ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಗಸ್ಟ್‌ನಿಂದ ಮಾಗಡಿ ರಸ್ತೆ-ನಾಯಂಡಹಳ್ಳಿ ಮೆಟ್ರೋ ಸಂಚಾರ?

|
Google Oneindia Kannada News

ಬೆಂಗಳೂರು, ಜುಲೈ 09 : ಮಾಗಡಿ ರಸ್ತೆ-ನಾಯಂಡಹಳ್ಳಿ ನಡುವೆ ನಮ್ಮ ಮೆಟ್ರೋ ರೈಲು ಸೇವೆ ಆರಂಭಿಸಲು ಅನುಮತಿ ನೀಡುವಂತೆ ಕೋರಿ ಬಿಎಂಆರ್‌ಸಿಎಲ್ ಮೆಟ್ರೋ ರೈಲು ಸುರಕ್ಷತಾ ಆಯುಕ್ತರಿಗೆ ಪತ್ರ ಬರೆಯಲು ಸಿದ್ಧತೆ ನಡೆಸುತ್ತಿದೆ. ಆಗಸ್ಟ್ ಮೊದಲ ವಾರದಲ್ಲಿ ರೈಲು ಸಂಚಾರ ಆರಂಭವಾಗುವ ನಿರೀಕ್ಷೆ ಇದೆ.

2015ರ ಮಾರ್ಚ್‌ ಅಂತ್ಯದಿಂದ ಮಾಗಡಿ ರಸ್ತೆ-ನಾಯಂಡಹಳ್ಳಿ ನಡುವಿನ 6.4 ಕಿ.ಮೀ ಮಾರ್ಗದಲ್ಲಿ ಮೆಟ್ರೋ ರೈಲಿನ ಪ್ರಾಯೋಗಿಕ ಸಂಚಾರವನ್ನು ಬಿಎಂಆರ್‌ಸಿಎಲ್ ಆರಂಭಿಸಿದ್ದು, ಅದು ಯಶಸ್ವಿಯಾಗಿದೆ. ಮಾರ್ಗದಲ್ಲಿನ ನಿಲ್ದಾಣಗಳ ಸುರಕ್ಷತೆ ಕುರಿತು ಪ್ರಮಾಣ ಪತ್ರಗಳನ್ನು ಪಡೆಯಲಾಗಿದೆ. [ಮಾಗಡಿ ರಸ್ತೆಯಲ್ಲಿ ಪ್ರಾಯೋಗಿಕ ಸಂಚಾರ ಆರಂಭ]

namma metro

ಮೆಟ್ರೋ ರೈಲು ಆರಂಭಿಸಲು ರೈಲು ಸುರಕ್ಷತಾ ಆಯುಕ್ತರ ಅನುಮತಿ ಪತ್ರ ಬೇಕಾಗಿದ್ದು, ಪ್ರಾಯೋಗಿಕ ಸಂಚಾರ ವೀಕ್ಷಿಸಿ ಪ್ರಮಾಣ ಪತ್ರ ನೀಡುವಂತೆ ರೈಲ್ವೆ ಸುರಕ್ಷತಾ ಆಯುಕ್ತರಿಗೆ ಪತ್ರ ಬರೆಯಲು ಬಿಎಂಆರ್‌ಸಿಎಲ್ ಮುಂದಾಗಿದೆ. ಇನ್ನೂ 2 ದಿನದಲ್ಲಿ ಪತ್ರ ಬರೆಯಲಾಗುತ್ತದೆ. [ಮೆಟ್ರೋ 2ನೇ ಹಂತದ ಕಾಮಗಾರಿ ವಿವರಗಳು]

ರೈಲ್ವೆ ಸುರಕ್ಷತಾ ಆಯುಕ್ತರು ಪ್ರಮಾಣ ಪತ್ರ ನೀಡಿದ ಬಳಿಕ ಈ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ಆರಂಭವಾಗಲಿದೆ. ಆಗಸ್ಟ್ ಮೊದಲ ವಾರದಲ್ಲಿ ರೈಲು ಸಂಚಾರ ಆರಂಭವಾಗಬಹುದು ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳಿದ್ದಾರೆ.

6 ನಿಲ್ದಾಣಗಳು : ಮಾಗಡಿ ರಸ್ತೆ-ನಾಯಂಡಹಳ್ಳಿ ನಡುವಿನ 6.4 ಕಿ.ಮೀ ಮಾರ್ಗದಲ್ಲಿ ಮಾಗಡಿ ರಸ್ತೆ, ಹೊಸಹಳ್ಳಿ, ವಿಜಯನಗರ, ಅತ್ತಿಗುಪ್ಪೆ, ದೀಪಾಂಜಲಿ ನಗರ, ಮೈಸೂರು ರಸ್ತೆ ನಿಲ್ದಾಣಗಳಿವೆ.

bmrcl

ಈ ಮಾರ್ಗ ನಮ್ಮ ಮೆಟ್ರೋ ಮೊದಲನೇ ಹಂತದ ಯೋಜನೆಗೆ ಸೇರಿದೆ. ಎಂ.ಜಿ.ರಸ್ತೆಯಿಂದ ಹೊರಟ ರೈಲು ಸುರಂಗ ಮಾರ್ಗದ ಮೂಲಕ ಮಾಗಡಿ ರಸ್ತೆ ತಲುಪಲಿದೆ. ಮಾಗಡಿ ರಸ್ತೆಯಿಂದ ನಾಯಂಡಹಳ್ಳಿ ತನಕ ಫ್ಲೈ ಓವರ್ ಮೇಲೆ ರೈಲು ಸಾಗಲಿದೆ.

English summary
Namma Metro train service between Magadi Road to Mysuru Road 6.4 Km stretch may open for public by August 2015. The Bangalore Metro Rail Corporation Ltd (BMRCL) successfully completed trail run in the stretch.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X