ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಅಪಾರ್ಟ್‌ಮೆಂಟ್, ಪಿಜಿಗಳಿಗೆ ಬಿಬಿಎಂಪಿಯಿಂದ ಪ್ರತ್ಯೇಕ ಮಾರ್ಗಸೂಚಿ

|
Google Oneindia Kannada News

ಬೆಂಗಳೂರು, ಜನವರಿ 13: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಹಾಗೂ ಓಮಿಕ್ರಾನ್ ಸೋಂಕು ಪ್ರಕರಣ ಹೆಚ್ಚಳ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಗರದ ಅಪಾರ್ಟ್‌ಮೆಂಟ್, ನರ್ಸಿಂಗ್ ಕಾಲೇಜು, ಹಾಸ್ಟೆಲ್, ಪಿಜಿಗಳಿಗೆ ಪ್ರತ್ಯೇಕ ಸುತ್ತೋಲೆ ಹೊರಡಿಸಿದೆ.

ಕೊರೊನಾ ನಿಯಮಾವಳಿಗಳನ್ನು ತಪ್ಪದೆ ಪಾಲಿಸುವಂತೆ ಸುತ್ತೋಲೆಯಲ್ಲಿ ಸೂಚಿಸಲಾಗಿದ್ದು, ಎರಡು ಡೋಸ್ ಲಸಿಕೆ ಹಾಗೂ ಅಗತ್ಯ ಕ್ರಮ ತೆಗೆದುಕೊಳ್ಳಲು ತಾಕೀತು ಮಾಡಲಾಗಿದೆ. ಕೊರೊನಾ ಹೆಚ್ಚಳವಾದಲ್ಲಿ ತಕ್ಷಣವೇ ಸಂಬಂಧಪಟ್ಟ ಪಾಲಿಕೆ ಅಧಿಕಾರಿಗಳಿಗೆ ಮಾಹಿತಿ ರವಾನಿಸುವುದು ಕಡ್ಡಾಯ. ಕೊರೊನಾ ಮಿತಿ ಮೀರಿದರೆ ತಾತ್ಕಾಲಿಕವಾಗಿ ಕಾಲೇಜು, ಹಾಸ್ಟೆಲ್, ಪಿಜಿಗಳನ್ನು ಮುಚ್ಚಲು ಸೂಚನೆ ನೀಡಲಾಗಿದೆ.

ಬೆಂಗಳೂರು ನಗರದ ಕೊರೊನಾ ಹಾಟ್‌ಸ್ಪಾಟ್ ಆಗುತ್ತಿರುವ ಅಪಾರ್ಟ್‌ಮೆಂಟ್‌ಗಳ ಸಂಬಂಧವೂ ಮಹಾನಗರ ಪಾಲಿಕೆ ವಿಶೇಷ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಿದೆ.

Bengaluru; Mahanagara Palike Issued New Covid-19 Guidelines For Apartments, PG And Hostels

ಅಪಾರ್ಟ್‌ಮೆಂಟ್‌ಗಳಿಗೆ ವಿಶೇಷ ಮಾರ್ಗಸೂಚಿ
* ಬೆಂಗಳೂರು ನಗರದ ಎಲ್ಲಾ ಅಪಾರ್ಟ್‌ಮೆಂಟ್‌ ವಾಸಿಗಳ ದೇಹ ತಾಪಮಾನ ಚೆಕ್ ಮಾಡುವುದು ಕಡ್ಡಾಯ.

* ಅಪಾರ್ಟ್‌ಮೆಂಟ್‌ಗಳ ಸಾಮಾನ್ಯ ಪ್ರದೇಶಗಳನ್ನು ಅಗಾಗ್ಗೆ ಸ್ಯಾನಿಟೈಸ್ ಮಾಡಬೇಕು.

* ಪಾರ್ಕ್‌ಗಳಲ್ಲಿ ಓಡಾಡುವಾಗ CAB ಪಾಲಿಸುವುದು.

* ಲಸಿಕಾಕರಣ, ಪರೀಕ್ಷೆ ಹಾಗೂ ಮಹಾನಗರ ಪಾಲಿಕೆ ಕೊಡುವ ಸೂಚನೆಗಳನ್ನು ನಿವಾಸಿಗಳಿಗೆ ತಿಳಿಸಲು ವ್ಯವಸ್ಥೆ ಮಾಡುವುದು.

* ಅಪಾರ್ಟ್‌ಮೆಂಟ್‌ನ ಜಿಮ್, ಸ್ವಿಮ್ಮಿಂಗ್ ಪೂಲ್, ಕ್ರೀಡಾಂಗಣ ಬಂದ್ ಮಾಡುವುದು.

* ಅಪಾರ್ಟ್‌ಮೆಂಟ್‌ನಲ್ಲಿರುವ ಮಕ್ಕಳ ಮೇಲೆ ಪೋಷಕರು ಹೆಚ್ಚು ನಿಗಾವಹಿಸಬೇಕು.

* ಅಪಾರ್ಟ್‌ಮೆಂಟ್‌ನಲ್ಲಿ ಕಾರ್ಯಕ್ರಮ ಹಮ್ಮಿಕೊಂಡರೆ 50 ಮಂದಿಗಷ್ಟೇ ಅವಕಾಶ ನೀಡುವುದು.

* ಮನೆಗಳಲ್ಲಿನ ತ್ಯಾಜ್ಯಗಳನ್ನು ಶಿಸ್ತು ಬದ್ಧವಾಗಿ ವಿಲೇವಾರಿ ಮಾಡಬೇಕು.

* ಲಿಫ್ಟ್‌ಗಳಲ್ಲಿನ ಬಟನ್‌ಗಳನ್ನು ಬಳಕೆಗೆ ತಕ್ಕಂತೆ ಸ್ಯಾನಿಟೈಸ್ ಮಾಡಬೇಕು.

* ಸತತವಾಗಿ ಹೊರಗಡೆ ಹೋಗಿ ಬರುವ ನಿವಾಸಿಗಳಿಗೆ ಆಗಾಗ್ಗೆ ಕೊರೊನಾ ಪರೀಕ್ಷೆ ನಡೆಸಬೇಕು.

* ಫ್ಲಾಟ್ ಒಂದರಲ್ಲಿ ಮೂರಕ್ಕಿಂತ ಹೆಚ್ಚಿನ ಪ್ರಕರಣಗಳು ಪತ್ತೆಯಾದರೆ, ಇಡೀ ಮಹಡಿಯನ್ನು ಸೀಲ್‌ಡೌನ್ ಮಾಡಬೇಕು.

* ಒಂದು ಸೋಂಕು ಪತ್ತೆಯಾದರೆ, ಸೋಂಕು ಪತ್ತೆಯಾದ 100 ಮೀಟರ್ ಸುತ್ತಳತೆಯಲ್ಲಿರುವ ಎಲ್ಲವನ್ನೂ ಸೀಲ್‌ಡೌನ್ ಮಾಡಿ ಸ್ವಯಂ ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ಗಳೇ ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಬೇಕು.

* ಹತ್ತು ಅಥವಾ ಅದಕ್ಕೂ ಅಧಿಕ ಕೊರೊನಾ ಪ್ರಕರಣ ಪತ್ತೆಯಾದರೆ ಇಡೀ ಅಪಾರ್ಟ್‌ಮೆಂಟ್ ಸೀಲ್‌ಡೌನ್ ಮಾಡುವುದು.

* ಸೋಂಕು ಪತ್ತೆಯಾಗಿ ಕಂಟೋನ್ಮೆಂಟ್ ಝೋನ್ ಘೋಷಣೆಯಾದರೆ ಇಡೀ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಕೊರೋನಾ ಟೆಸ್ಟ್

* ಅಪಾರ್ಟ್‌ಮೆಂಟ್ ನಿವಾಸಿಗಳ ಸಂಬಂಧಿಕರು, ಗೆಳೆಯರು, ಡೆಲಿವರಿ ಬಾಯ್ ಮತ್ತು ಎಲ್ಲಾ ವಿಸಿಟರ್ಸ್‌ಗೂ ಎರಡು ಡೋಸ್ ಆಗಿದ್ದರೆ ಮಾತ್ರ ಪ್ರವೇಶ ನೀಡುವುದು.

* ಎಲ್ಲಾ ನಿವಾಸಿಗಳಿಗೂ ಎರಡು ಡೋಸ್ ಲಸಿಕೆ ಆಗುವಂತೆ ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ಗಳೇ ನೋಡಿಕೊಳ್ಳುವುದು.

ಕೊರೊನಾ 3ನೇ ಅಲೆ ಎದುರಿಸಲು ಸರ್ಕಾರ ಸಿದ್ಧ
ಸದ್ಯ ರಾಜ್ಯದ ಕೊರೊನಾ ಪರಿಸ್ಥಿತಿ ಬಗ್ಗೆ ಆರೋಗ್ಯ ಸಚಿವ ಕೆ. ಸುಧಾಕರ್ ಮಾಹಿತಿ ನೀಡಿದ್ದು, 219 ಮಿನಿ ಕ್ಲಸ್ಟರ್, 48 ಲಾರ್ಜ್ ಕ್ಲಸ್ಟರ್ ಇವೆ. 84 ಸಾವಿರ ಮೆಡಿಕಲ್ ಸಿಬ್ಬಂದಿ ಇದ್ದಾರೆ. 4 ಸಾವಿರ ವೈದ್ಯರನ್ನು ನೇರ ನೇಮಕಾತಿಯಲ್ಲಿ ಮಾಡಲಾಗಿದೆ. 147 ತಾಲೂಕುಗಳಲ್ಲಿ 6386 ಹೆಚ್ಚಳ ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಲಾಗಿದೆ ಎಂದರು.

Recommended Video

ಆ ಒಂದು ವಿಡಿಯೋ ಜೀವನಕ್ಕೆ ಮುಳುವಾಯಿತಂತೆ !! | Oneindia Kannada

2928 ICU ಬೆಡ್‌ಗಳನ್ನು 243 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. 19 ಜಿಲ್ಲಾಸ್ಪತ್ರೆಗಳಲ್ಲಿ 665 ಆಕ್ಸಿಜನ್ ಬೆಡ್ ಹೆಚ್ಚಳ ಮಾಡಲಾಗಿದೆ. ಕೊರೊನಾ 3ನೇ ಅಲೆಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ. ಮಕ್ಕಳ ಚಿಕಿತ್ಸೆಗಾಗಿ ಪ್ರತ್ಯೇಕ ವ್ಯವಸ್ಥೆ, ಶೇ.30ರಷ್ಟು ಬೆಡ್ ವ್ಯವಸ್ಥೆ ಮೀಸಲು ಇರಿಸಲಾಗಿದೆ. ಎಲ್ಲ ಶಾಲೆಗಳಲ್ಲಿ ಕೂಡ ಪ್ರತಿ 15 ದಿನಕ್ಕೊಮ್ಮೆ ಆರೋಗ್ಯ ಇಲಾಖೆ ಭೇಟಿ ನೀಡಲಿದೆ. ಮಕ್ಕಳಿಗೆ ಸೋಂಕು ಗುಣಲಕ್ಷಣ ಹೊಂದಿದವರಿಗೆ ತಪಾಸಣೆ, ಆರೈಕೆ, ಚಿಕಿತ್ಸೆ ಮಾಡಲಾಗುವುದು ಎಂದು ಸಚಿವ ಕೆ. ಸುಧಾಕರ್ ತಿಳಿಸಿದರು.

English summary
Bruhat Bangaluru Mahanagara Palike (BBMP) has issued a separate circular to the city's apartment, nursing college, hostel and PG in the wake of the increase in coronavirus and omicron infections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X