ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಮಲೆಗಳಲ್ಲಿ ಮದು ಮಗಳು' ಆಗಮನಕ್ಕೆ ಕಲಾಗ್ರಾಮ ಸಜ್ಜು

|
Google Oneindia Kannada News

ಬೆಂಗಳೂರು, ಡಿಸೆಂಬರ್ 21 : ರಾಷ್ಟ್ರಕವಿ ಕುವೆಂಪು ಅವರ 'ಮಲೆಗಳಲ್ಲಿ ಮದುಮಗಳು' ಕಾದಂಬರಿಯ ರಂಗಪ್ರವೇಶಕ್ಕೆ ರಾಜಧಾನಿ ಮತ್ತೆ ಸಜ್ಜಾಗುತ್ತಿದೆ.

ಡಿ 12ರಿಂದ ರಂಗ ಶಂಕರ ಯುವ ನಾಟಕೋತ್ಸವಡಿ 12ರಿಂದ ರಂಗ ಶಂಕರ ಯುವ ನಾಟಕೋತ್ಸವ

ಮೈಸೂರು ಹಾಗೂ ಬೆಂಗಳೂರಿನಲ್ಲಿ ಈಗಾಗಲೇ ಸಾಕಷ್ಟು ಪ್ರದರ್ಶನ ನೀಡಿದ ನಾಟಕ ಬೆಂಗಳೂರು ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ಕಲಾಗ್ರಾಮದಲ್ಲಿ ಡಿ.29 ರಿಂದ ಜನವರಿ 31 2018ರ ವರೆಗೆ 100 ನೇ ರಂಗ ಪ್ರದರ್ಶನ ನೀಡಲು ವೇದಿಕೆ ಸಜ್ಜಾಗಿದೆ. ಪ್ರತಿ ಸೋಮವಾರ, ಬುಧವಾರ, ಶುಕ್ರವಾರ ಮತ್ತು ಶನಿವಾರ ರಾತ್ರಿ 8 ರಿಂದ ಬೆಳಗ್ಗೆ 6 ರವರೆಗೆ ಒಟ್ಟು 9 ಗಂಟೆಗಳ ಕಾಲ ನಾಟಕ ನಡೆಯಲಿದೆ.

Malegalalli Madumagalu Drama is Back to Bengaluru

ರಾಷ್ಟ್ರೀಯ ನಾಟಕ ಶಾಲೆಯ ಬೆಂಗಳೂರು ಕೇಂದ್ರ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬೆಂಗಳೂರು ವಿಶ್ವವಿದ್ಯಾಲಯ ಸಂಯುಕ್ತ ಆಶ್ರಯದಲ್ಲಿ ನಡೆಯಲಿರುವ ನಾಟಕ ಪ್ರದರ್ಶನದಲ್ಲಿ ನಾಟಕ ಶಾಲೆಯ 20 ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಅಭಿನಯಿಸಲಿದ್ದಾರೆ. ದಕ್ಷಿಣ ಭಾರತದ ನಾನಾ ರಾಜ್ಯಗಳ 70 ಕ್ಕೂ ಹೆಚ್ಚು ಕಲಾವಿದರು ಪಾಲ್ಗೊಳ್ಳಲಿದ್ದಾರೆ.

ನೀನಾಸಂ ರಂಗ ತರಬೇತಿ ಡಿಪ್ಲೋಮಾಗೆ ಅರ್ಜಿ ಹಾಕುವುದು ಹೇಗೆ?ನೀನಾಸಂ ರಂಗ ತರಬೇತಿ ಡಿಪ್ಲೋಮಾಗೆ ಅರ್ಜಿ ಹಾಕುವುದು ಹೇಗೆ?

ಸಾಹಿತಿ ಕೆ.ವೈ ನಾರಾಯಣ ಸ್ವಾಮಿ ಮಲೆಗಳಲ್ಲಿ ಮದುಮಗಳು ಕೃತಿಯನ್ನು ರಂಗರೂಪಕ್ಕೆ ತಂದಿದ್ದರೆ ಸಿ. ಬಸವಲಿಂಗಯ್ಯ ಅವರು ನಿರ್ದೇಶಿಸಿದ್ದಾರೆ. ಮೂರು ವಿರಾಮಗಳ ಜೊತೆಗೆ 5 ರಂಗವೇದಿಕೆಯಲ್ಲಿ ಪ್ರಯೋಗಕ್ಕೆ ಸಿದ್ಧವಾಗಿದೆ. ಸುಮಾರು 9 ಗಂಟೆ ನಡೆಯುವ ನಾಟಕಕ್ಕೆ ನಾದ ಬ್ರಹ್ಮ ಹಂಸಲೇಖ ಅವರು ಸಂಗೀತ ನೀಡಿದ್ದಾರೆ.
ಯಾವತ್ತು ನಾಟಕ?: ಡಿಸೆಂಬರ್ 29, ಜನವರಿ 31
ಸಮಯ: 8.00 PM
ಟಿಕೆಟ್ ಎಲ್ಲಿ ಲಭ್ಯ: ಕಲಾಗ್ರಾಮ, ಮಲ್ಲತಹಳ್ಳಿ (ಬೆಂಗಳೂರು ವಿಶ್ವವಿದ್ಯಾಲಯ ಹಿಂಭಾಗ) ಆನ್ ಲೈನ್ ಬುಕ್ಕಿಂಗ್: ಬುಕ್ ಮೈಶೋ.ಕಾಂನಲ್ಲಿ 249 ರೂ.ಗೆ ಟಿಕೇಟ್ ಲಭ್ಯವಿದೆ.

English summary
The popular Malegalalli Madumagalu Drama is back in Bengaluru from 29th December till 31 January 2018.. Seventy performers from all the South Indian states including the students of the NSD Bengaluru Centre join hands to stage this 9-hour-long play through the night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X