• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕುಚೇಲ ಕುಬೇರನಾದ, ಮಹಾದಾನಿ ಸತೀಶ್ ಗೆ ಸನ್ಮಾನ

By ಪೂರ್ಣಚಂದ್ರ ಮಾಗಡಿ
|

ಮಾಗಡಿ,ಡಿ.16:ಒಂದು ಕಾಲದ ಕುಚೇಲನಾಗಿ ಈಗ ಕುಬೇರನಾಗಿರುವ ತಿರುಮಲೆಯ ಭಕ್ತಸತೀಶರಿಗೆ ಸ್ವಗ್ರಾಮದ ಮಂದಿ ತಿರುಮಲೆ ರಂಗನಾಥಸ್ವಾಮಿದೇವಾಲಯದ ಕಲ್ಯಾಣೋತ್ಸವದ ಸಂದರ್ಭದಲ್ಲಿ ಕಸ್ತೂರಿ ಬಳಗದ ವತಿಯಿಂದ ಹೃದಯಸ್ಪರ್ಶಿ ಸನ್ಮಾನ ನಡೆಸುವುದರ ಮೂಲಕ ಸತೀಶ್ ರಿಗೆ ಧನ್ಯವಾದ ತಿಳಿಸಿದರು.

ತಿರುಮಲೆ ಶ್ರೀರಂಗನಾಥಸ್ವಾಮಿ ದೇವಾಲಯದ ಬಡ ಅರ್ಚಕರ ಮಗನಾಗಿ ಹುಟ್ಟಿ ಇಂದು ಹೊಯ್ಸಳ ಗ್ರೂಪ್ ನ ಮಾಲೀಕರಾಗಿ ಸಾವಿರಾರು ಕೋಟಿ ಒಡೆಯರಾಗಿರುವ ಸತೀಶ್ ರವರು ತಿರುಮಲೆ ರಂಗನಿಗೆ 60 ಲಕ್ಷದ ಚಿನ್ನದ ಕಿರೀಟ, 1ಕೋಟಿ 10 ಲಕ್ಷದ ವಜ್ರಖಚಿತ ಚಿನ್ನದ ಕಿರೀಟವನ್ನ ನೀಡಿದ್ದಾರೆ. ಮತ್ತು ಶುದ್ಧ ಕುಡಿಯುವ ನೀರಿನ ಘಟಕ, ಸರ್ಕಾರಿ ಶಾಲೆಗಳ ದತ್ತು, ಬಡಮಕ್ಕಳಿಗೆ ವಿದ್ಯಾರ್ಥಿವೇತನ, ರೈತರಿಗೆ ಉಚಿತ ರಸಗೊಬ್ಬರಗಳನ್ನ ನೀಡುವುದರ ಮೂಲಕ ತಿರುಮಲೆ ಗ್ರಾಮದ ಮಟ್ಟಿಗೆ ಸತೀಶ್ ಮಹಾದಾನಿಯಾಗಿದ್ದಾರೆ.

ಹಣ ಇದ್ದವರಿಗೆಲ್ಲಾ ಧಾನ ದರ್ಮ ಮಾಡುವ ಗುಣವಾಗಲೀ, ಬಡಬಗ್ಗರ ಸೇವೆ ಮಾಡುವ ಮನಸ್ಸಾಗಲೀ ಬರುವುದಿಲ್ಲ. ಅಂದು ವಾರಾನ್ನ ತಿಂದು ಬಡತನವೇನೆಂದು ತಿಳಿದಿದ್ದ ವ್ಯಕ್ತಿ ಬೆಳೆದು ಇಂದು ಸಿರಿವಂತನಾಗಿ ಹುಟ್ಟಿದ ಊರನ್ನ ಮರೆಯದೇ ಕೋಟ್ಯಾಂತರ ರೂಪಾಯಿ ವೆಚ್ಛ ಮಾಡಿ ಬಡವರ ಸೇವೆ ಮಾಡುತ್ತಿರುವ ಸತೀಶ್ ನಿಜಕ್ಕೂ ಮಾದರಿ ವ್ಯಕ್ತಿ ಎಂದು ಮಾಜಿ ಸಚಿವ ಕಾಂಗ್ರೆಸ್ ನ ಹಿರಿಯ ಮುಖಂಡ ಹೆಚ್.ಎಂ.ರೇವಣ್ಣ ಮೆಚ್ಚುಗೆಯ ಮಾತನ್ನಾಡಿದರು.

ನಂತರ ಮಾತನಾಡಿದ ಸತೀಶ್, ನಾನು ಯಾವುದೇ ರಾಜಕೀಯ ಪಕ್ಷ ಸೇರುವುದೂ ಇಲ್ಲ. ನಾನು ಪಕ್ಷಾತೀತವಾಗಿ ಜಾತ್ಯಾತೀತವಾಗಿ ತಿರುಮಲೆ ರಂಗನ ಸನ್ನಿಧಿಯಲ್ಲಿ ಸೇವೆ ಮಾಡುತ್ತಿದ್ದೇನೆ. ನನ್ನ ಸ್ನೇಹಿತರೊಂದಿಗೆ ಶ್ರೀರಂಗಸೇವಾಟ್ರಸ್ಟ್ ಆರಂಭಿಸಿ ಸಮಾಜಮುಖಿಯಾದ ಸೇವೆ ಮಾಡುತ್ತಿದ್ದೇನೆ. ಗ್ರಾಮದ ಮಂದಿ ಅಧಿಕಾರಿಗಳು, ಎಲ್ಲಾ ರಾಜಕೀಯ ಮುಖಂಡರುಗಳು ಎಲ್ಲಾ ಸಂಧರ್ಭದಲ್ಲೂ ನನಗೆ ಹಾಗೂ ನಮ್ಮ ಟ್ರಸ್ಟ್ ಕಾರ್ಯಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿದ್ದಾರೆ. ಆದ್ದರಿಂದ ನನ್ನ ಕೈಲಾದ ಮಟ್ಟಿಗೆ ನಾನು ಮುಂದೆಯೂ ಕೂಡ ಶ್ರೀರಂಗಸೇವಾಟ್ರಸ್ಟ್‍ನಡಿಯಲ್ಲಿ ಜನೋಪಯೋಗಿ ಯೋಜನೆಗಳನ್ನ ಮುಂದುವರೆಸಬೇಕೆಂಬ ಚಿಂತನೆ ಮಾಡಿದ್ದೇನೆಂದು ಸತೀಶ್ ಹೇಳಿದರು. [ಕುಬೇರ ಆದ ಕುಚೇಲ, ಸತೀಶ್ ಯಶೋಗಾಥೆ]

ತಿರುಮಲೆ ರಂಗನಾಥಸ್ವಾಮಿ ಪುರಾಣಪ್ರಸಿದ್ಧ ದೇವಾಲಯವಾಗಿದೆ. ಈ ದೇವಾಲಯದ ಅಭಿವೃದ್ಧಿಗೆ ಸರ್ಕಾರವೂ ಶ್ರಮಿಸುತ್ತಿದೆ. ಜತೆಗೆ ದೇಗುಲದಲ್ಲಿ ಧಾರ್ಮಿಕ ಪೂಜಾಕೈಂಕರ್ಯಗಳು ಇನ್ನೂ ಹೆಚ್ಚಿನ ರೀತಿಯಲ್ಲಿ ನಡೆದು ದಿನನಿತ್ಯ ಸಾವಿರಾರು ಭಕ್ತರು ರಂಗನ ದರ್ಶನ ಪಡೆದು ಪಾವನರಾಗಲಿ ಎಂಬುದು ನನ್ನ ಅಭಿಲಾಷೆಯಾಗಿದೆ. ಅದರಂತೆ ತಿರುಮಲೆ ರಂಗನ ಸೇವೆ ನಾನು ಎಂದಿಗೂ ಸದಾ ಸಿದ್ಧ ಎಂದು ಸತೀಶ್ ಹೇಳಿದರು.

ಮಾರುತಿ ಕಾರಿನಲ್ಲಿ ಓಡಾಡುತ್ತಿದ್ದ ಸತೀಶ್‍ರವರು ಇಂದು ಕೋಟಿ ಕೋಟಿ ಬೆಲೆ ಬಾಳುವ ಲ್ಯಾಂಬೋರ್ಗಿನಿಯಂತಹ ಕಾರಿನಲ್ಲಿ ಓಡಾಡುತ್ತಿದ್ದಾರೆ. ಅದಕ್ಕೆ ಅವರ ಪರಿಶ್ರಮವೇ ಕಾರಣವಾಗಿದೆ. ಹುಟ್ಟೂರು ಬಿಟ್ಟು 30 ವರ್ಷವಾದ ನಂತರ ತಾನು ಸಿರಿವಂತನಾಗಿದ್ದರೂ ಮತ್ತೆ ಹುಟ್ಟೂರಿಗೆ ಬಂದು ಸಮರ್ಪಣಾ ಮನೋಭಾವದೊಂದಿಗೆ ಸೇವೆ ಮಾಡುತ್ತಿರುವುದು ಗ್ರಾಮದ ಯುವಕರಿಗೆ ಮಾದರಿಯಾಗಿದೆ ಎಂದು ಕಸ್ತೂರಿ ಕಿರಣ್ ಹೇಳಿದರು.

ಕಾರ್ಯಕ್ರಮದಲ್ಲಿ ಸತೀಶ್‍ರ ಪತ್ನಿ ರೀನಾ, ತಾ.ಸರ್ಕಾರಿ ನೌಕರರ ಸಂಘದ ಮಾಜಿ ಕಾರ್ಯದರ್ಶಿ ಬಿ.ಎನ್.ಜಯರಾಮ್, ಲೇಖಕ ದೊಡ್ಡಬಾಣಗೆರೆ ಮಾರಣ್ಣ, ಮಂಜುನಾಥ್‍ಆಚಾರ್, ವೆಂಕಟೇಶ್‍ಅಯ್ಯಂಗಾರ್, ಕೃಷ್ಣಅಯ್ಯಂಗಾರ್, ಗೋವಿಂದರಾಜನ್. ಟಿ.ಎಸ್.ಪ್ರಭು, ಟಿ.ಸಿ.ನಾರಾಯಣಸ್ವಾಮಿ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.

English summary
Magadi Tirumale Temple Priest's son Satish a proud owner of Lamborghini Sports Car was felicitated by Kasturi Balaga for his immense philanthropic work towards his home town.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more