ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಡಿವಾಳ ಪೊಲೀಸರ ಕಾರ್ಯಾಚರಣೆ: 1.85 ಕೋಟಿ ರೂ. ಹ್ಯಾಷ್ ಆಯಿಲ್ ಪತ್ತೆ!

|
Google Oneindia Kannada News

ಬೆಂಗಳೂರು, ಜು. 05: ಕೊರೊನಾ ಲಾಕ್ ಡೌನ್ ಸಡಿಲವಾಗುತ್ತಿದ್ದಂತೆ ಮಾದಕ ವಸ್ತು ಮಾರಾಟ ಜಾಲ ತನ್ನ ಎಡೆ ಬಿಚ್ಚಿದೆ. ಸಂಶಯಾಸ್ಪದವಾಗಿ ನಿಂತಿದ್ದ ವ್ಯಕ್ತಿಗಳನ್ನು ವಿಚಾರಣೆ ನಡೆಸಿದಾಗ 1.85 ಕೋಟಿ ರೂ. ಮೌಲ್ಯದ ಹ್ಯಾಷ್ ಆಯಿಲ್ ಮತ್ತು ನಾಲ್ಕು ಕೆ.ಜಿ. ಗಾಂಜಾ ಪತ್ತೆಯಾಗಿದೆ. ನಾಲ್ವರು ಆರೋಪಿಗಳನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಬೆಟ್ಟದಾಸನಪುರ ನಿವಾಸಿ ಅನೀಸ್, ಕೋರಮಂಗಲದ ಜಕ್ಕಸಂದ್ರ ನಿವಾಸಿ ಲೋಕೇಶ್, ಮೋಹನ್ ಕುಮಾರ್, ಗುಡ್ಡದಹಳ್ಳಿ ನಿವಾಸಿ ಜಮೀಲ್ ಬಂಧಿತ ಆರೋಪಿ. ಮತ್ತೊಬ್ಬ ಆರೋಪಿ ತಲೆ ಮರೆಸಿಕೊಂಡಿದ್ದಾನೆ. ಹಳೇ ಅಪರಾಧ ಪ್ರಕರಣದ ತನಿಖೆ ನಿಮಿತ್ತ ಮಡಿವಾಳ ಪೊಲೀಸರು ಜೋಗಿ ಕಾಲೋನಿಗೆ ಹೋಗಿದ್ದರು. ಇಲ್ಲಿನ ಸಾರ್ವಜನಿಕ ಪಾರ್ಕ್ ಸಮೀಪ ಆಂಧ್ರ ಪ್ರದೇಶ ನೋಂದಣಿ ವಾಹನ ನಿಂತಿದ್ದು, ಅದರಲ್ಲಿದ್ದ ಐವರು ಯುವಕರು ಅನುಮಾನಸ್ಪದವಾಗಿ ನೋಡುತ್ತಿದ್ದರು. ಇದರಿಂದ ಎಚ್ಚೆತ್ತ ಮಡಿವಾಳ ಪೊಲೀಸರು ಪರಿಶೀಲನೆ ನಡೆಸಿದಾಗ, ಆಂಧ್ರ ಪ್ರದೇಶದಿಂದ ಬೆಂಗಳೂರಿಗೆ ಮಹೀಂದ್ರ ಕಾರಿನಲ್ಲಿ ತರಿಸಿದ್ದಾರೆ. ಇಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡಲು ಯತ್ನಿಸಿದ್ದ 1.85 ಕೋಟಿ ರೂ. ಮೌಲ್ಯದ ಹ್ಯಾಷ್ ಆಯಿಲ್ ಮತ್ತು ನಾಲ್ಕು ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದಾರೆ.

Madiwala police busted drug racket help of the unknown vehicle

Recommended Video

T 20 ವಿಶ್ವ ಕಪ್ ಒಮನ್ ನಲ್ಲಿ ಆದ್ರೆ ಆಟಗಾರರಿಗೆ ತೊಂದ್ರೆ ತಪ್ಪಿದ್ದಲ್ಲ!! | Oneindia Kannada

ಮೊದಲ ಆರೋಪಿ ಅನೀಸ್ ತನ್ನ ಸಂಪರ್ಕದಿಂದ ವಿಶಾಖಪಟ್ಟಣಂನಿಂದ ಪೊಲೀಸರ ಕಣ್ಣು ತಪ್ಪಿಸಿ ಬೆಂಗಳೂರಿಗೆ ತಂದಿದ್ದರು. ಇದನ್ನು ಬೆಂಗಳೂರಿನಲ್ಲಿ ದುಬಾರಿಗೆ ಬೆಲೆಗೆ ಮಾರಾಟ ಮಾಡಲು ಗಿರಾಕಿಗಳನ್ನು ಹುಡುಕುತ್ತಿದ್ದರು. ಮಡಿವಾಳದ ಜೋಗಿಪಾಳ್ಯಕ್ಕೆ ಬಂದಿದ್ದರು ಎಂಬುದು ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ. ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ತಲೆ ಮರೆಸಿಕೊಂಡಿರುವ ಆರೋಪಿಗಾಗಿ ಶೋಧ ನಡೆಸಲಾಗುತ್ತಿದೆ.

English summary
Four drug peddlers have been arrested by Madiwala police for carrying 1.85 crore worth hash oil read more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X