ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಸ ಸಮಸ್ಯೆ ಪರಿಹರಿಸಲು ಮಾಫಿಯಾ ಬಿಡುತ್ತಿಲ್ಲ: ಕುಮಾರಸ್ವಾಮಿ

By Manjunatha
|
Google Oneindia Kannada News

ಬೆಂಗಳೂರು, ಜೂನ್ 20: ಬೆಂಗಳೂರಿನ ಕಸದ ಸಮಸ್ಯೆ ಬಗೆಹರಿಸಲು ಕಸ ಮಾಫಿಯಾ ಬಿಡುತ್ತಿಲ್ಲ, ಆದರೆ ಅದನ್ನು ಕತ್ತರಿಸುವುದು ನನಗೆ ಗೊತ್ತಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಾರ್ಮಿಕವಾಗಿ ನುಡಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ನಿನ್ನೆ ನಡೆದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಂಗಳೂರು ನಗರದಲ್ಲಿ ಕಸವನ್ನು ಕಂಡು ತಲೆ ತಗ್ಗಿಸುವಂತಾಗಿದೆ. ನಗರದಲ್ಲಿನ ಕಸದ ಕತ್ತರಿಸಲು ಸ್ವಲ್ಪ ಕಾಲಾವಕಾಶ ಬೇಕಷ್ಟೆ ಎಂದರು.

ಕೇಂದ್ರದ ಕಾವೇರಿ ಯೋಜನೆಗೆ ಕುಮಾರಸ್ವಾಮಿ ಅಸಮಾಧಾನಕೇಂದ್ರದ ಕಾವೇರಿ ಯೋಜನೆಗೆ ಕುಮಾರಸ್ವಾಮಿ ಅಸಮಾಧಾನ

ಕಸದ ಸಮಸ್ಯೆ ಜೊತೆಗೆ ಮರಳು ದಂಧೆಗೂ ಕಡಿವಾಣ ಹಾಕಿ. ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದಿರಿ. ಕಠಿಣ ಕ್ರಮ ಜರುಗಿಸಿ ಎಂದೂ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಅವರು ಹೇಳಿದರು.

Mafia not letting to solve garbage problem of Bengaluru: Kumaraswamy

ಜೀರೋ ಟ್ರಾಫಿಕ್ ಬೇಡ
ನಾನು ಸಂಚರಿಸಬೇಕಾದರೆ ಶೂನ್ಯ ಸಂಚಾರ (ಜೀರೋ ಟ್ರಾಫಿಕ್) ಮಾಡುವುದು ಬೇಡ ಎಂದು ಸೂಚಿಸಿದ್ದೇನೆ ಎಂದು ಕುಮಾರಸ್ವಾಮಿ, ಜನರಿಗೆ ಇದರಿಂದ ತೊಂದರೆಯಾಗುತ್ತದೆ ಎಂದರು.

ಜನತಾ ದರ್ಶನ ಹಾಗೂ ಗ್ರಾಮ ವಾಸ್ತವ್ಯಕ್ಕೆ ಮತ್ತೆ ಚಾಲನೆ: ಕುಮಾರಸ್ವಾಮಿ ಜನತಾ ದರ್ಶನ ಹಾಗೂ ಗ್ರಾಮ ವಾಸ್ತವ್ಯಕ್ಕೆ ಮತ್ತೆ ಚಾಲನೆ: ಕುಮಾರಸ್ವಾಮಿ

ಆರ್ಥಿಕ ಮಿತವ್ಯಯ ಸಾಧಿಸಲು ಮುಂಗಾವಲು ಹಾಗೂ ಬೆಂಗಾವಲು ವಾಹನಗಳ ಸಂಖ್ಯೆಯನ್ನು ತೀವ್ರವಾಗಿ ಕಡಿತಗೊಳಿಸುವಂತೆ ತಮ್ಮ ಭದ್ರತಾ ಸಿಬ್ಬಂದಿಗೆ ಸೂಚಿಸಿದೆ ಆದರೆ ಅದಕ್ಕೆ ಅವರು ಒಪ್ಪಲಿಲ್ಲ ಎಂದು ಮುಖ್ಯಮಂತ್ರಿ ತಿಳಿಸಿದರು.

ಎಸಿಬಿ-ಲೋಕಾಯುಕ್ತದಲ್ಲಿ ಹಸ್ತಕ್ಷೇಪವಿಲ್ಲ
ಭ್ರಷ್ಟಾಚಾರ ನಿಗ್ರಹ ದಳ ಮತ್ತು ಲೋಕಾಯುಕ್ತ ಸಂಸ್ಥೆಗಳ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದ ಅವರು ಯಶಸ್ವಿನಿ ಯೋಜನೆ, ಕೇಂದ್ರ ಸರ್ಕಾರದ ಆರೋಗ್ಯಶ್ರೀ ಯೋಜನೆಯೊಂದಿಗೆ ಮಿಳಿತಗೊಳಿಸಿ ಅನುಷ್ಠಾನಗೊಳಿಸಲು ಯೋಜಿಸಲಾಗಿದೆ ಎಂದರು.

English summary
CM Kumaraswamy said, garbage mafia not letting to solve garbage problem of Bengaluru. But i am aware that how to clear the mafia. we will soon emerge with a solution.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X