• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜೀವನದಲ್ಲಿ ನಾವು ಎಷ್ಟು ಸೈಕಲ್ ಹೊಡೆದರೂ ಸಾಲದು!

|

ಬೆಂಗಳೂರು, ಜೂ. 16: ಬೆಂಗಳೂರಿನ ನಾಗರಿಕರಲ್ಲಿ ಶೇ. 1 ರಷ್ಟು ಜನರು ಪ್ರತಿದಿನ ತಮ್ಮ ಕಚೇರಿಗೆ ತೆರಳಲು ಸೈಕಲ್ ಅಥವಾ ಕಾಲ್ನಡಿಗೆ ಬಳಸಿದರೆ ಒಂದು ದಿನಕ್ಕೆ ಉಳಿತಾಯವಾಗುವ ಹಣವೆಷ್ಟು? ಇಂಥದ್ದೊಂದು ಪ್ರಶ್ನೆ ಎಲ್ಲರ ಮನಸ್ಸಿನಲ್ಲೂ ಒಂದೆಲ್ಲಾ ಒಂದು ಸಮಯದಲ್ಲಿ ಮೂಡಿಯೇ ಇರುತ್ತದೆ.

ಹೌದು.... ಕೇವಲ ಶೇ. 1 ರಷ್ಟು ಜನ ಪರಿಸರ ಪ್ರೇಮವನ್ನು ಅಳವಡಿಸಿಕೊಂಡರೆ ಒಂದು ದಿನಕ್ಕೆ 2.5 ಲಕ್ಷ ರೂ. ಉಳಿತಾಯ ಮಾಡಲು ಸಾಧ್ಯವಾಗುತ್ತದೆ.

ಬೆಂಗಳೂರು ಇಂಡಿಯನ್ ಇನ್ಸ್ಟಿಟ್ಯೂಟ್ ಆಪ್ ಸೈನ್ಸ್ ಈ ಬಗ್ಗೆ ಸಮೀಕ್ಷಾ ವರದಿಯೊಂದನ್ನು ಸಿದ್ಧಪಡಿಸಿ ನೀಡಿದೆ. ಭಾರತೀಯ ವಿಜ್ಞಾನ ಸಂಸ್ಥೆಯ ಅರ್ಬನ್ ವಿಭಾಗದ ಪ್ರೋ. ಅನೀಶ್ ಶರ್ಮಾ ನೇತೃತ್ವದಲ್ಲಿ ಸಮೀಕ್ಷೆ ಕೈಗೊಳ್ಳಲಾಗಿತ್ತು. ಕೇವಲ ಶೇ. 1 ರಷ್ಟು ಜನ ಪರಿಸರ ಪ್ರೇಮ ಅಳವಡಿಸಿಕೊಂಡರೆ ಹಣದ ಉಳಿತಾಯದೊಂದಿಗೆ ಅಪಘಾತಗಳ ಸಂಖ್ಯೆಯೂ ಕಡಿಮೆಯಾಗಲಿದೆ ಎಂದು ತಿಳಿಸಿದ್ದಾರೆ. [ಸೈಕಲ್ ಸವಾರಿ ಉತ್ತಮ ಆರೋಗ್ಯಕ್ಕೆ ರಹದಾರಿ]

ಸಮೀಕ್ಷೆ ಹೇಳುವಂತೆ ಶೇ. 50 ರಷ್ಟು ಬೆಂಗಳೂರಿಗರು ಕಾಲ್ನಡಿಗೆ ಮಾಡುತ್ತಾರೆ. ಆದರೆ ಇದು ಅವರ ಪ್ರಯಾಣದ ಒಂದು ಭಾಗವಾಗಿರುತ್ತದೆ. ಇನ್ನು ಕೇವಲ ಶೇ.4 ರಷ್ಟು ಜನ ಮಾತ್ರ ಸೈಕಲ್ ತುಳಿಯುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ.

ಹೆಂಡತಿಗೆ ಪ್ಲಾಟಿನಂ ರಿಂಗ್

ಟೆಕ್ಕಿ ಶಲೇನ್ ತೋಂಗಿಯಾ(35) ಕಳೆದ ನಾಲ್ಕು ವರ್ಷಗಳಿಂದ ಸೈಕಲ್ ತುಳಿದೇ ಕಚೇರಿ ಸೇರುತ್ತಿದ್ದಾರೆ. ಎಚ್ ಎಚ್ ಆರ್ ಲೇಔಟ್ ನಿಂದ ಮಹಾತ್ಮ ಗಾಂಧಿ ರಸ್ತೆಯ ಕಚೇರಿಗೆ ಪ್ರತಿ ದಿನ 28 ಕಿಮೀ ಸೈಕ್ಲಿಂಗ್ ಮಾಡುತ್ತಿದ್ದಾರೆ. ಪ್ರಯಾಣಕ್ಕೆ ಬಳಸುತ್ತಿದ್ದ ಹಣವನ್ನು ಉಳಿತಾಯ ಮಾಡಿರುವ ತೋಂಗಿಯಾ ಪ್ರೇಮಿಗಳ ದಿನದ ನೆನಪಿಗೆ ಹೆಂಡತಿಗೊಂದು ಪ್ಲಾಟಿನಂ ರಿಂಗ್ ತಂದುಕೊಟ್ಟಿದ್ದಾರೆ. ನನಗೆ ಹಣದ ಉಳಿತಾಯದೊಂದಿಗೆ ಉತ್ತಮ ಆರೋಗ್ಯವೂ ಸಿಕ್ಕಿದೆ ಎಂದು ಸೈಕ್ಲಿಂಗ್ ಲಾಭಗಳನ್ನು ತೋಂಗಿಯಾ ವಿವರಿಸಯತ್ತಾರೆ.[ನಿಮ್ಮ ಮಕ್ಕಳ ಶ್ವಾಸಕೋಶದ ಸ್ಥಿತಿ ಹೇಗಿದೆ?]

ಬಿಎಂಟಿಸಿಗೆ ಕೆಲವು ಸಲಹೆ

ಐಐಎಸ್ ಸಿ ಬಿಎಂಟಿಸಿಗೆ ಕೆಲವೊಂದು ಸಲಹೆ ನೀಡಲು ಮರೆಯುವುದಿಲ್ಲ. ಒಟ್ಟು 39 ಡಿಪೋದ ಬಸ್‌ ಗಳು ಮಹಾನಗರದಾದ್ಯಂತ ಸಂಚಾರ ಮಾಡುತ್ತವೆ. ಆದರೆ ಕೊನೆ ನಿಲ್ದಾಣ ತಲುಪುವ ವೇಳೆ ಬಸ್ ಖಾಲಿ ಖಾಲಿ. ಈ ರೀತಿ ಸುಮಾರು 31,893 ಕಿಮೀ ಸುಮ್ಮನೆ ಓಡಾಟ ಮಾಡುತ್ತವೆ. ಪರಿಣಾಮಕಾರಿ ಸೇವೆ ನೀಡುವ ಮೂಲಕ ಜನರನ್ನು ಸಾರ್ವಜನಿಕ ಸಾರಿಗೆ ಬಳಕೆ ಮಾಡಲು ಪ್ರೇರೇಪಿಸಬೇಕಿದೆ ಎಂದು ಸಲಹೆ ನೀಡುತ್ತದೆ.

ಮನೆ, ವಾಹನ ಮತ್ತು ಕಚೇರಿ

ಐಐಎಸ್ ಸಿನ ವರ್ಮಾ ಹೇಳುವಂತೆ ನಮ್ಮ ಬಳಿ ಯಾವ ವಾಹನವಿದೆ ಎಂಬುದನ್ನು ಆಧಾರವಾಗಿಟ್ಟುಕೊಂಡು ಬಾಡಿಗೆ ಮನೆ ಹುಡುಕುವ ಸಂಪ್ರದಾಯ ಬೆಳೆಯುತ್ತಿದೆ. ಕಚೇರಿಗೆ ಹತ್ತಿರದಲ್ಲಿ ಮನೆ ಲಭ್ಯವಿದ್ದರೂ ಕಾರು ಅಥವಾ ಬೈಕ್ ಇದ್ದರೆ ನಮಗಿಷ್ಟವಾದ ಏರಿಯಾದಲ್ಲೇ ಮನೆ ಹುಡುಕುತ್ತವೆ. ಈ ಸಂಪ್ರದಾಯದಿಂದ ಇಂಧನ ಅತಿ ಹೆಚ್ಚು ಬಳಕೆ ಮತ್ತು ಸಮಯದ ನಷ್ಟವನ್ನು ಮಾಡಿಕೊಳ್ಳುತ್ತೇವೆ.[ಬೆಂಗಳೂರಿನಲ್ಲಿ ನೀರಿಗೆ ಎಷ್ಟು ಹಣ ನೀಡುತ್ತೀರಿ?]

ಕಬ್ಬನ್ ಪಾರ್ಕ್ ನಲ್ಲಿ ಉಚಿತ ಸೈಕ್ಲಿಂಗ್

ಕಬ್ಬನ್ ಪಾರ್ಕ್ ನಲ್ಲಿ ವಾಹನ ಸಂಚಾರ ನಿಷೇಧ ಮಾಡಿದ ಮೇಲೆ ಸೈಕ್ಲಿಂಗ್ ಉತ್ತೇಜನಕ್ಕೆ ಅವಕಾಶ ನೀಡಲಾಗಿದೆ. ಬಿಬಿಎಂಪಿಯೇ ಸೈಕಲ್ ಗಳನ್ನು ಕೊಡಮಾಡುತ್ತಿದ್ದು ನಾಗರಿಕರು ಉಚಿತವಾಗಿ ಒಂದು ರೌಂಡ್ ಹೊಡೆದು ಬರಬಹುದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A recent IISc study , listing the benefits of this traditional method of mobility as both eco-friendly and economical, declared that demotorizing and pedestrianizing MG Road alone can help save lot of money. If 1% Bengalur citizens Walk Or Cycle To Work, The Benefit Is Rs 2.5L Per Day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more