• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಹಾಲಕ್ಷ್ಮೀ ಲೇಔಟ್‌ನಲ್ಲಿ ವಿಜಯಲಕ್ಷ್ಮೀ ಯಾರಿಗೆ?

|

ಬೆಂಗಳೂರು, ಡಿಸೆಂಬರ್ 5 : 15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕುತೂಹಲ ಕೆರಳಿಸಿರುವ ಕ್ಷೇತ್ರ ಮಹಾಲಕ್ಷ್ಮೀ ಲೇಔಟ್. 2018ರಲ್ಲಿ ಜೆಡಿಎಸ್ ಈ ಕ್ಷೇತ್ರದಲ್ಲಿ ಜಯಗಳಿಸಿತ್ತು. 2019ರ ಉಪ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಕ್ಷೇತ್ರವನ್ನು ವಶಕ್ಕೆ ಪಡೆದುಕೊಳ್ಳಲು ಹೋರಾಟ ಮಾಡುತ್ತಿವೆ. ಜೆಡಿಎಸ್ ಕ್ಷೇತ್ರವನ್ನು ಉಳಿಸಿಕೊಳ್ಳಲು ಕಷ್ಟಪಡುತ್ತಿದೆ.

ಬೆಂಗಳೂರು ನಗರದಲ್ಲಿ ಉಪ ಚುನಾವಣೆ ನಡೆಯುತ್ತಿರುವ ನಾಲ್ಕು ಕ್ಷೇತತ್ರದಲ್ಲಿ ಇದೂ ಒಂದು. ಕಳೆದ ಬಾರಿ ಜೆಡಿಎಸ್‌ನಿಂದ ಶಾಸಕರಾಗಿ ಆಯ್ಕೆಯಾಗಿದ್ದ ಕೆ. ಗೋಪಾಲಯ್ಯ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಅರ್ಹಗೊಂಡಿದ್ದರಿಂದ ಉಪ ಚುನಾವಣೆ ಎದುರಾಗಿದೆ. ಮೂರು ಪಕ್ಷಗಳ ನಡುವೆ ತ್ರಿಕೋನ ಸ್ಫರ್ಧೆ ಇದೆ.

ಕೆ. ಗೋಪಾಲಯ್ಯ ವಿರುದ್ಧ ಬಿಜೆಪಿ ಹೈಕಮಾಂಡ್‌ಗೆ ದೂರು

2018ರಲ್ಲಿ ಜೆಡಿಎಸ್‌ನಿಂದ ನಿಂತು ಗೆದ್ದಿದ್ದ ಕೆ. ಗೋಪಾಲಯ್ಯ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ. ಸ್ಥಳೀಯ ನಾಯಕರು ಗೋಪಾಲಯ್ಯ ಬಿಜೆಪಿ ಸೇರ್ಪಡೆಗೊಳ್ಳಲು ವಿರೋಧ ಮಾಡಿದ್ದರು. ಅಂತಿಮವಾಗಿ ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿ ಜೈಕಾರ ಕೂಗಿದ್ದಾರೆ.

Karnataka By-Election 2019 Polling LIVE : ಕರ್ನಾಟಕದ ಉಪ ಚುನಾವಣಾ ಕದನ; ಮತದಾನ ಆರಂಭ

ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದಲ್ಲಿ ಒಟ್ಟು 12 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿಯಿಂದ ಗೋಪಾಲಯ್ಯ, ಕಾಂಗ್ರೆಸ್‌ನಿಂದ ಎಂ. ಶಿವರಾಜು ಮತ್ತು ಜೆಡಿಎಸ್‌ನಿಂದ ಗಿರೀಶ್ ಕೆ. ನಾಶಿ ಪ್ರಮುಖರು. ಕರ್ನಾಟಕ ರಾಷ್ಟ್ರ ಸಮಿತಿಯಿಂದ ಗಿರೀಶ್‌ ಗೌಡ. ನಟ ಉಪೇಂದ್ರ ನೇತೃತ್ವದ ಉತ್ತಮ ಪ್ರಜಾಕೀಯ ಪಕ್ಷದಿಂದ ವಿ. ಆಶಾರಾಣಿ ಅಭ್ಯರ್ಥಿಗಳು.

ಉಪ ಚುನಾವಣೆ; ಮತದಾನಕ್ಕೆ ಈ ದಾಖಲೆ ಬಳಸಬಹುದು

ಕ್ಷೇತ್ರದಲ್ಲಿ ಒಟ್ಟು 270 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ. ಇವುಗಳಲ್ಲಿ ಸೂಕ್ಷ್ಮ ಮತಗಟ್ಟೆಗಳು 74. ಕ್ಷೇತ್ರದಲ್ಲಿ ಒಟ್ಟು 2,85,869 ಮತದಾರರು ಇದ್ದಾರೆ. ಇವರಲ್ಲಿ ಪುರಷರು 1,47,353, ಮಹಿಳೆಯರು 1,38,474. ಕಳೆದ ಬಾರಿ ಶೇ 53ರಷ್ಟು ಮತದಾನವಾಗಿತ್ತು.

ಜಾತಿವಾರು ಲೆಕ್ಕಚಾರ: ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದಲ್ಲಿ ಒಕ್ಕಲಿಗರು ನಿರ್ಣಾಯಕರು. 85,500 ಮತದಾರರು ಇದ್ದಾರೆ. ಉಳಿದಂತೆ ಲಿಂಗಾಯತರು 24,000, ಕುರುಬರು 10,000, ಬ್ರಾಹ್ಮಣ 30,000, ಪ. ಜಾತಿ/ವರ್ಗ 55,000,

ಮುಸ್ಲಿಂ 14,000, ನೇಕಾರ 23,000 ಮತ್ತು ಇತರರು 42,000

ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 7 ವಾರ್ಡ್‌ಗಳಿವೆ. ನಂದಿನಿ ಲೇಔಟ್‌ನಲ್ಲಿ ಮಾತ್ರ ಬಿಜೆಪಿಯ ಬಿಬಿಎಂಪಿ ಸದಸ್ಯರಿದ್ದಾರೆ. ವೃಷಭಾವತಿ ನಗರ ಮತ್ತು ಮಾರಪ್ಪನಪಾಳ್ಯದಲ್ಲಿ ಜೆಡಿಎಸ್‌ನಿಂದ ಆಯ್ಕೆಯಾದ ಸದಸ್ಯರಿದ್ದರೂ ಅವರು ಬಿಜೆಪಿಗೆ ಉಪ ಚುನಾವಣೆಯಲ್ಲಿ ಬೆಂಬಲ ಕೊಟ್ಟಿದ್ದು ಕುತೂಹಲಕ್ಕೆ ಕಾರಣವಾಗಿದೆ.

ವಾರ್ಡ್‌ಗಳ ಪಟ್ಟಿ

1) ನಂದಿನಿಲೇಔಟ್ - ಬಿಜೆಪಿ

2) ಶಂಕರಮಠ - ಕಾಂಗ್ರೆಸ್

3) ಮಹಾಲಕ್ಷ್ಮಿಪುರಂ - ಕಾಂಗ್ರೆಸ್

4) ನಾಗಪುರ - ಜೆಡಿಎಸ್

5) ವೃಷಭಾವತಿ ನಗರ - ಜೆಡಿಎಸ್ (ಬಿಜೆಪಿ ಸಪೋರ್ಟ್)

6) ಮಾರಪ್ಪನಪಾಳ್ಯ - ಜೆಡಿಎಸ್ (ಬಿಜೆಪಿ ಸಪೋರ್ಟ್)

7) ಶಕ್ತಿಗಣಪತಿ ನಗರ - ಜೆಡಿಎಸ್

2018ರ ಚುನಾವಣಾ ಫಲಿತಾಂಶ: 2018ರ ಚುನಾವಣೆಯಲ್ಲಿ ಕೆ. ಗೋಪಾಲಯ್ಯ (ಜೆಡಿಎಸ್) 88218 ಮತಗಳನ್ನು ಪಡೆದು ಜಯಗಳಿಸಿದ್ದರು. ಬಿಜೆಪಿಯ ನೆ.ಲ ನರೇಂದ್ರಬಾಬು 47,118, ಕಾಂಗ್ರೆಸ್‌ನ ಮಂಜುನಾಥ್ 20,496 ಮತ ಪಡೆದಿದ್ದರು.

English summary
Karnataka's Mahalakshmi Layout assembly seat by election 2019 : Read all about Mahalakshmi Layout assembly constituency of Bengaluru City. Get By election news updates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X