ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಷೇರುಮಾರುಕಟ್ಟೆ ನೆಪದಲ್ಲಿ ಮೋಸದ ಜಾಲ: ಮೂವರ ಬಂಧನ

|
Google Oneindia Kannada News

ಬೆಂಗಳೂರು ಮೇ 7: ಜನರು ತಮ್ಮ ಹಣವನ್ನು ಹೂಡಿಕೆ ಮಾಡಬೇಕು. ಹಣವನ್ನು ಲಾಭವಾಗಿ ಪರಿವರ್ತಿಸಬೇಕು. ಹಣವನ್ನು ಡಬಲ್ ಮಾಡಬೇಕು ಎಂದೆಲ್ಲಾ ಯೋಚನೆ ಮಾಡುತ್ತಾರೆ. ತಾವೂ ದುಡಿದು ಕೂಡಿಟ್ಟ ಹಣವನ್ನು ಬೇರೆ ಬೇರೆ ಕಡೆ ಹಣವನ್ನು ಹೂಡಿಕೆ ಮಾಡ್ತಾರೆ. ಇಂಥವರನ್ನೇ ಟಾರ್ಗೆಟ್ ಮಾಡಿಕೊಂಡು ಹಣವನ್ನು ಲಪಟಾಯಿಸಿ ಷೇರು ಮಾರುಕಟ್ಟೆಯಲ್ಲೂ ಹೂಡಿಕೆ ಮಾಡಿಸಿ ಅದರಲ್ಲೂ ಲಾಸ್ ಆಗುವಂತೆ ಮಾಡುತ್ತಿದ್ದ ಖತರ್ನಾಕ್ ಟೀಮ್ ಅನ್ನು ಈಶಾನ್ಯ ವಿಭಾಗದ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.

ಸ್ಟಾಕ್ ಮಾರ್ಕೆಟ್ ನಲ್ಲಿ ಇನ್ವೆಸ್ಟ್ ಮಾಡಿದರೇ ಹೆಚ್ಚು ಲಾಭವನ್ನು ಗಳಿಸಬಹುದು ಎಂದು ಬೇರೆ ಬೇರೆ ನಂಬರ್ ನಿಂದ ಕರೆಯನ್ನು ಮಾಡುತ್ತಿದ್ದ ಖದೀಮರ ಗ್ಯಾಂಗ್ ಅಮಾಯಕರನ್ನು ನಂಬಿಸತ್ತಿದ್ದರು. ಇವರ ಮಾತನ್ನು ಕೇಳಿ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯನ್ನು ಮಾಡಿದರೇ ಮೋಸ ಹೋಗೋದು ಖಚಿತವಾಗುತ್ತಿತ್ತು. ಈಗಾಗಲೇ ಈಶಾನ್ಯ ವಿಭಾಗದ CEN ಪೊಲೀಸರು ರೆಹಮತ್ ಉಲ್ಲಾ, ಮಲ್ಲಯ್ಯ ಸ್ವಾಮಿ, ದುರ್ಗಪ್ಪ ಎಂಬುವವರನ್ನು ಬಂಧಿಸಿದ್ದಾರೆ.

ಷೇರು ಮಾರುಕಟ್ಟೆಯಲ್ಲಿ ಹೂಡಿಕೆಗೆ ಟಿಪ್ಸ್..!

ಹಣವನ್ನು ಸ್ಟಾಕ್ ಮಾರುಕಟ್ಟೆಯಲ್ಲಿ ಇನ್ವೆಸ್ಟ್ ಮಾಡಿದರೆ ಮೇಕ್ ಇನ್ ಪ್ರಾಫಿಟ್ ಎಂಬ ಕಂಪನಿಯಿಂದ ಟಿಪ್ಸ್ ಗಳನ್ನು ನೀಡಲಾಗುತ್ತದೆ. ಅದರಿಂದ ಹೆಚ್ಚು ಲಾಭವನ್ನು ಗಳಿಸಬಹುದು ಎಂದು ಜನರನ್ನು ನಂಬಿಸಿದ್ದರು. ಅದರಂತೆ ಇನ್ವೆಸ್ಟ್ ಮಾಡಿ ಎರಡು ಪಟ್ಟು ಲಾಭವನ್ನು ಪಡೆಯಬಹುದು ಎಂದು ಪದೇ ಪದೇ ಫೋನ್ ಮಾಡಿ ನಂಬಿಸಿದ್ದರು.

Make it Profit ..! Fraud in Stock Market Name: 3 people arrest

ದೂರುದಾರನಿಗೆ ಲಕ್ಷ ಲಕ್ಷ ವಂಚಿಸಿದ್ದು ಹೇಗೆ..?

ಮೇಕ್ ಇನ್ ಪ್ರಾಫಿಟ್ ಗೆ ಇನ್ವೆಸ್ಟ್ ಮಾಡಿ ಸ್ಟಾಕ್ ಮಾರುಕಟ್ಟೆಯಿಂದ ಹೆಚ್ಚಿನ ಲಾಭ ಬರುವಂತೆ ಮಾಡುತ್ತೇವೆ ಎಂದು ದೂರುದಾರನನ್ನು ಆರೋಪಿಗಳು ನಂಬಿಸಿದ್ದರು. ಮೊದಲು ಮೇಕ್ ಇನ್ ಪ್ರಾಫಿಟ್ ನಲ್ಲಿ ಇನ್ವೆಸ್ಟ್ ಮೆಂಟ್ ನೆಪದಲ್ಲಿ ಹಣವನ್ನು ಹಾಕಿಸಿಕೊಳ್ಳುತ್ತಿದ್ದರು. ದೂರುದಾರರು ಮೊದಲು 2.15 ಲಕ್ಷ ರೂಪಾಯಿಯನ್ನು ಹಂತ ಹಂತವಾಗಿ ಆರೋಪಿಗಳ ಅಕೌಂಟಿಗೆ ವರ್ಗಾಯಿಸಿದ್ದರು. ಆ ಬಳಿಕ ಮೇಕ್ ಇನ್ ಪ್ರಾಫಿಟ್ ಕಂಪನಿಯಿಂದ ಮಾತನಾಡುತ್ತಿದ್ದೇವೆ. ನೀವು ಸ್ಟಾಕ್ ಮಾರ್ಕೆಟ್ ನಲ್ಲಿ ಹಣವನ್ನು ಹೂಡಿಕೆ ಮಾಡಿ 100% ಲಾಭ ಗ್ಯಾರಂಟಿ ಎಂದು ಹೇಳಿದ್ದರು. ಇವರು ಕೊಟ್ಟ ಸಲಹೆಯ ಮೇರೆಗೆ ದೂರುದಾರರು ಸ್ಟಾಕ್ ಮಾರುಕಟ್ಟೆಯಲ್ಲಿ 2.50 ಲಕ್ಷ ಹಣವನ್ನು ಹೂಡಿಕೆ ಮಾಡಿದ್ದರು. ವಿಚಿತ್ರವೆಂದರೇ ಯಾವುದೇ ಅನುಭವವಿಲ್ಲದೇ ಸುಖಾಸುಮ್ಮನೇ ಮೇಕ್ ಇನ್ ಪ್ರಾಫಿಟ್ ಕಂಪನಿ ಹೆಸರಿನಲ್ಲಿ ಸಲಹೆ ಕೊಟ್ಟ ಆರೋಪಿಗಳಿಂದ ಒಂದೇ ಒಂದು ರೂಪಾಯಿಯೂ ಲಾಭವಾಗದೇ 2.50 ಲಕ್ಷ ರೂಪಾಯಿಯನ್ನು ಸಹ ಕಳೆದುಕೊಂಡಿದ್ದಾರೆ. ಇದರಿಂದಾಗಿಯೇ ದೂರುದಾರ ಪುಂಡಲೀಕಪ್ಪ ಈಶಾನ್ಯ ವಿಭಾಗದ CEN ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು.

ಬಳ್ಳಾರಿಯಲ್ಲಿ ಸಿಕ್ಕಿ ಬಿದ್ದ ಆರೋಪಿಗಳು..!

ಪುಂಡಲೀಕಪ್ಪ ಎಂಬುವವರು ನೀಡಿದ್ದ ದೂರಿನ ಆಧಾರದಲ್ಲಿ ಈಶಾನ್ಯ ವಿಭಾಗದ ಸಿಇಎನ್ ಪೊಲೀಸರು ಆರೋಪಿಗಳಾದ

ಈಶಾನ್ಯ ವಿಭಾಗದ CEN ಠಾಣೆಯಲ್ಲಿ ಪ್ರಕರಣ ದಾಖಲು ರೆಹಮತ್ ಉಲ್ಲಾ, ಮಲ್ಲಯ್ಯ ಸ್ವಾಮಿ, ದುರ್ಗಪ್ಪ ಎಂಬುವವರನ್ನು ಬಳ್ಳಾರಿಯಿಂದ ಬಂಧಿಸಿ ಕರೆತಂದಿದ್ದಾರೆ. ಬಂಧಿತರಿಂದ 3 ಮೊಬೈಲ್, 6 ಸಿಮ್ ಕಾರ್ಡ್ ವಶಕ್ಕೆ ಪಡೆದಿದ್ದಾರೆ. ಇನ್ನು ಬಂಧಿತರು ಇದೇ ರೀತಿಯಲ್ಲಿ ಹತ್ತು ಹಲವು ಜನರಿಗೆ ಮೋಸ ಮಾಡಿರುವ ಸಂಶಯವಿದ್ದು ಈ ಬಗ್ಗೆ ಸಿಇಎನ್ ಪೊಲೀಸರು ಹೆಚ್ಚಿನ ತನಿಖೆಯನ್ನು ಮಾಡುತ್ತಿದ್ದಾರೆ.

Recommended Video

PSI ಕಿಂಗ್ ಪಿನ್ ಹೆಸರು ಹೇಳಿದ್ರೆ ಸರ್ಕಾರವೇ ಉರುಳಿ ಬೀಳುತ್ತೆ,HDK | Oneindia Kannada

ಸ್ಟಾಕ್ ಮಾರ್ಕೆಟ್ , ಷೇರು ವ್ಯವಹಾರ ಕುರಿತು ಸಮಗ್ರವಾದ ಮಾಹಿತಿಯನ್ನು ಹೊಂದಿರಬೇಕು. ಹೂಡಿಕೆಯನ್ನು ಮಾಡುವ ಸಂದರ್ಭ , ಕಂಪನಿ ಸೇರಿದಂತೆ ಹತ್ತು ಹಲವು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಹೂಡಿಕೆ ಮಾಡಬೇಕು. ಕಂಪನಿಯು ರಿಜಿಸ್ಟರ್ ಆಗಿದೆಯೇ, ಕಂಪನಿಯ ಪಾನ್ ಕಾರ್ಡ್ ಇದೆಯೇ ಎಂಬುದನ್ನು ಗಮನಿಸಬೇಕು. ಕಂಪನಿಯ ಹೆಸರಿನಲ್ಲಿರುವ ಗೂಗಲ್ ರಿವ್ಯೂ ಗಮನಿಸಬೇಕು, ಎಷ್ಟು ಜನ ರಿವ್ಯೂ ಕೆಟ್ಟಿದ್ದಾರೆ ಗಮನಿಸಬಹುದು ಕೆಲವೊಮ್ಮೆ ಆರೋಪಿಗಗಳೇ ತಮಗೆ ತಿಳಿದವರಿಂದ ಪಾಸಿಟಿವ್ ರಿವ್ಯೂ ಕೂಡ ಕೊಟ್ಟಿರುತ್ತಾರೆ. ಹೀಗಾಗಿ ರಿವ್ಯೂ ಎಷ್ಟು ಜನ ಕೊಟ್ಟಿದ್ದಾರೆ ಎಂಬುದು ಮುಖ್ಯವಾಗಲಿದೆ. ಇನ್ನು ಯಾರು ಪರ್ಸನಲ್ ಅಕೌಂಟ್ ಗಳಿಗೆ ಹಣವನ್ನು ವರ್ಗಾಯಿಸಬಾರದು. ಫೈನಲಿ ತಜ್ಞರ ಸಲಹೆಯನ್ನು ಪಡೆದು ಹೂಡಿಕೆ ಮಾಡುವುದು ಸೂಕ್ತ ಎಂದು ಫೋರನ್ಸಿಕ್ ತಜ್ಞ ಫನೀಂದರ್ ಅಭಿಪ್ರಾಯಪಟ್ಟಿದ್ದಾರೆ.

English summary
Arrested on charges of fraudulently investing in a stock market by investing in a company called Make It Profit,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X