ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನ್ಯಾಷನಲ್​ ಕಾಲೇಜು ಮೈದಾನದಲ್ಲಿ ಮಣ್ಣಿನ ಗಣಪತಿ ಉಚಿತವಾಗಿ ಪಡೆಯಿರಿ

|
Google Oneindia Kannada News

Recommended Video

ನ್ಯಾಷನಲ್​ ಕಾಲೇಜು ಮೈದಾನದಲ್ಲಿ ಉಚಿತ ಮಣ್ಣಿನ ಗಣಪತಿ ವಿತರಣೆ | Oneindia Kannada

ಬೆಂಗಳೂರು, ಆಗಸ್ಟ್ 27: ಪರಿಸರ ಸ್ನೇಹಿ ಗೌರಿ ಗಣೇಶ ಮೂರ್ತಿಗಳ ಬಳಕೆ ಹೆಚ್ಚಿಸಲು ಈ ಬಾರಿ ಕೂಡಾ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮುಂದಾಗಿದೆ. ಇದಕ್ಕೆ ವಿದ್ಯಾರಣ್ಯ ಯುವಕ ಸಂಘ ಕೂಡಾ ಕೈಜೋಡಿಸಿದೆ.

ಗಣಪತಿ ತಯಾರಿಸಲು ಪ್ಲಾಸ್ಟರ್​ ಆಫ್ ಪ್ಯಾರೀಸ್ (ಪಿಒಪಿ) ಬಳಸುವುದನ್ನು ತಡೆಗಟ್ಟಲು ಅಗತ್ಯ ಕ್ರಮ ತೆಗೆದುಕೊಂಡರೂ ಹಾನಿಕಾರಕ ಬಣ್ಣಗಳ ಬಳಕೆ ಮಾಡುವುದು ಸಂಪೂರ್ಣವಾಗಿ ನಿಂತಿಲ್ಲ. ಇದಕ್ಕೆ ಪ್ರತಿಯಾಗಿ ಪರಿಸರ ಸ್ನೇಹಿ ಗಣಪನನ್ನು ತಯಾತರಿಸಿ, ಉಚಿತವಾಗಿ ನೀಡುವ ಮೂಲಕ ಜನ ಜಾಗೃತಿಯನ್ನು ಪ್ರತಿ ವರ್ಷ ಹಮ್ಮಿಕೊಳ್ಳಲಾಗಿದೆ.

ಗಣೇಶನ ಮೂರ್ತಿಯನ್ನು ನೀರಲ್ಲಿ ಮುಳುಗಿಸೋದು ಯಾಕೆ ಗೊತ್ತಾ? ಗಣೇಶನ ಮೂರ್ತಿಯನ್ನು ನೀರಲ್ಲಿ ಮುಳುಗಿಸೋದು ಯಾಕೆ ಗೊತ್ತಾ?

ಬೆಂಗಳೂರಿನ ನ್ಯಾಷನಲ್​ ಕಾಲೇಜು ಮೈದಾನದಲ್ಲಿ ಮಣ್ಣಿನ ಗಣಪತಿ ಮೂರ್ತಿಯನ್ನು ತಯಾರಿಸಲಾಗುತ್ತದೆ. ಒಂದೇ ಸ್ಥಳದಲಿ ಅತಿ ಹೆಚ್ಚು ಮಣ್ಣಿನ ಗಣೇಶ ತಯಾರಿಸಿದ ದಾಖಲೆ ನಿರ್ಮಿಸಲು ಈ ಬಾರಿ ಯತ್ನಿಸಲಾಗುತ್ತಿದೆ.

Make Your Own CLAY SEED GANESHA A Go-Green initiative to distribute free Ganesh idols

ದಿನಾಂಕ: ಆಗಸ್ಟ್ 27ರಿಂದ ಆಗಸ್ಟ್ 30, 2019ರ ಅವಧಿ
ಸಮಯ: ಸಂಜೆ 6.30 ರಿಂದ 8 ಗಂಟೆವರೆಗೆ
ಸ್ಥಳ: ನ್ಯಾಷನಲ್ ಕಾಲೇಜು ಆಟದ ಮೈದಾನ, ಬಸವನಗುಡಿ, ಬೆಂಗಳೂರು

ವಿಘ್ನನಾಶಕ ಗಣೇಶನ ಆರಾಧನೆಗೂ ಮುನ್ನ ತಿಳಿದಿರಲಿ ಈ ಸಂಗತಿ ವಿಘ್ನನಾಶಕ ಗಣೇಶನ ಆರಾಧನೆಗೂ ಮುನ್ನ ತಿಳಿದಿರಲಿ ಈ ಸಂಗತಿ

ಜೇಡಿಮಣ್ಣಿನಿಂದ ಗಣೇಶ ಮೂರ್ತಿಯನ್ನು ಏಕಕಾಲಕ್ಕೆ 3,000 ಮಂದಿ ತಯಾರಿಸುವ ಕಾರ್ಯಕ್ರಮ ಇದಾಗಿದ್ದು, ನ್ಯಾಷನಲ್​ ಕಾಲೇಜು ಮೈದಾನದಲ್ಲಿ ಮಣ್ಣಿನ ಗಣಪನನ್ನು ಸಿದ್ಧಪಡಿಸಿರುವ ಈ ಕಾರ್ಯಕ್ರಮಕ್ಕೆ ವಿವಿಧ ರಂಗದ ಗಣ್ಯರು, ಕಲಾವಿದರು ಕೈಜೋಡಿಸಲಿದ್ದಾರೆ.

Make Your Own CLAY SEED GANESHA A Go-Green initiative to distribute free Ganesh idols

ವರಸಿದ್ಧಿ ವಿನಾಯಕನ ವ್ರತಾಚರಣೆ ನಿಯಮ, ವಿಧಾನದ ಸಂಪೂರ್ಣ ಮಾಹಿತಿ ವರಸಿದ್ಧಿ ವಿನಾಯಕನ ವ್ರತಾಚರಣೆ ನಿಯಮ, ವಿಧಾನದ ಸಂಪೂರ್ಣ ಮಾಹಿತಿ

ಮಣ್ಣಿನಿಂದ ರೂಪು ತಾಳಿದ್ದು ಮತ್ತೆ ಮಣ್ಣನ್ನೇ ಸೇರಬೇಕು ಎಂಬ ನೀತಿಯೂ ಇದರಲ್ಲಿದೆ. ನಿರಾಕಾರವನ್ನು ಪೂಜಿಸಲು ಸಾಧ್ಯವಾಗದವರು ಸಾಕಾರ ದೇವರನ್ನಾಗಿ ಮೂರ್ತಿಯನ್ನು ಪೂಜಿಸುತ್ತಾರೆ. ಆದ್ದರಿಂದಲೇ ವಿವಿಧ ರೀತಿಯ ಮೂರ್ತಿಗಳನ್ನು ಮಾಡಿ ಅದರಲ್ಲಿ ದೇವರನ್ನು ಕಾಣುತ್ತೇವೆ. ಆದರೆ ಮಣ್ಣಿನಿಂದ ಮಾಡಿದ ಯಾವುದೇ ಮೂರ್ತಿಯನ್ನೇ ಆದರೂ ನೀರಿನಲ್ಲಿ ಮುಳುಗಿಸುವ ಮೂಲಕ ಅದು ಮತ್ತೆ ಮಣ್ಣು ಸೇರುವಂತೆ ಮಾಡುವಂತೆ ಪುರಾಣಗಳು ಹೇಳುತ್ತವೆ. ಇದು ಪರಿಸರ ಸ್ನೇಹಿ ಕೂಡಾ ಎಂದು ಆಯೋಜಕರು ಹೇಳಿದ್ದಾರೆ.

English summary
This festive season Vidyaranya Yuvaka Sangha presents "Make Your Own CLAY SEED GANESHA" A Go-Green initiative from 27th August 2019, at National College Grounds, Basavanagudi, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X