ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Video; ಬೆಂಗಳೂರು ಪೊಲೀಸರನ್ನು ತಳ್ಳಿದ ಮಧ್ಯಪ್ರದೇಶ ಸಚಿವ..!

|
Google Oneindia Kannada News

ಬೆಂಗಳೂರು, ಮಾರ್ಚ್ 12: ಮಧ್ಯಪ್ರದೇಶ ರಾಜಕೀಯ ಹೈಡ್ರಾಮಾಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮಹತ್ವದ ಘಟನೆ ನಡೆದಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಬೆಂಗಳೂರಿನ ರೆಸಾರ್ಟ್‌ನಲ್ಲಿ ಉಳಿದುಕೊಂಡಿರುವ ಮಧ್ಯಪ್ರದೇಶ ಕಾಂಗ್ರೆಸ್ ಶಾಸಕರನ್ನು ಭೇಟಿಯಾಗಲು ಬಂದಿದ್ದ ಮಧ್ಯಪ್ರದೇಶ ಸಚಿವ ಹಾಗೂ ಪೊಲೀಸರ ನಡುವೆ ತಳ್ಳಾಟ ನಡೆದಿದೆ.

ತುಮಕೂರು ರಸ್ತೆಯ ಚಿಕ್ಕಜಾಲ ಬಳಿಯ ಎಂಬೆಸಿ ರೆಸಾರ್ಟ್‌ನಲ್ಲಿ ತಂಗಿರುವ ಕಾಂಗ್ರೆಸ್ ಶಾಸಕರನ್ನು ಭೇಟಿಯಾಗಲು ಗುರುವಾರ ಮಧ್ಯಾಹ್ನ ಮಧ್ಯಪ್ರದೇಶ ಸರ್ಕಾರದ ಸಚಿವ ಜಿತು ಪಟ್ಟಾರಿ ಬಂದಿದ್ದರು.

ಮಧ್ಯಪ್ರದೇಶ; ಬಿಜೆಪಿ ಸೇರಲಿರುವ ಜ್ಯೋತಿರಾಧಿತ್ಯಾ ಸಿಂದಿಯಾಮಧ್ಯಪ್ರದೇಶ; ಬಿಜೆಪಿ ಸೇರಲಿರುವ ಜ್ಯೋತಿರಾಧಿತ್ಯಾ ಸಿಂದಿಯಾ

ಈ ವೇಳೆ ಹೋಟೆಲ್ ಒಳಗೆ ತೆರಳುತ್ತಿದ್ದ ಪಟ್ಟಾರಿ ಅವರನ್ನು ತಡೆದ ಪೊಲೀಸರೊಂದಿಗೆ ಜಿತು ಅವರು ಮಾತಿನ ಚಕಮಕಿ ನಡೆಸಿ ಪೊಲೀಸ್ ಇನ್ಸ್‌ಪೆಕ್ಟರ್ ಅವರನ್ನು ತಳ್ಳಿದ್ದಾರೆ. ಕಡೆಗೆ ಹೋಟೆಲ್ ಒಳಗೆ ಹೋಗಲು ಬಿಡದ ಪೊಲೀಸರು ಜಿತು ಅವರನ್ನು ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಚಿಕ್ಕಜಾಲ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದಾರೆ.

Madhya Pradesh Minister Jitu Pattari And Police Clashes In Bengaluru Resort

ರಾಜೀನಾಮೆ ನೀಡಿರುವ ಒಟ್ಟು 21 ಮಧ್ಯಪ್ರದೇಶ ಶಾಸಕರು ಚಿಕ್ಕಜಾಲ ಬಳಿಯ ಎಂಬೆಸಿ ರೆಸಾರ್ಟ್‌ನಲ್ಲಿ ತಂಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

English summary
Madhya Pradesh Minister Jitu Pattari And Police Clashes In Bengaluru Resort. Clash while Minister Jitu Pattari Meet Resigned Madhya Pradesh MLAs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X