• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರು ಗಲಭೆ: ಮಾಹಿತಿ ಕೊಡುವಂತೆ ಮನವಿ

|

ಬೆಂಗಳೂರು, ಆ. 27: ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದ ಬೆಂಗಳೂರು ಗಲಭೆ ಪ್ರಕರಣದ ಮ್ಯಾಜಿಸ್ಟೀರಿಯಲ್ ತನಿಖೆ ಇಂದಿನಿಂದ ಆರಂಭವಾಗಿದೆ. ದೇವರಜೀವನ ಹಳ್ಳಿ(ಡಿ.ಜೆ. ಹಳ್ಳಿ) ಹಾಗೂ ಕಾಡುಗೊಂಡನ ಹಳ್ಳಿ (ಕೆ.ಜಿ. ಹಳ್ಳಿ) ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯಾಜಿಸ್ಟೀರಿಯಲ್ ತನಿಖೆಯನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿ ಹಾಗೂ ಮ್ಯಾಜಿಸ್ಟ್ರೇಟ್ ಜಿ.ಎನ್ ಶಿವಮೂರ್ತಿ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಮಾಡಿತ್ತು.

   ಐಟಿ ವಿಚಾರಣೆಗೆ ತಡೆ ನೀಡಲು ಸುಪ್ರೀಂಕೋರ್ಟ್ ನಕಾರ | Oneindia Kannada

   ಫೇಸ್‌ಬುಕ್‌ ಪೋಸ್ಟ್‌ವೊಂದರ ನೆಪದಲ್ಲಿ ಆರಂಭವಾಗಿದ್ದ ಗಲಾಟೆ, ಗಲಭೆಯಾಗಿ ಮಾರ್ಪಟ್ಟಿತ್ತು. ನಂತರ ತೀವ್ರ ಸ್ವರೂಪ ಪಡೆದ ಗಲಭೆ ನಿಯಂತ್ರಿಸಲು ಪೊಲೀಸರು ಗೋಲಿಬಾರ್ ಮಾಡಿದ್ದರು. ಪುಲಕೇಶಿನಗರ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಕಾವಲ್‌ ಭೈರಸಂದ್ರದಲ್ಲಿನ ಮನೆಯಲ್ಲಿ ಲೂಟಿ ಮಾಡಿ ಬೆಂಕಿ ಹಾಕಲಾಗಿತ್ತು. ನಂತರ ರಾಜ್ಯ ಸರ್ಕಾರ ಪ್ರಕರಣವನ್ನು ಮ್ಯಾಜಿಸ್ಟೀರಿಯಲ್ ತನಿಖೆಗೆ ವಹಿಸಿತ್ತು. ಇದೀಗ ತನಿಖೆ ಆರಂಭವಾಗಿದೆ.

   Fact Check: ರಾತ್ರಿ 1- 1.30ಕ್ಕೆ ಕೊತ್ತಂಬರಿ ಸೊಪ್ಪು ತರಲು ಯಾರೂ ಮನೆಯಿಂದ ಹೋಗಲ್ವಾ?

   ತನಿಖೆ ಆರಂಭ

   ತನಿಖೆ ಆರಂಭ

   ಡಿ.ಜೆ. ಹಳ್ಳಿ ಹಾಗೂ ಕೆ.ಜಿ. ಹಳ್ಳಿ ಗಲಭೆ ಪ್ರಕರಣವನ್ನು ನ್ಯಾಯಾಲಯಗಳ ಮಾದರಿಯಲ್ಲಿಯೇ ನಡೆಸಲಾಗುವುದು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಎನ್ ಶಿವಮೂರ್ತಿ ಅವರು ತಿಳಿಸಿದರು. ನಗರದ ದೇವರಜೀವನಹಳ್ಳಿ ಹಳ್ಳಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಆಗಸ್ಟ್ 11 ರಂದು ನಡೆದ ದೇವರಜೀವನಹಹಳ್ಳಿ ಹಾಗೂ ಕಾಡುಗೊಂಡನಹಳ್ಳಿ ಹಳ್ಳಿ ಗಲಭೆ ಪ್ರಕರಣದ ಸಂಪೂರ್ಣ ಮಾಹಿತಿಯನ್ನು ಅವರು ಪಡೆದರು.

   ಮೂರು ತಿಂಗಳು ಗಡುವು

   ಮೂರು ತಿಂಗಳು ಗಡುವು

   ಅಲ್ಲದೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮಾರ್ಗಸೂಚಿಯಂತೆ ಮ್ಯಾಜಿಸ್ಟ್ರೇಟ್ ತನಿಖೆ ಪ್ರಾರಂಭ ಮಾಡುತ್ತೇವೆ. ಸೆಪ್ಟೆಂಬರ್ 2 ರಿಂದ ಈ ಪ್ರಕರಣದ ಸಂಪೂರ್ಣ ವಿಚಾರಣೆ ಪ್ರಾರಂಭವಾಗುತ್ತದೆ. ಮ್ಯಾಜಿಸ್ಟ್ರೇಟ್ ತನಿಖೆಯ ವರದಿ ನೀಡಲು ಸರ್ಕಾರ ಮೂರು ತಿಂಗಳು ಗಡುವು ನೀಡಿದೆ. ಅಷ್ಟರೊಳಗೆ ತನಿಖೆ ನಡೆಸಿ ವರದಿ ಕೊಡಲಾಗುವುದು ಎಂದರು.

   ''ಡಿಜೆ ಹಳ್ಳಿ ಪ್ರಕರಣ ಸ್ವತಂತ್ರ ನ್ಯಾಯಾಂಗ ತನಿಖೆಗೆ ವಹಿಸಿ''

   ಜೀವ-ಆಸ್ತಿ ಹಾನಿ

   ಜೀವ-ಆಸ್ತಿ ಹಾನಿ

   ಗಲಭೆ ಪ್ರಕರಣ ಸಂಬಂಧ ಈವರೆಗೆ ಒಟ್ಟು 388 ವ್ಯಕ್ತಿಗಳನ್ನು ಬಂಧಿಸಿಲಾಗಿದೆ. 55 ಡಿ.ಜಿ ಹಳ್ಳಿ ಹಾಗೂ 16 ಕೆ.ಜಿ. ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಸಾಮಾನ್ಯ ಜನರು ಸೇರಿದಂತೆ 53 ಪೊಲೀಸ್, 15 ಕೆಎಸ್‌ಆರ್‌ಪಿ ಸಿಬ್ಬಂದಿ ಸೇರಿ ಒಟ್ಟು 70 ಮಂದಿಗೆ ಗಾಯಗಳಾಗಿವೆ. ಪ್ರಕರಣದಲ್ಲಿ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ಗಲಭೆಯಲ್ಲಿ 126 ವಾಹನಗಳು, ಕಟ್ಟಡಗಳು ಬೆಂಕಿಯಿಂದ ಸುಟ್ಟು ಹೋಗಿವೆ. ಸುಟ್ಟ ವಾಹನಗಳ ನಷ್ಟದ ಒಟ್ಟು ಮೊತ್ತ ಸಾರಿಗೆ ಅಧಿಕಾರಿಗಳು ಅಂದಾಜಿಸಿ ಮಾಹಿತಿ ನೀಡಲಿದ್ದಾರೆ ಎಂದು ಅವರು ತಿಳಿಸಿದರು.

   ಮಾಹಿತಿ ನೀಡುವಂತೆ ಮನವಿ

   ಮಾಹಿತಿ ನೀಡುವಂತೆ ಮನವಿ

   ಗೋಲಿಬಾರ್ ಮತ್ತು ಗಲಭೆಯ ಸಂಪೂರ್ಣ ವಿಚಾರಣೆಯ ಬಳಿಕ ವರದಿ ನೀಡುತ್ತೇವೆ. ಸಾರ್ವಜನಿಕರು ತಮ್ಮ ಅಹವಾಲುಗಳನ್ನು, ಹೇಳಿಕೆಗಳು, ಸಾಕ್ಷಿಗಳನ್ನು ಜಿಲ್ಲಾಧಿಕಾರಿ ಕಚೇರಿಗೆ ನೀಡಬಹುದು. ನೀಡಿದ ಮಾಹಿತಿಯನ್ನು ನಾವು ಗೌಪ್ಯವಾಗಿಡಲಾಗುವುದು ಎಂದು ಮ್ಯಾಜಿಸ್ಟ್ರೇಟ್ ಜಿ.ಎನ್ ಶಿವಮೂರ್ತಿ ಅವರು ಭರವಸೆ ನೀಡಿದರು.

   ಇದೇ ಸಮಯದಲ್ಲಿ ಪೂರ್ವ ವಲಯದ ಪೊಲೀಸ್ ಉಪ ಆಯುಕ್ತ ಡಾ. ಶರಣಪ್ಪ ಎಸ್.ಢಗೆ, ಎಸಿಪಿ, ಸಿಸಿಬಿ ಅಧಿಕಾರಿಗಳು ಮತ್ತು ಬೆಂಗಳೂರು ಉತ್ತರ ವಿಭಾಗದ ತಹಶಿಲ್ದಾರರು ಉಪಸ್ಥಿತರಿದ್ದರು.

   English summary
   The Magisterial Investigation of the Bengaluru riot case, which has been an international news story, has begun from today.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X