ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಡಿಲ ನೂಲಿನ ಕೌದಿ & ಕಂಡಷ್ಟು ಬೆರಗಿದೆ ಪದ್ಯ ಪುಸ್ತಕಗಳ ಬಿಡುಗಡೆ

By Mahesh
|
Google Oneindia Kannada News

ಬೆಂಗಳೂರು, ಮಾ. 03: ಕನ್ನಡ ಸಾಹಿತ್ಯ ಲೋಕಕ್ಕೆ ಸೇರ್ಪಡೆಯಾಗಲು ಇಬ್ಬರು ಯುವ ಕವಿಗಳ ಪದ್ಯ ಪುಸ್ತಕಗಳು ಸಜ್ಜಾಗಿವೆ . "ಮಡಿಲ ನೂಲಿನ ಕೌದಿ" ಮತ್ತು " ಕಂಡಷ್ಟು ಬೆರಗಿದೆ" ಈ ಎರಡು ಕವನ ಸಂಕಲನಗಳು ಭಾನುವಾರ (ಮಾರ್ಚ್ 06) ಲೋಕಾರ್ಪಣೆಗೊಳ್ಳಲಿದೆ.

ಗೋರವಿ ಆಲ್ದೂರು (ಮಡಿಲ ನೂಲಿನ ಕೌದಿ ) ಮತ್ತು ಸತೀಶ್ ನಾಯ್ಕ ಭದ್ರಾವತಿ (ಕಂಡಷ್ಟು ಬೆರಗಿದೆ ) ಅವರ ಚೊಚ್ಚಲ ಸಂಕಲನಗಳನ್ನು ಕವಿ ಡಾ. ಎಚ್ ಎಸ್ ವೆಂಕಟೇಶ್ ಮೂರ್ತಿ ಯವರ ಅಧ್ಯಕ್ಷತೆಯಲ್ಲಿ, ಕವಯಿತ್ರಿ ಪ್ರತಿಭಾ ನಂದಕುಮಾರ್ ಮತ್ತು ಸಾಹಿತಿ, ಪತ್ರಕರ್ತ ಜೋಗಿ ಯವರ ಸಮ್ಮುಖದಲ್ಲಿ ನಾದಬ್ರಹ್ಮ ಹಂಸಲೇಖ ಅವರು ಬಿಡುಗಡೆ ಮಾಡಲಿದ್ದಾರೆ.

Madila Noolina Koudi and Kandashtu Beragide Kannada Book release

ಕವಿ ಪರಿಚಯ :
ಗೋರವಿ ಆಲ್ದೂರು : ಕನ್ನಡ ಚಿತ್ರರಂಗದಲ್ಲಿ ಸಹ ನಿರ್ದೇಶನ ಇವರ ವೃತ್ತಿಯಾಗಿದೆ. ಕವಿತೆ ಬರೆಯುವುದು ಇವರ ಪ್ರವೃತ್ತಿ. ಕನ್ನಡವನ್ನು, ಕನ್ನಡ ಸಾಹಿತ್ಯವನ್ನು, ಕಾವ್ಯವನ್ನು ಗೌರವಿಸುವ, ಪ್ರೀತಿಸುವ ಇವರು ಈ ಪುಸ್ತಕದ ಮೂಲಕ ಪ್ರಕಟಿತ ಕವಿಯಾಗುವ ನಿಟ್ಟಿನಲ್ಲಿ ಹೊರಟಿದ್ದಾರೆ.

ಸತೀಶ್ ನಾಯ್ಕ ಭದ್ರಾವತಿ : ಇವರು ಪ್ರಸ್ತುತ ಭಾರತದ ಪ್ರವಾಸಿ, ತಮಿಳುನಾಡಿನ ನಿವಾಸಿ ಮತ್ತು ಕನ್ನಡ ಕಾವ್ಯಕೃಷಿಯ ಹವ್ಯಾಸಿ. ಪವರ್ ಗ್ರಿಡ್ ಕಾರ್ಪೋರೇಶನ್ ಆಫ್ ಇಂಡಿಯಾ ಸರ್ಕಾರಿ ಸಂಸ್ಥೆಯಲ್ಲಿ ವೃತ್ತಿಪರರಾಗಿರುವ ಇವರು ಕವಿತೆ ಬರೆಯುವುದರ ಮೂಲಕ ಕನ್ನಡ ಸಾಹಿತ್ಯ ಸೇವೆಯನ್ನು ಪ್ರವೃತ್ತಿಯಾಗಿಸಿಕೊಂಡಿದ್ದಾರೆ.

ಇವರು ಕಂಡ ಬೆರಗಿನ ಪ್ರಪಂಚಕ್ಕೆ ಎಲ್ಲರನ್ನು ಪರಿಚಯಿಸುವ ಪ್ರಯತ್ನವನ್ನು ಈ ಸಂಕಲನದ ಮೂಲಕ ಮಾಡುವ ಉದ್ದೇಶ ಇವರದ್ದಾಗಿದೆ.

Kannada Book release

ಇದೇ ಭಾನುವಾರ ಲೋಕಾರ್ಪಣೆಯ ಕಾರ್ಯಕ್ರಮದಲ್ಲಿ ಸಾಹಿತ್ಯಾಸಕ್ತರು ಪಾಲ್ಗೊಂಡು ಇಬ್ಬರು ಯುವ ಕವಿಗಳನ್ನ ಪ್ರೋತ್ಸಾಹಿಸೋಣ ..

* ಗೋರವಿ ಆಲ್ದೂರು ( ಮಡಿಲ ನೂಲಿನ ಕೌದಿ )
* ಸತೀಶ್ ನಾಯ್ಕ ಭದ್ರಾವತಿ ( ಕಂಡಷ್ಟು ಬೆರಗಿದೆ )

ದಿನಾಂಕ : 06 / 03/2016

ಸಮಯ : ಬೆಳಗ್ಗೆ 9.30 ಕ್ಕೆ

ಸ್ಥಳ :
ಸಮುಚ್ಛಯ ರಂಗಮಂದಿರ, ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಂಗಳೂರು

(ಒನ್ಇಂಡಿಯಾ ಕನ್ನಡ ಸುದ್ದಿ)

English summary
Kannada Books release event : Madila Noolina Koudi by Goravi Aldur and Kandashtu Beragide Satish Naik Bhadravathi are set to release on March 06, 2016 at Kalagrama, Bengaluru, Musician Hamsalekha, Writer Pratibha NandaKumar, Jogi alias Girish Rao, Poet HS Venkatesh Murthy will preside over the function.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X