ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ವೈನ್ ಲೈಬ್ರರಿ ಮತ್ತು ವೈನ್ ಅಕಾಡೆಮಿ

By Rajendra
|
Google Oneindia Kannada News

ಬೆಂಗಳೂರು, ಜೂ.7: ಇದೇ ಮೊದಲ ಬಾರಿಗೆ ವಿಶಿಷ್ಟ ವೈನ್ ಲೈಬ್ರರಿ ಹಾಗೂ ವೈನ್ ಅಕಾಡೆಮಿ ಬೆಂಗಳೂರಿನಲ್ಲಿ ಬಾಗಿಲು ತೆರೆದಿದೆ! ಮಧುಲೋಕ ಲಿಕ್ಕರ್ ಬೊಟಿಕ್ ಸಂಸ್ಥಾಪಕರಾದ ಕೆ.ಎಸ್.ಲೋಕೇಶ್ ಅವರ ಕನಸಿನ ಕೂಸಾಗಿರುವ ಮಧುಲೋಕ ಎನೋಟಿಕಾ ನಗರದ ಎಲ್ಲಾ ವೈನ್ ಪ್ರಿಯರಿಗೆ ಕೇವಲ ಉತ್ತಮ ಶ್ರೇಣಿಯ ವೈನ್ ಒದಗಿಸುವ ಭರವಸೆ ನೀಡುತ್ತಿದೆ.

ಸರ್ಜಾಪುರದ ಎಂಜಿಆರ್ ಕಾಂಪ್ಲೆಕ್ಸ್ ನಲ್ಲಿ 4,000 ಚದರ ಅಡಿಗಳಷ್ಟು ವಿಸ್ತೀರ್ಣದ ಎನೋಟಿಕಾ ಸುಂದರವಾಗಿ ವಿನ್ಯಾಸಗೊಂಡಿದ್ದು ಐರಿಶ್ ಪಬ್ ಅನ್ನು ಹೋಲುತ್ತದೆ. ಅಲ್ಲದೆ, ಮರದ ಪೀಪಾಯಿ ಉಳ್ಳ ಟೇಬಲ್ ಗಳು ಹಾಗೂ ಕ್ರಿಸ್ ಕ್ರಾಸ್ ಹಾರ್ಡ್ ವುಡ್ ಬೆಂಚ್ ಗಳು ಮತ್ತು ವೈನ್ ಸವಿಯುವವರಿಗಾಗಿ ತಗ್ಗಿನ ಟೇಬಲ್ ಗಳೊಂದಿಗೆ ಇದು ಸಕಲ ರೀತಿಯಲ್ಲೂ ಸಜ್ಜಾಗಿದೆ. [ದುಬಾರಿ ವೈನ್ ನಂ.1 : ಡಾಮ್ ರೊಮೆನ್ ಕಾಂಟಿ 1997]


ಎನೋಟಿಕಾ, ವೈನ್ ಮಾದರಿಯನ್ನು ನೋಡಲು, ಇವುಗಳ ಚರಿತ್ರೆಯ ಬಗ್ಗೆ ತಿಳಿದುಕೊಳ್ಳಲು, ಇದರ ಬೆಲೆ ನಿರ್ಣಯಿಸಲು, ಅಲ್ಲದೆ ವೈನ್ ರುಚಿ ನೋಡುವುದರಲ್ಲಿ ಭಾಗಿಯಾಗಲು ಇರುವ ಸ್ಥಳವಾಗಿದ್ದು ಇದು ವೈನ್ ಶಿಕ್ಷಣ ನೀಡುವ ಕೇಂದ್ರ ಸ್ಥಾನವಾಗಲಿದೆ. ಎನೋಟಿಕಾವು ವೈನ್ ಪ್ರಿಯರಿಗಾಗಿ ವರ್ಷಪೂರ್ತಿ ಕಾರ್ಯಕ್ರಮಗಳು, ಟೇಸ್ಟಿಂಗ್ಸ್ ಹಾಗೂ ಆಹಾರ ಜೋಡಣೆಗಳನ್ನು ಹಮ್ಮಿಕೊಂಡಿದೆ. ಕೋರ್ಸ್ ಗಳು ಹಾಗೂ ಟೇಸ್ಟಿಂಗ್ ಗಳನ್ನು ದೆಹಲಿಯ ಪ್ರತಿಷ್ಠಿತ ವೈನ್ ಸಲಹೆಗಾರರಾದ ವೈ-ನಾಟ್ ಇವರು ನಿರ್ವಹಿಸುತ್ತಾರೆ.

ನಗರದ ವೈನ್ ಪ್ರಿಯರ ಪ್ರಮಾಣವನ್ನು ಹೆಚ್ಚಿಸುವ ಸಾಮರ್ಥ್ಯ ಹೊಂದಿರುವ ಈ ಸ್ಥಳವು ಎಲ್ಲಾ ವಯಸ್ಸಿನವರಿಗೂ, ಸ್ಥಳ ನಿರ್ಬಂಧವಿಲ್ಲದೆ ಎಲ್ಲರ ಅಭಿರುಚಿಯನ್ನೂ ತಣಿಸುತ್ತದೆ. ಇದು ವೈನ್ ಆಧಾರಿತ ಬಾರ್ ಗಳ ಉತ್ತಮ ಸ್ಥಳವಾಗಿದೆ. ಅಲ್ಲದೆ ಎಲ್ಲಾ ವೈನ್ ಟ್ಯುಟೋರಿಯಲ್ ಗಳು ಬೋರಿಂಗ್ ಆಗಿರುವುದಿಲ್ಲ ಎಂಬುದನ್ನು ತಿಳಿಯಪಡಿಸುವ ಪ್ರಥಮ ಸ್ಥಳವಾಗಿದೆ.

ಎನೋಟಿಕಾ ವಿಶೇಷಗಳು:
*ಉತ್ತಮ ಬೆಲೆಯ ದ್ರಾಕ್ಷಿಗಳನ್ನು ಒಳಗೊಂಡ ವಿವಿಧ ಪ್ರದೇಶಗಳ ಹಾಗೂ ವೈನ್ ಶೈಲಿಯನ್ನು ಹೊಂದಿದ್ದು ನಿಷ್ಠೆಯ ವೈನ್ ಸೇವೆಯನ್ನು ಒದಗಿಸುತ್ತದೆ.
*ಅತಿಥಿಗಳಿಗೆ ಸಲಹೆ ನೀಡಲು ಇನ್-ಹೌಸ್ ಡಬ್ಲ್ಯೂಸೆಟ್ ಲೆವೆಲ್ 3 ಸೊಮೇಲಿಯರ್ ಎಂಬ ತರಬೇತಿ ಹೊಂದಿರುವ ತಂಡವನ್ನು ಹೊಂದಿದೆ.
*ಈ ಸೊಮೇಲಿಯರ್ ನಿಯಮಿತ ಆಧಾರದಲ್ಲಿ ತರಗತಿಯನ್ನು ನಡೆಸುತ್ತಿದ್ದು ಇವು ವೈನ್ ಜಾಗೃತಿಯನ್ನು ಮೂಡಿಸತ್ತವೆ, ಅಲ್ಲದೆ ವೈನ್ ಮೂಲಗಳ ಬಗ್ಗೆ, ದ್ರಾಕ್ಷಿಯ ವಿಧಗಳ ಬಗ್ಗೆ, ವೈನ್ ರುಚಿ ನೋಡುವ ಪಾಠಗಳು ಹಾಗೇ ಆಹಾರ ಜೋಡಣೆಯಂತಹ ಪ್ರಾಯೋಗಿಕ ಚಟುವಟಿಕೆಗಳು ಮುಂತಾದ ವೈನ್ ಬಗೆಗಿನ ಕುತೂಹಲಗಳಿಗೆ ಉತ್ತರಿಸುತ್ತದೆ.
*ಲಂಡನ್ ನಿಂದ ಡಬ್ಲ್ಯೂಸೆಟ್ ಕೋರ್ಸ್ ಗಳು ಪ್ರಮಾಣೀಕರಿಸಲ್ಪಟ್ಟಿವೆ.
*ಇದೊಂದು ವೈನ್ ಕೇಂದ್ರೀಕೃತ ಚಿತ್ರಗಳನ್ನು ದಾಖಲೆಗಳನ್ನು ತೋರಿಸುವಂತಹ ವೈನ್ ಥಿಯೇಟರ್ ಆಗಿದೆ.
*ವೈನ್ ಶಾಪ್ ಇದಕ್ಕೆ ಹೊಂದಿಕೊಂಡಿದ್ದು, ಎನೋಟಿಕಾದಲ್ಲಿ ಜನರು ರುಚಿ ನೋಡಿ ಸವಿದ ವೈನ್ ಅನ್ನು ತಮ್ಮ ಮನೆಗಳಿಗೂ ಕೊಂಡೊಯ್ಯಬಹುದು.

Madhuloka Enoteca
ಮಧುಲೋಕ ಲಿಕ್ಕರ್ ಬೊಟಿಕ್‍ನ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎಸ್.ಲೋಕೇಶ್ ಹೇಳುತ್ತಾರೆ, "ಹಲವಾರು ವರ್ಷಗಳಿಂದ ಬೆಂಗಳೂರಿಗರ ಮದ್ಯಾಭ್ಯಾಸಗಳಲ್ಲಿ ಹಲವು ಬದಲಾವಣೆಗಳಾಗಿವೆ. ಪ್ರವಾಸಗಳನ್ನು ಕೈಗೊಂಡು, ಉತ್ತಮ ಜೀವನಕ್ಕೆ ತೆರೆದುಕೊಂಡಿರುವ ಜನರು ಪ್ರೀಮಿಯಂ ಬ್ರಾಂಡ್ ಗಳಿಗೆ ಬೇಡಿಕೆ ಇಡುತ್ತಾರೆ. ಮಧುಲೋಕ ಯಾವತ್ತೂ, ಸಾರ್ವಜನಿಕರ ನಾಡಿಯನ್ನು ಅರಿತು ಅವರ ಅಗತ್ಯಗಳನ್ನು ಪೂರೈಸುತ್ತಾ ಬಂದಿದೆ. ಇತ್ತೀಚಿನ ದಿನಗಳಲ್ಲಿ ವೈನ್ ಮುಂಚೂಣಿಗೆ ಬಂದಿದ್ದು, ಎನೋಟಿಕಾವು ನಗರದ ವೈನ್ ಲ್ಯಾಂಡ್ ಸ್ಕೇಪ್ ಗೆ ಪರಿಪೂರ್ಣವಾದ ಸೇರ್ಪಡೆಯಾಗಿದೆ.''

ಕಾರ್ಯಕ್ರಮದ ಜಂಟಿ ಆತಿಥೇಯರಾಗಿದ್ದ ಪ್ರಸಿದ್ಧ ಸೊಮೇಲಿಯರ್ ಮಗನ್ ದೀಪ್ ಸಿಂಗ್ ಹೇಳುತ್ತಾರೆ, "ವೈನ್ ಲೈಬ್ರರಿ ಅಥವಾ ಎನೋಟಿಕಾದ ಪರಿಕಲ್ಪನೆ ಹೇಗಿದೆಯೆಂದರೆ, ಇದು ವೈನ್ ಬಗ್ಗೆ ಉತ್ತಮ ತಿಳವಳಿಕೆ ನೀಡಲು ಅವಕಾಶ ಕಲ್ಪಿಸುತ್ತದೆ. ಜನರಂತೆ, ವೈನ್ ಕೂಡಾ ಗುಣಲಕ್ಷಣಗಳು, ಆಳ ಹಾಗೂ ವ್ಯಕ್ತಿತ್ವವನ್ನು ಹೊಂದಿದೆ. ಮಧುಲೋಕದ ಎನೋಟಿಕಾ ವೈನ್ ಗಳನ್ನು ಇನ್ನೂ ಆಳವಾದ ಅರ್ಥೈಸಿಕೊಳ್ಳಲು ಸಹಕರಿಸುತ್ತದೆ ಹಾಗೂ ದಿನಾಂತ್ಯದಲ್ಲಿ ಮೆಚ್ಚುಗೆಯಾಗುವ ವೈನ್ ಬಾಟಲಿಯನ್ನು ಮನೆಗೆ ಕೊಂಡೊಯ್ಯಬಹುದಾಗಿದೆ" ಎನ್ನುತ್ತಾರೆ.

ಮಧುಲೋಕದ ಪ್ರಧಾನ ಮಳಿಗೆಯು ಎಚ್‍ಎಸ್‍ಆರ್ ಲೇಔಟ್ ನಲ್ಲಿ 1999ರಲ್ಲಿ ಕೆ.ಎಸ್.ಲೋಕೇಶ್ ಅವರ ಸಾರಥ್ಯದಲ್ಲಿ ಆರಂಭಗೊಂಡಿತು. ಈ ಸ್ವತಂತ್ರ ವೈನ್ ಬೊಟಿಕ್ ವರ್ಷಗಳಿಂದ ಬೆಳೆಯುತ್ತಾ ಬಂದಿದೆ. ಮಧುಲೋಕವು ಭಾರತೀಯ ಹಾಗೂ ವಿದೇಶಿ ಬೀರ್, ಬ್ರಾಂಡಿ, ಜಿನ್, ಲಿಕ್ಕರ್, ವರ್ಮೌತ್, ವಿಸ್ಕಿ, ವೈನ್, ವೊಡ್ಕಾ, ಟೆಕಿಲಾ ಹಾಗೂ ಅಗೇವ್ ಮುಂತಾದ ಹಲವಾರು ಆಯ್ಕೆಗಳುಳ್ಳ ಒಂದು ಲಿಕ್ಕರ್ ಬೊಟಿಕ್ ಆಗಿದೆ.

ಇದರಲ್ಲಿರುವ ಎಲ್ಲಾ ಸಿಬ್ಬಂದಿ ಸೊಮೇಲಿಯರ್ ಪ್ರಮಾಣೀಕೃರಾಗಿದ್ದಾರೆ ಅಥವಾ ತರಬೇತಿಯನ್ನು ಹೊಂದಿದವರಾಗಿದ್ದಾರೆ. ಮಧುಲೋಕ ಎಚ್‍ಎಸ್‍ಆರ್ ಲೇಔಟ್, ಬೆಳ್ಳಂದೂರು, ಬ್ರೂಕ್ ಫೀಲ್ಡ್ಸ್, ಕೋರಮಂಗಲ, ವೈಟ್‍ಫೀಲ್ಡ್, ಶಿವಗಂಗಾ ಲೇಔಟ್, ರಾಜರಾಜೇಶ್ವರಿ ನಗರ, ಬನ್ನೇರುಘಟ್ಟ ರಸ್ತೆ, ಡಾ.ರಾಜ್ ಕುಮಾರ್ ರಸ್ತೆ, ಬಿಟಿಎಂ ಲೇಔಟ್, ರೆಸಿಡೆನ್ಸಿ ರಸ್ತೆ ಹಾಗೂ ವಿಠಲ ಮಲ್ಯ ರಸ್ತೆಯಲ್ಲಿ ತನ್ನ ಶಾಖೆಗಳನ್ನು ಹೊಂದಿದೆ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು www.madhuloka.com ವೆಬ್ ಸೈಟ್ ಗೆ ಲಾಗಿನ್ ಆಗಿ ಅಥವಾ ವಿಪುಲ್ ಅವರಿಗೆ- 99000 88996 ಕರೆ ಮಾಡಿ. (ಒನ್ಇಂಡಿಯಾ ಕನ್ನಡ)

English summary
Bangalore now has an exclusive wine library and a centre for wine education for the first time! A brain child of K.S Lokesh, Founder of Madhuloka liquor boutique, Enoteca by Madhuloka promises to offer only the best range of wines for all wine connoisseurs in the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X