ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಪೊಲೀಸರಿಗೆ ಶಕ್ತಿ ತುಂಬಿದ ಮಹೀಂದ್ರ

|
Google Oneindia Kannada News

ಬೆಂಗಳೂರು, ಮೇ 30 : ಬೆಳೆಯುತ್ತಿರುವ ಬೆಂಗಳೂರು ಮಹಾನಗರದ ಮೇಲೆ ಉಗ್ರರ ಕಣ್ಣಿದೆ. ನಗರದ ಕಾನೂನು ಸುವ್ಯವಸ್ಥೆ ಕಾಪಾಡುವುದು ಸವಾಲಿನ ಕೆಲಸವಾಗಿದೆ. ಸದ್ಯ, ಮಹೀಂದ್ರಾ ಬೆಂಗಳೂರು ಪೊಲೀಸರ ಜೊತೆ ಸೇರಿಕೊಂಡಿದ್ದು, ತುರ್ತು ಸಂದರ್ಭದಲ್ಲಿ ಅವರಿಗೆ ನೆರವಾಗಲಿದೆ.

2010ರಲ್ಲಿ ಮುಂಬೈ ಪೊಲೀಸ್ ಪಡೆಗೆ ಸೇರಿಕೊಂಡಿದ್ದ ಮಹೀಂದ್ರ ಮಾರ್ಕ್ಸ್‌ಮ್ಯಾನ್ (Mahindra Marksman) ಬುಲೆಟ್ ಫ್ರೂಪ್ ವಾಹನ ಬೆಂಗಳೂರಿನ ಪೊಲೀಸ್ ಪಡೆಗೆ ಹೊಸದಾಗಿ ಸೇರಿಕೊಂಡಿದೆ. ಗುಂಡಿನದಾಳಿ, ಸಣ್ಣ ಸ್ಫೋಟಗಳು, ಗ್ರನೇಡ್‌ ದಾಳಿಗಳು ನಡೆದರೂ ಈ ವಾಹನ ಸುರಕ್ಷಿತವಾಗಿರುತ್ತದೆ. [ಬೆಂಗಳೂರು : ಹೊಯ್ಸಳ ಜೀಪಿಗೆ ಸಿಸಿಟಿವಿ]

mahindra marksman

ಉಗ್ರ ದಾಳಿ, ಗಲಭೆಯಂತಹ ತುರ್ತು ಸಂದರ್ಭಗಳಲ್ಲಿ ಪ್ರತಿದಾಳಿಗಾಗಿ ಇದನ್ನು ಬಳಕೆ ಮಾಡಲಾಗುತ್ತದೆ. ರಿಯಲ್ ಟೈಂ ಕ್ಯಾಮರಾ, ಮೆಷಿನ್ ಗಣ್ ಮೌಂಟೆಡ್, ಏಳು ಕಡೆಯಿಂದ ಗುಂಡು ಹಾರಿಸಬಹುದಾದದ ಶಕ್ತಿಯನ್ನು ಈ ವಾಹನ ಹೊಂದಿದೆ. ವಾಹನದ ಒಳಭಾಗದಲ್ಲಿ ಕುಳಿತವರು ಎಲ್‌ಸಿಡಿ ಪರದೆ ಮೂಲಕ ಹೊರಗಿನ ದೃಶ್ಯವನ್ನು ನೋಡಬಹುದಾಗಿದೆ.

ಚಾಲಕ ಸೇರಿದಂತೆ ನಾಲ್ವರು ಈ ವಾಹನದಲ್ಲಿ ಪ್ರಯಾಣಿಸಬಹುದಾಗಿದೆ. ತುರ್ತು ಸಂದರ್ಭದಲ್ಲಿ ಪೊಲೀಸರು ಮತ್ತು ಅರೆ ಸೇನಾಪಡೆಯ ಸಿಬ್ಬಂದಿಗಳು ಈ ವಾಹನವನ್ನು ಉಪಯೋಗಿಸಲಿದ್ದಾರೆ. ಗಂಟೆಗೆ ಗರಿಷ್ಠ 120 ಕಿ.ಮೀ ವೇಗದಲ್ಲಿ ಚಲಿಸುವ ಶಕ್ತಿಯನ್ನು ಇದು ಹೊಂದಿದೆ.

bangalore police

2010ರಿಂದ ಮುಂಬೈ ಪೊಲೀಸರು ಇದನ್ನು ಉಪಯೋಗಿಸುತ್ತಿದ್ದು. ಈಗ ಇದು ಬೆಂಗಳೂರು ಪೊಲೀಸ್ ಪಡೆಯನ್ನು ಸೇರಿಕೊಂಡಿದೆ. ವಾಹನದ ಇಂಜಿನ್ ಮಾದರಿ ವಿವರ ಇಲ್ಲಿದೆ ನೋಡಿ. [ಬೆಂಗಳೂರು ಬಂದಿಳಿದ ಬುಲೆಟ್ ಫ್ರೂಪ್ ಗಾಡಿ]

police
English summary
Mahindra Marksman a bulletproof vehicle which provide protection to police forces against small arms fire and grenade attacks. Now, Marksman joined Bengaluru Police force.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X