ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಲಯಾಳಿಗಳೇ, ಮೊದಲು ಕನ್ನಡ ಕಲಿಯಿರಿ: ಸಚಿವ ರೆಡ್ಡಿ

By Srinath
|
Google Oneindia Kannada News

Malayalees in Karnataka should learn Kannada congress Ministers,
ಬೆಂಗಳೂರು, ನ. 5: ಕರ್ನಾಟಕದಲ್ಲಿರುವ ಮಲಯಾಳಿ ಒಕ್ಕೂಟ ಏರ್ಪಡಿಸಿದ್ದ ಸಮಾರಂಭದಲ್ಲಿ ಭಾಗವಹಿಸಿದ್ದ ರಾಜ್ಯದ ಇಬ್ಬರು ಸಚಿವರು 'ಮಲಯಾಳಿಗಳೇ, ಮೊದಲು ಕನ್ನಡ ಕಲಿಯುವಂತವರಾಗಿ' ಎಂದು ತಿಳಿಯಹೇಳಿದ್ದಾರೆ.

Confederation of Karnataka Malayalees Associations (CKMA) ಇತ್ತೀಚೆಗೆ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ಹಿರಿಯ ಸಚಿವರಾದ ರಾಮಲಿಂಗಾ ರೆಡ್ಡಿ ಮತ್ತು ಯುವ ಸಚಿವ ದಿನೇಶ್ ಗುಂಡೂರಾವ್ ಅವರು ಕರ್ನಾಟಕದಲ್ಲಿರುವ ಕೇರಳಿಗರಿಗೆ ಕನ್ನಡ ಕಲಿತುಕೊಳ್ಳುವಂತೆ ಸಲಹೆ ನೀಡಿದ್ದಾರೆ.

ಬೆಂಗಳೂರು ಉಸ್ತುವಾರಿ ಸಚಿವರೂ ಆದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಸಮಾರಂಭದಲ್ಲಿ ಮಾತನಾಡಿ ದೈನಂದಿನ ವ್ಯಾಪಾರ/ ವಹಿವಾಟಿನಲ್ಲಿ ಸರಾಗವಾಗಿ ವ್ಯವಹರಿಸುವಂತಾಗಲು ಮೊದಲು ಕನ್ನಡ ಕಲಿಯಿರಿ ಎಂದು ಕರೆ ನೀಡಿದ್ದಾರೆ.

ಇಡೀ ದೇಶದಲ್ಲೇ ಕೇರಳದಲ್ಲಿ ಸಾಕ್ಷರತೆ ಅಪಾರವಾಗಿದೆ. ಅಸಂಖ್ಯಾತ ಕೇರಳಿಗರು ನಮ್ಮ ರಾಜ್ಯದಲ್ಲಿಯೂ ಇದ್ದಾರೆ. ಅವರೆಲ್ಲ ತಮ್ಮದೇ ಆದ ಸ್ವಂತ ಉದ್ಯಮ ನಡೆಸಿಕೊಂಡು ಬಂದಿದ್ದಾರೆ. ಹೀಗಿರುವಾಗ ಕನ್ನಡ ಭಾಷೆಯನ್ನು ಕಲಿತು ಮಾತನಾಡಿದರೆ/ ಅರ್ಥ ಮಾಡಿಕೊಂಡರೆ ಅದರಿಂದ ನಿಮ್ಮ ವ್ಯಾಪಾರ ಮತ್ತಷ್ಟು ವೃದ್ಧಿಸಲಿದೆ ಎಂದು ಸಚಿವ ರಾಮಲಿಂಗಾ ರೆಡ್ಡಿ ಅಭಿಪ್ರಾಯಪಟ್ಟರು.

ತದನಂತರ ಮಾತನಾಡಿದ ಆಹಾರ ಸಚಿವ ದಿನೇಶ್ ಗುಂಡೂರಾವ್ ಅವರು ಕೇರಳಿಗರು ಕಠಿಣ ಶ್ರಮಜೀವಿಗಳು. "ಬಹಳಷ್ಟು ಮಲೆಯಾಳಿಗಳು ಕರ್ನಾಟಕದಲ್ಲಿ ನೆಲೆಸಿದ್ದಾರೆ. ಅವರೆಲ್ಲಾ ಕನ್ನಡ ನಾಡನ್ನು ತಮ್ಮ ಸ್ವಂತ ಊರಾಗಿ ಪರಿವರ್ತಿಸಿಕೊಂಡಿದ್ದಾರೆ/ಪರಿಗಣಿಸಿದ್ದಾರೆ. ನಾವೂ ನಿಮ್ಮನ್ನು ಕರ್ನಾಟಕದ ಜನರೆಂದೇ ಭಾವಿಸಿದ್ದೇವೆ. ನಿಮ್ಮಲ್ಲಿ ಯಾರಿಗೆ ಕನ್ನಡದಲ್ಲಿ ಮಾತನಾಡಲು ಬರುವುದಿಲ್ಲವೋ ಅವರು ಮೊದಲು ಕನ್ನಡ ಕಲಿಯುವಂತವರಾಗಿ. ಕನ್ನಡದಲ್ಲೇ ವ್ಯವಹರಿಸಿ. ಬೇರೊಂದು ರಾಜ್ಯಕ್ಕೆ ವಲಸೆ ಹೋದಾಗ ನೀವು ಆ ರಾಜ್ಯಕ್ಕೆ ಸಲ್ಲಿಸಬಹುದಾದ ಕನಿಷ್ಠ ಗೌರವ ಇದಾಗಿದೆ" ಎಂದು ಕಿವಿಮಾತು ಹೇಳಿದರು.

'ಕೇರಳ ಭವನ'ಕ್ಕೆ ನಿವೇಶನ ಬೇಕಂತೆ:
ಕೊನೆಯಲ್ಲಿ ಕರ್ನಾಟಕದಲ್ಲಿರುವ ಮಲಯಾಳಿಗಳ ಪರವಾಗಿ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿದ CKMA, 'ಬೆಂಗಳೂರಿನಲ್ಲೊಂದು 'ಕೇರಳ ಭವನ' ನಿರ್ಮಿಸಬೇಕಾಗಿದೆ. ಅದಕ್ಕೆ ನಿವೇಶನ ಕೊಡಿಸಿಕೊಡಿ' ಎಂದು ಕೋರಿದ್ದಾರೆ. ಮಾಜಿ ಸಚಿವ ಜೆ ಅಲೆಕ್ಸಾಂಡರ್ ಸರಕಾರಕ್ಕೆ ಈ ಮನವಿ ಪತ್ರ ಸಲ್ಲಿಸಿದರು.

English summary
Malayalees in Karnataka should learn Kannada congress Ministers. The two Ministers in Bangalore Ramalinga Reddy and Dinesh Gundu Rao have urged Keralites residing in the state to learn Kannada at the Confederation of Karnataka Malayalees Associations (CKMA) Meet at the Koramangala Indoor Stadium on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X