ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಹೊಸ ವಸತಿ ಯೋಜನೆ ಆರಂಭಿಸಿದ ಮಹೀಂದ್ರಾ ಲೈಫ್ ಸ್ಪೇಸಸ್

|
Google Oneindia Kannada News

ಬೆಂಗಳೂರು, ಫೆಬ್ರವರಿ 28: ಮಹೀಂದ್ರಾ ಸಮೂಹದ ರಿಯಲ್ ಎಸ್ಟೇಟ್ ಮತ್ತು ಮೂಲಸೌಕರ್ಯ ಅಭಿವೃದ್ಧಿ ಕಂಪನಿಯಾದ ಮಹೀಂದ್ರಾ ಲೈಫ್‍ಸ್ಪೇಸ್ ಡೆವಲಪರ್ಸ್ ಲಿಮಿಟೆಡ್ ಇಂದು, ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ವಸತಿ ಯೋಜನೆಯನ್ನು ಅಭಿವೃದ್ಧಿಪಡಿಸುವ ಸಲುವಾಗಿ 7.89 ಎಕರೆ ಜಮೀನು ಸ್ವಾಧೀನಪಡಿಸಿಕೊಂಡಿದೆ. ಈ ಯೋಜನೆಯಲ್ಲಿ ಸುಮಾರು 5 ಲಕ್ಷ ಚದರ ಅಡಿ ಕಾರ್ಪೆಟ್ ಏರಿಯಾ ಇರಲಿದ್ದು, ಯೋಜನೆ 2022ನೇ ಹಣಕಾಸು ವರ್ಷದಲ್ಲಿ ಉದ್ಘಾಟನೆಗೊಳ್ಳಲಿದೆ.

ವಾಜರಹಳ್ಳಿ ಮೆಟ್ರೊ ನಿಲ್ದಾಣವು ಈ ಯೋಜನಾ ಸ್ಥಳದಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿದೆ. ಅಂತೆಯೇ ನೈಸ್ ರಸ್ತೆ ಜಂಕ್ಷನ್ 3 ಕಿಲೋಮೀಟರ್ ದೂರದಲ್ಲಿದೆ. ಕನಕಪುರ ರಸ್ತೆಯು ಬೆಂಗಳೂರಿನ ಪ್ರಮುಖ ಉದ್ಯೋಗ ತಾಣಗಳು ಎನ್ನಲಾದ ಬನ್ನೇರುಘಟ್ಟ, ಸಿಲ್ಕ್ ಬೋರ್ಡ್ ಮತ್ತು ಎಲೆಕ್ಟ್ರಾನಿಕ್ ಸಿಟಿ ಜತೆ ಒಳ್ಳೆಯ ಸಂಪರ್ಕ ರಸ್ತೆಗಳನ್ನು ಹೊಂದಿದೆ.

ಮಹೀಂದ್ರಾ ಲೈಫ್‍ಸ್ಪೇಸ್ ಡೆವಲಪರ್ಸ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರವಿಂದ್ ಸುಬ್ರಹ್ಮಣ್ಯನ್ ಈ ಬಗ್ಗೆ ವಿವರ ನೀಡಿ, "ಭಾರತದ ಅತ್ಯಂತ ಸ್ಥಿರ ರಿಯಲ್‍ಎಸ್ಟೇಟ್ ಮಾರುಕಟ್ಟೆಗಳಲ್ಲಿ ಬೆಂಗಳೂರು ಒಂದಾಗಿದ್ದು, ನಮ್ಮ ವಸತಿ ವ್ಯವಹಾರ ಪ್ರಗತಿಯ ಆದ್ಯತೆಯ ನಗರರವಾಗಿದೆ. ಸುಸ್ಥಿರವಾಗಿ ಅಭಿವೃದ್ಧಿ ಹೊಂದಿದ, ಬೆಂಗಳೂರಿನಲ್ಲಿ ಜಮೀನು ಖರೀದಿಸಿರುವ ನಮ್ಮ ಕ್ರಮ, ವಿಶ್ವಾಸಾರ್ಹ ಬ್ರಾಂಡ್‍ಗಳ ಗುಣಮಟ್ಟದ ವಸತಿ ಯೋಜನೆಗಳಿಗೆ ನಿರಂತರ ಬೇಡಿಕೆ ಮತ್ತು ತಕ್ಷಣವೇ ಮಾರಾಟವಾಗುವ ಕಟ್ಟಕಡೆಯ ಬಳಕೆದಾರರಿಂದ ಚಾಲಿತವಾದ ಬೇಡಿಕೆಯ ಮಾರುಕಟ್ಟೆಯಲ್ಲಿ ಮತ್ತಷ್ಟು ಆಳವಾಗಿ ಬೇರೂರುವ ನಮ್ಮ ಕಾರ್ಯತಂತ್ರಕ್ಕೆ ಅನುಗುಣವಾಗಿರುತ್ತದೆ" ಎಂದು ಬಣ್ಣಿಸಿದ್ದಾರೆ.

Mahindra Lifespaces adds a new residential project in Bengaluru

ಮಹೀಂದ್ರಾ ಲೈಫ್‍ಸ್ಪೇಸಸ್‍ನ ಬನ್ನೇರುಘಟ್ಟ ರಸ್ತೆಯ ವಸತಿ ಯೋಜನೆ "ವಿಂಡ್‍ಚಿಮ್ಸ್" ಪೂರ್ಣಗೊಂಡಿದ್ದು, ಬಹುತೇಕ ಎಲ್ಲ ಮಾರಾಟವಾಗಿವೆ. 365 ಮನೆಗಳನ್ನು ಈಗಾಗಲೇ ಹಸ್ತಾಂತರಿಸಲಾಗಿದೆ.

Recommended Video

ಕೈ ಕೊಟ್ಟ ಕೊರೊನಾ ವ್ಯಾಕ್ಸಿನ್‌ ಪೋರ್ಟಲ್‌..! ಸರ್ಕಾರದ ಅವ್ಯವಸ್ಥೆಗೆ ಹಿರಿಯನಾಗರಿಕರ ಬೇಸರ | Oneindia Kannada

ಮಹೀಂದ್ರಾ ಲೈಫ್‍ಸ್ಪೇಸ್ ಡೆವಲಪರ್ಸ್ ಲಿಮಿಟೆಡ್: 1994ರಲ್ಲಿ ಆರಂಭವಾದ ಮಹೀಂದ್ರಾ ಲೈಫ್‍ಸ್ಪೇಸ್ ಡೆವಲಪರ್ಸ್ ಲಿಮಿಟೆಡ್, 19.4 ಶತಕೋಟಿ ಡಾಲರ್ ಮೌಲ್ಯದ ಮಹೀಂದ್ರಾ ಸಮೂಹದ ರಿಯಲ್ ಎಸ್ಟೇಟ್ ಮತ್ತು ಮೂಲಸೌಕರ್ಯ ಅಭಿವೃದ್ಧಿ ಕಂಪನಿಯಾಗಿದೆ. ಇದು ಭಾರತದ ಸುಸ್ಥಿರ ನಗರೀಕರಣದ ಆರಂಭಿಕ ಸಂಸ್ಥೆಗಳಲ್ಲೊಂದಾಗಿದೆ. ಮಹೀಂದ್ರಾ ಲೈಫ್‍ಸ್ಪೇಸಸ್ ಮತ್ತು ಮಹೀಂದ್ರಾ ಹ್ಯಾಪಿನೆಸ್ ಬ್ರಾಂಡ್‍ನಡಿ ವಸತಿ ಅಭಿವೃದ್ಧಿಯ ಮೂಲಕ ಭಾರತದ ನಗರ ದೃಶ್ಯಾವಳಿಯನ್ನು ಪರಿವರ್ತಿಸಲು ಬದ್ಧವಾಗಿದೆ. ಹಾಗೂ ಸಮೂಹದ ಸಮಗ್ರ ನಗರಗಳು ಮತ್ತು ಕೈಗಾರಿಕಾ ಸಮುಚ್ಛಯಗಳನ್ನು ಮಹೀಂದ್ರಾ ವರ್ಲ್ಡ್ ಸಿಟಿ ಹಾಗೂ ಒರಿಜಿನ್ಸ್ ಫ್ರಮ್ ಮಹೀಂದ್ರಾ ವರ್ಲ್ಡ್ ಸಿಟಿ ಬ್ರಾಂಡ್‍ಗಳ ಮೂಲಕ ಪರಿವರ್ತನೆಗೆ ನಾಂದಿ ಹಾಡಿದೆ.

English summary
Mahindra Lifespace Developers Ltd., the real estate and infrastructure development arm of the Mahindra Group, today announced that it has acquired 7.89 acres of land to develop a residential project in Kanakpura Road, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X