ ಸಹ ನಗರದಲ್ಲಿ ಹೊಸದಾಗಿ 503 ಪ್ರಕರಣಗಳು ದಾಖಲಾಗಿವೆ. ಇಂದಿನಿಂದ ನಗರದಲ್ಲಿ ಸ್ವಯಂ ಲಾಕ್ ಡೌನ್ ಜಾರಿಗೆ ಬರುತ್ತಿದೆ.

ನಗರದ ವಾಣಿಜ್ಯ ವಹಿವಾಟಿನ ಪ್ರಮುಖ ಕೇಂದ್ರ ಮಲ್ಲೇಶ್ವರ. ಜುಲೈ 1 ರಿಂದ 6ರ ತನಕ ಮಲ್ಲೇಶ್ವರದಲ್ಲಿ ಸ್ವಯಂ ಲಾಕ್ ಡೌನ್ ಜಾರಿಯಲ್ಲಿರುತ್ತದೆ. ಮಲ್ಲೇಶ್ವರದ ವ್ಯಾಪಾರಿಗಳ ಸಂಘ ಸ್ವಯಂ ಲಾಕ್ ಡೌನ್ ಮಾಡುವ ತೀರ್ಮಾನ ಕೈಗೊಂಡಿದೆ.

ಲಾಕ್ ಡೌನ್ ನಿಯಮ ಉಲ್ಲಂಘನೆ: ಪ್ರತಿಷ್ಠಿತ ಹೋಟೆಲ್ಸ್ ವಿರುದ್ಧ ಕೇಸ್ಲಾಕ್ ಡೌನ್ ನಿಯಮ ಉಲ್ಲಂಘನೆ: ಪ್ರತಿಷ್ಠಿತ ಹೋಟೆಲ್ಸ್ ವಿರುದ್ಧ ಕೇಸ್

ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಯಲು ಸ್ವಯಂ ಲಾಕ್ ಡೌನ್ ಮೊರೆ ಹೋಗಲಾಗಿದೆ. ವ್ಯಾಪಾರಿಗಳು ಅಂಗಡಿಗಳನ್ನು ಬಂದ್ ಮಾಡಲಿದ್ದಾರೆ ಎಂದು ಸಂಘದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸಾಮಾಜಿಕ ನಿಯಮ ಪಾಲನೆ ಮಾಡಬೇಕಾದ ಕಾರಣ ಸಭೆಯನ್ನು ಕರೆಯದೇ ಪ್ರಕಟಣೆ ಹೊರಡಿಸಲಾಗಿದೆ.

ಕೊರೊನಾ ಲಸಿಕೆ ಹೆಸರಲ್ಲಿ ಬೆಂಗಳೂರು ಉದ್ಯಮಿಗೆ ವಂಚನೆ! ಕೊರೊನಾ ಲಸಿಕೆ ಹೆಸರಲ್ಲಿ ಬೆಂಗಳೂರು ಉದ್ಯಮಿಗೆ ವಂಚನೆ!

Malleshwaram Imposes Self Lock Down Till July 6

ಈಗಾಗಲೇ ಕರ್ನಾಟಕ ಸರ್ಕಾರ ಜುಲೈ 4ರ ಭಾನುವಾರ ಸಂಪೂರ್ಣ ಲಾಕ್ ಡೌನ್ ಜಾರಿಯಲ್ಲಿರಲಿದೆ ಎಂದು ಹೇಳಿದೆ. ಉಳಿದ ದಿನಗಳು ಮಲ್ಲೇಶ್ವರದಲ್ಲಿ ಅಂಗಡಿಗಳು ಮುಚ್ಚಿರಲಿವೆ. ಬಸವನಗುಡಿಯ ಡಿಜಿವಿ ರಸ್ತೆಯಲ್ಲಿ ಸಹ ವ್ಯಾಪಾರಿಗಳು ಸ್ವಯಂ ಲಾಕ್ ಡೌನ್‌ಗೆ ಮುಂದಾಗಿದ್ದಾರೆ.

ಮತ್ತೆ 15 ದಿನ ಸಂಪೂರ್ಣ ಲಾಕ್ ಡೌನ್; ಸುಳಿವು ಕೊಟ್ಟ ಸಿಎಂ ಮತ್ತೆ 15 ದಿನ ಸಂಪೂರ್ಣ ಲಾಕ್ ಡೌನ್; ಸುಳಿವು ಕೊಟ್ಟ ಸಿಎಂ

ಮಲ್ಲೇಶ್ವರದ ವ್ಯಾಪಾರಿಗಳ ಸಂಘ ಅಂಗಡಿ, ಶೋರಂ, ಟ್ರೇಡರ್ಸ್ ಸೇರಿದಂತೆ ವಾಣಿಜ್ಯ ಚಟುವಟಿಕೆಗಳನ್ನು ಬಂದ್ ಮಾಡಿ ಸ್ವಯಂ ಲಾಕ್ ಡೌನ್‌ಗೆ ಬೆಂಬಲ ನೀಡಬೇಕು. ಕೊರೊನಾ ವೈರಸ್ ಸೋಂಕು ಹರಡುವುದನ್ನು ತಪ್ಪಿಸಲು ಕೈ ಜೋಡಿಸಬೇಕು ಎಂದು ವ್ಯಾಪಾರಿಗಳಲ್ಲಿ ಮನವಿ ಮಾಡಿದೆ.

English summary
Bengaluru Malleshwaram Commercial Forum decides to close down their business due to rising Coronavirus cases in city. Stall will be closed from July 1 to July 6, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X