ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಲಾಗ್ರಾಮಕ್ಕೆ ಮತ್ತೆ ಬಂದ ಮಲೆಗಳಲ್ಲಿ ಮದುಮಗಳು

By Mahesh
|
Google Oneindia Kannada News

ಬೆಂಗಳೂರು, ಫೆ,2: ರಾಷ್ಟ್ರಕವಿ ಕುವೆಂಪು ವಿರಚಿತ ಸುಮಾರು 752 ಪುಟಗಳ ಬೃಹತ್ ಕಾದಂಬರಿ ಮಲೆಗಳಲ್ಲಿ ಮದುಮಗಳು ನಾಟಕ ರೂಪ ಪಡೆದು ಜನಪ್ರಿಯತೆ ಗಳಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಈಗ ಮತ್ತೊಮ್ಮೆ ಕಲಾಗ್ರಾಮಕ್ಕೆ ಮದುಮಗಳು ಆಗಮಿಸುತ್ತಿದ್ದು, ಕಲಾರಸಿಕರು ಸ್ವಾಗತಿಸಲು ಸಿದ್ದರಾಗಿ.

ಮಲೆಗಳಲ್ಲಿ ಮದುಮಗಳು ಕೃತಿಯನ್ನು ರಂಗರೂಪಕ್ಕೆ ಸಾಹಿತಿ ಕೆ.ವೈ ನಾರಾಯಣ ಸ್ವಾಮಿ, ನಿರ್ದೇಶಿಸಿದವರು ಸಿ ಬಸವಲಿಂಗಯ್ಯ. ಮಲೆಗಳಲ್ಲಿ ಮದುಮಗಳು ನಾಟಕದಲ್ಲಿ 158 ಪಾತ್ರಗಳು, 58 ಸ್ಕ್ರೀನ್, 67 ಕಲಾವಿದರು ಭಾಗವಹಿಸಿದ್ದರು, ಪೀಟರ್ ಬ್ರೂಕ್ಸ್ ಅವರ ಮಹಾಭಾರತ ನಾಟಕವನ್ನು ಮೀರಿಸಿದ ಸಾಧನೆ ಮಾಡಿದೆ. [ಮಲೆಗಳಲ್ಲಿ ಮದುಮಗಳ ನೆನಪು ನಿರಂತರ]

ಮೈಸೂರಿನಲ್ಲಿ ಮೊದಲು ಪ್ರಯೋಗ ಕಂಡ ಈ ನಾಟಕವನ್ನು ಸುಮಾರು 600 ಜನ ವೀಕ್ಷಿಸಿದ್ದರು. ಕಲಾಗ್ರಾಮದಲ್ಲಿ ಪ್ರತಿ ಪ್ರದರ್ಶನದಲ್ಲೂ 1,100ಕ್ಕೂ ಅಧಿಕ ವೀಕ್ಷಕರು ಆಗಮಿಸಿದ್ದರು. ಮೂರು ವಿರಾಮಗಳ ಜೊತೆ ಸುಮಾರು 9 ಗಂಟೆ ನಡೆಯುವ ನಾಟಕಕ್ಕೆ ಸಂಗೀತ ನೀಡಿದವರು ನಾದ ಬ್ರಹ್ಮ ಹಂಸಲೇಖ.

Malegalalli Madumagalu is back in Bangalore

ಕನ್ನಡದ ಕಾದಂಬರಿಗಳಲ್ಲಿ ಮೇರು ಕೃತಿ ಎನಿಸಿರುವ ರಾಷ್ಟ್ರಕವಿ ಕುವೆಂಪು ಅವರ ಬೃಹತ್ ಕಾದಂಬರಿ ಮಲೆಗಳಲ್ಲಿ ಮದುಮಗಳು ಸುಮಾರು 9 ಗಂಟೆಯ ಅವಧಿಯಲ್ಲಿ ಕಲಾಗ್ರಾಮದ ಸುತ್ತಮುತ್ತ ಸುಮಾರು 5 ರಂಗವೇದಿಕೆಗಳಲ್ಲಿ ಪ್ರಯೋಗಕ್ಕೆ ಶೃಂಗಾರಗೊಳ್ಳುತ್ತಿದ್ದಾಳೆ.

ಕಾದಂಬರಿಯಲ್ಲಿ ಬರುವ ಸೊಂಬಾವಿ, ಮೇಗರವಳ್ಳಿ, ಲಕ್ಕುಂದ, ಹೂವಳ್ಳಿ, ತೀರ್ಥಹಳ್ಳಿ, ಹುಲಿಕಲ್ ಗುಡ್ಡ, ಸುತ್ತಮುತ್ತಲಿನ ಮಲೆನಾಡು ಪುನರ್ ಸೃಷ್ಟಿಗೊಂಡು ನಾಯಿಗುತ್ತಿ ಮೂಲಕ ಪ್ರೇಕ್ಷಕರನ್ನು ರಂಗಯಾನ ಅಥವಾ ರಂಗ ಪಯಣವನ್ನು ಕುಳಿತಲ್ಲೆ ಮನೋರಂಗದಲ್ಲಿ ಸೃಷ್ಟಿಸುವ ಸೃಜನಶೀಲ ಕ್ರಿಯೆಗೆ ರಂಗಾಯಣ ಒಂದು ಮತ್ತೆ ಈ ದೊಡ್ಡ ಹೆಜ್ಜೆಯಿಟ್ಟಿದೆ.

ಯಾವತ್ತು ನಾಟಕ?: ಫೆಬ್ರವರಿ 2015: 16,18.20.21.23.25.27.28.
ಮಾರ್ಚ್ 2.4.6.7.9.11.13.14.16.18,19,21
ಸಮಯ: 8.30 PM
ಟಿಕೆಟ್ ಎಲ್ಲಿ ಲಭ್ಯ: ಕಲಾಗ್ರಾಮ, ಮಲ್ಲತಹಳ್ಳಿ (ಬೆಂಗಳೂರು ವಿಶ್ವವಿದ್ಯಾಲಯ ಹಿಂಭಾಗ)
ಆನ್ ಲೈನ್ ಬುಕ್ಕಿಂಗ್: ಬುಕ್ ಮೈಶೋ.ಕಾಂನಲ್ಲಿ ಫೆ.3ರಿಂದ ಆರಂಭ.
ಟಿಕೆಟ್ ಬೆಲೆ : 200 ರು ಹಾಗೂ ವಿದ್ಯಾರ್ಥಿಗಳಿಗೆ 150 ರು

English summary
The third edition of the wildly popular Malegalalli Madumagalu is back in Bangalore from 16th February till 21st March 2015. Seventy performers from all the South Indian states including the students of the NSD Bengaluru Centre join hands to stage this 9-hour-long play through the night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X