• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪುರಭವನದಲ್ಲಿ ಪಿಸಿ ಸರ್ಕಾರ್ 'ಇಂದ್ರಜಾಲ' ಮೋಡಿಗೆ ಒಳಗಾಗಿ!

|

ಬೆಂಗಳೂರು, ಅಕ್ಟೋಬರ್ 25 2018: ವಿಶ್ವ ವಿಖ್ಯಾತ ಇಂದ್ರಜಾಲ ಮಾಂತ್ರಿಕ ಪಿ.ಸಿ.ಸರ್ಕಾರ್ ಅವರು "ಇಂದ್ರಜಾಲ್" ಎಂಬ ಮೆಗಾ ಮ್ಯಾಜಿಕ್ ಶೋ ಮೂಲಕ ಜನರನ್ನು ರಂಜಿಸಲಿದ್ದಾರೆ.

ಸರ್ಕಾರ್ ಅವರ ರಕ್ತದಲ್ಲೇ ಮ್ಯಾಜಿಕ್ ಬೆರೆತಿದ್ದು ಅವರೇ ಹೇಳುವಂತೆ "ನಾನು ನಿದ್ದೆ ಮಾಡುವಾಗ ಮ್ಯಾಜಿಕ್ ಅನ್ನು ಉಸಿರಾಡುತ್ತೇನೆ; ಎಚ್ಚರದಲ್ಲಿದ್ದಾಗ ಮ್ಯಾಜಿಕ್ ಗಾಗಿ ಕೆಲಸ ಮಾಡುತ್ತೇನೆ".

ಮ್ಯಾಜಿಕ್ ಲೋಕಕ್ಕೆ ಗಣನೀಯ ಕೊಡುಗೆ ನೀಡಿರುವ ಸರ್ಕಾರ್ ಇಂಡಿಯನ್ ಮ್ಯಾಜಿಕ್ ಅದರಲ್ಲೂ ಅವರ ಪ್ರೀತಿಯ ಇಂದ್ರಾ-ಜಲ್- ನ ಕಿರೀಟವನ್ನು ಮತ್ತಷ್ಟು ಮೇಲಕ್ಕೇರಿಸಿದ್ದಾರೆ. ಇವರ ಮುಂದಾಳತ್ವದಿಂದಾಗಿ ಈ ಕಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿಯಾಗಿದೆ.

ಸರ್ಕಾರ್ ಕುಟುಂಬ ವಿಶ್ವದ ಅತಿ ದೊಡ್ಡ ಜಾದೂಗಾರ ಕುಟುಂಬವಾಗಿದೆ. ಪಿಸಿ ಸರ್ಕಾರ್ ಈ ಕಲೆಯನ್ನು ಮೊದಲ ಬಾರಿಗೆ ವಿಶ್ವ ವೇದಿಕೆಗೆ ಪರಿಚಯಿಸಿದರೆ ಅವರ ಮಕ್ಕಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಕಲೆಗೆ ಮಹತ್ವ ದೊರೆಯುವಂತೆ ಮಾಡಿದ್ದಾರೆ. ಪ್ರಪಂಚದಾದ್ಯಂತ ಅನೇಕ ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಸರ್ಕಾರ್ ಕುಟುಂಬ ಭಾರತೀಯ ಮ್ಯಾಜಿಕ್ ನ ರಾಯಭಾರಿಗಳಾಗಿದ್ದಾರೆ.

ಈ ರೋಮಾಂಚಕ ಪ್ರದರ್ಶನವನ್ನು ಪ್ರಿಯಾ ಕಲ್ಚರಲ್ ಆಯೋಜಿಸಿದ್ದು ಜೆಸಿ ರಸ್ತೆಯ ಟೌನ್ ಹಾಲ್ ನಲ್ಲಿ ನಡೆಯಲಿದೆ.

ಮ್ಯಾಜಿಕ್ ಷೋ ವಿವರ: ನವೆಂಬರ್ 1,3,4,6,8,10,11 (7 ದಿನಗಳು) ಸಂಜೆ 4.00 ಗಂಟೆ ಮತ್ತು 7.00 ಗಂಟೆಗೆ

ಸರ್ಕಾರ್ ಕುಟುಂಬದ ಮ್ಯಾಜಿಕ್ ದೀಪ

ಸರ್ಕಾರ್ ಕುಟುಂಬದ ಮ್ಯಾಜಿಕ್ ದೀಪ

ಈ ಪರಂಪರೆಯ ಮುಂದುವರಿದ ಭಾಗವಾದ ಪಿಸಿ ಸರ್ಕಾರ್ ರನ್ನು (ಯುವ) ಸಾಮಾನ್ಯವಾಗಿ ಭಾರತದ ಲಿಯೊನಾರ್ಡೊ-ಡಾ-ವಿನ್ಸಿ ಎಂದು ಕರೆಯುತ್ತಾರೆ. ಈಗ ಅವರ ಪುತ್ರ ಪಿಸಿ ಸರ್ಕಾರ್ (ಮಾಸ್ಟರ್) ಕುಟುಂಬದ ಅತ್ಯಂತ ಕಿರಿಯ ಮ್ಯಾಜಿಶಿಯನ್ಸ್ ಆಗಿದ್ದು,ತನ್ನ ತಾತನಿಗೆ ಹೆಸರು ತಂದುಕೊಟ್ಟಿದ್ದ 'ಎ ಪೇಂಟರ್ ಮತ್ತು ಎ ಡ್ರಮ್ಮರ್' ಅನ್ನು ಹೊಸತನದ ಛಾಪು ಒತ್ತಿ ಮರು ಸೃಷ್ಟಿ ಮಾಡಿದ್ದಾನೆ. ಸರ್ಕಾರ್ ಕುಟುಂಬದ ಮ್ಯಾಜಿಕ್ ದೀಪ ಮತ್ತೆ ಪ್ರಕಾಶಮಾನವಾಗಿ ಉರಿಯುವಂತೆ ಮಾಡಿದ್ದಾನೆ.

ಪ್ರಪಂಚದಾದ್ಯಂತ ಸರ್ಕಾರ್ ಪ್ರದರ್ಶನ ನೀಡಿದ್ದಾರೆ

ಪ್ರಪಂಚದಾದ್ಯಂತ ಸರ್ಕಾರ್ ಪ್ರದರ್ಶನ ನೀಡಿದ್ದಾರೆ

ಭಾರತದ ನೀರು ಎಂಬ ವಿಷಯವನ್ನು ಇಟ್ಟುಕೊಂಡು ಪ್ರಪಂಚದಾದ್ಯಂತ ಸರ್ಕಾರ್ ಪ್ರದರ್ಶನ ನೀಡಿದ್ದು ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಇದಕ್ಕಾಗಿ ಬಳಸಿದ ವಸ್ತುಗಳನ್ನು ಕಂಡು ನಾನು ಈ ನೈಸರ್ಗಿಕ ಜಗತ್ತಿನಲ್ಲಿಲ್ಲ, ಬದಲಾಗಿ ಬೇರೆ ಯಾವುದೇ ಜಗತ್ತಿನಲ್ಲಿದ್ದೇನೆ ಎಂದು ಭಾವಿಸಿದೆ. ಇದು ನನ್ನನ್ನು ಬೆರಗುಗೊಳಿಸಿದೆ ಮತ್ತು ಬೆಚ್ಚಿಬೀಳಿಸಿದೆ. ನಿಜಕ್ಕೂ "ಮ್ಯಾಜಿಕ್" ಎಂದು ಕರೆಯಲ್ಪಡುವ ಏನೋ ಇದ್ದು ಅದನ್ನು ನಾನು ನಂಬಲು ಪ್ರಾರಂಭಿಸಿದೆ ಎಂಬುದು ಪ್ರದರ್ಶನ ವೀಕ್ಷಿಸಿದವರ ಅನುಭವ.

ಭ್ರಮೆ ಹುಟ್ಟಿಸುವ ಸನ್ನಿವೇಶಗಳಿದ್ದು

ಭ್ರಮೆ ಹುಟ್ಟಿಸುವ ಸನ್ನಿವೇಶಗಳಿದ್ದು

ಅವರ ಇನ್ನೊಂದು ಪ್ರದರ್ಶನ "ಸೋಲ್ ಥ್ರೂ ದಿ ಸೋಲ್" ನಲ್ಲಿ ಭ್ರಮೆ ಹುಟ್ಟಿಸುವ ಸನ್ನಿವೇಶಗಳಿದ್ದು ಅದು ಪ್ರೇಕ್ಷಕರನ್ನು ತಮ್ಮ ಆಸನಗಳ ತುದಿಯಲ್ಲಿ ಕೂರುವಂತೆ ಮಾಡುತ್ತದೆ. "ಬಡ್ರ್ಸ್ ಫ್ರಮ್ ನೋವೇರ್" ಎನ್ನುವುದು ಶುದ್ಧ ಮ್ಯಾಜಿಕಲ್ ವರ್ಕ್ ಆಗಿದ್ದು, ಅಲ್ಲಿ ಪಂಜರದಲ್ಲಿರುವ ಪಕ್ಷಿಗಳು ಸಂಪೂರ್ಣವಾಗಿ ಮಾಯವಾಗುತ್ತವೆ. ಏನು ನಡೆಯುತ್ತಿದೆ ಎಂದು ತಿಳಿಯುವಷ್ಟರಲ್ಲಿ ಈಜಿಪ್ಟ್ ರಾಜಕುಮಾರಿಯ ದೇಹ ಗಾಳಿಯಲ್ಲಿ ತೇಲಾಡಿ ಶವಪೆಟ್ಟಿಗೆಯಿಂದ ಕಣ್ಮರೆಯಾಗುತ್ತದೆ, ನಂತರ ಮತ್ತೆ ಕಾಣಿಸಿಕೊಳ್ಳುತ್ತದೆ. ಬೆಂಗಳೂರಿನ ಅತ್ಯುತ್ತಮ ಸಭಾಂಗಣದಲ್ಲಿ ಕೂತು ಪ್ರದರ್ಶನ ವೀಕ್ಷಿಸುವವರೂ ಸಂಪೂರ್ಣವಾಗಿ ಬೆವೆತು ಒದ್ದೆಯಾದದ್ದಿದೆ.

ನಂತರ ಅಸಾಧ್ಯವಾದುದನ್ನು ಸಾಧ್ಯವಾಗಿಸುವ ಸುತ್ತು

ನಂತರ ಅಸಾಧ್ಯವಾದುದನ್ನು ಸಾಧ್ಯವಾಗಿಸುವ ಸುತ್ತು

ನಂತರ ಅಸಾಧ್ಯವಾದುದನ್ನು ಸಾಧ್ಯವಾಗಿಸುವ ಸುತ್ತು. ಹೌದು, ಯುವತಿಯೊಬ್ಬಳ ನಡುವನ್ನು ತುಂಡರಿಸಿ ಮತ್ತೆ ಒಂದಾಗಿಸಿದಾಗ ಆಕೆ ಜೀವಂತವಾಗಿ ಮೇಲೆದ್ದು ಬರುತ್ತಾಳೆ. ಪ್ರೇಕ್ಷಕರಿಂದ ಈ ಪ್ರದರ್ಶನಕ್ಕೆ ಕರತಾಡನಗಳ ಸುರಿಮಳೆ. ಕೊನೆಗೆ ಜಾದೂಗಾರ ತನ್ನ ಮೇಲೆಯೇ ಮ್ಯಾಜಿಕ್ ಪ್ರಯೋಗಿಸಿಕೊಂಡ.

ವೇದಿಕೆಯಲ್ಲಿ ಅಸ್ಥಿ ಪಂಜರದ ಜೊತೆ ಗುರುತಿಸಿಕೊಂಡಿದ್ದ ಆತ ತಕ್ಷಣ ಸಭಾಂಗಣದ ಮಧ್ಯ ಭಾಗದಲ್ಲಿ ಸಭಿಕರ ಮಧ್ಯ ಕಾಣಿಸಿಕೊಂಡ. ಇದರೊಂದಿಗೆ ಆತ ಒಬ್ಬ ಅತ್ಯುತ್ತಮ ಜಾದೂಗಾರ ಎಂಬುದನ್ನು ಸಾಬೀತು ಪಡಿಸಿದ. ಇಡೀ ಜನಸಮೂಹವೇ ಕ್ಷಣ ಕಾಲ ದಿಗ್ಭ್ರಮೆಗೊಂಡಿತು. ಅದರೊಂದಿಗೆ ವೇಗವಾಗಿ ಬೆಳೆಯುತ್ತಿರುವ ಯುವ ಆಧುನಿಕ ಜಾದೂಗಾರರನ್ನು ಪ್ರತಿಯೊಬ್ಬರೂ ಅಭಿನಂದಿಸಿದರು.ಹಿರಿಯರ ಅನುಭವ ಮತ್ತು ಕಿರಿಯರ ಚಾಕಚಕ್ಯತೆಯಿಂದ ಅತ್ಯುತ್ತಮ ಪ್ರದರ್ಶನ ಆಯೋಜಿಸಲು ಸಾಧ್ಯವಾಗಿದೆ.

English summary
The World Famous Magicians P.C. Sorcar (Young Master) is in town, casting a Spell-binding performance through their Mega Magic Show, 'Indrajal'. Father and son is performing at Town hall, JC road, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more