• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶೇಕ್ ಸ್ಪಿಯರನ ಮ್ಯಾಕ್ಬೆತ್ 'ಮಾರೀಕಾಡು' ನಾಟಕ ನೋಡಿ

By Mahesh
|

ಬೆಂಗಳೂರು, ಮಾ.26: ಸಂಕೇತ್ ತಂಡ, ರಂಗಶಂಕರದಲ್ಲಿ ಇದೇ ಶುಕ್ರವಾರ ಮತ್ತು ಶನಿವಾರ ದಂದು , ಶೇಕ್ಸ್‌ಪಿಯರನ ಮ್ಯಾಕ್‌ಬೆತ್ ಆಧಾರಿತ, ಡಾ . ಚಂದ್ರಶೇಖರ ಕಂಬಾರರ ರಚನೆಯ ಮಾರೀ ಕಾಡು ನಾಟಕವನ್ನು ಪ್ರದರ್ಶಿಸಲಿದೆ.

ಮೂಲ : ವಿಲಿಯಂ ಶೇಕ್ಸ್‌ಪಿಯರನ ಮ್ಯಾಕ್‌ಬೆತ್ ಆಧಾರಿತ

ರಚನೆ : ಡಾ ಚಂದ್ರಶೇಖರ ಕಂಬಾರ

ವಿನ್ಯಾಸ ಮತ್ತು ನಿರ್ದೇಶನ : ಎಸ್ ಸುರೇಂದ್ರನಾಥ್

ಪ್ರಸ್ತುತಿ : ಸಂಕೇತ್

ಸ್ಥಳ: ರಂಗಶಂಕರ

ದಿನಾಂಕ ಮತ್ತು ಸಮಯ : 27/03/2015 ಸಂಜೆ 7:30 ಕ್ಕೆ

28/03/2015 ಮಧ್ಯಾಹ್ನ 3:30 ಕ್ಕೆ ಮತ್ತು ಸಂಜೆ 7:30 ಕ್ಕೆ

ಟಿಕೆಟ್ ದರ : ರೂ. 100/-

Online Booking : www.bookmyshow.com

ಟಿಕೆಟ್ ಗಳು ರಂಗಶಂಕರದಲ್ಲಿ ದೊರೆಯುತ್ತವೆ.

'ಮಾರೀಕಾಡು' ನಾಟಕ: ವಿಲಿಯಮ್ ಶೇಕ್ಸ್ ಪಿಯರ್ ನ ಮ್ಯಾಕ್ ಬೆತ್ ಕಂಬಾರರ ಕೈಲಿ ಒಂದು ಕನ್ನಡ ಜಾನಪದ ಕತೆಯಾಗಿಬಿಟ್ಟಿದೆ. ಅಲ್ಲಿನ ಮ್ಯಾಕ್ ಬೆತ್ ಇಲ್ಲಿ ಮದಕರಿಯಾಗುತ್ತಾನೆ. ಅಲ್ಲಿನ ಬರನಮ್ ಕಾಡು ಇಲ್ಲಿ ಮಾರೀಕಾಡಾಗುತ್ತದೆ.

ಅಲ್ಲಿನ ಮಾಯಾವಿಗಳು ಇಲ್ಲಿ ಕಾಡಿನ ಆತ್ಮವಾಗುತ್ತದೆ. ಕಂಬಾರರ ಮಾರೀಕಾಡು ಅಧಿಕಾರಕ್ಕೆ, ಮನುಷ್ಯನ ಅಧಿಕಾರದ ಹಪಾಹಪಿಗೆ ಸವಾಲನ್ನೆಸೆಯುತ್ತದೆ. ಕಾಡಿನ ನಿಗೂಢಗಳನ್ನು ಅರ್ಥ ಮಾಡಿಕೊಳ್ಳದೆ, ಕಾಡಿನ ಜೊತೆ ಸಂವಾದವನ್ನೂ ಸಾಧ್ಯಮಾಡಿಕೊಳ್ಳದೆ ನಾಶಕ್ಕೆ ಗುರಿಯಾದವನ ಕತೆಯಿದು. ತನ್ನ ವಿವರಗಳಲ್ಲಿ, ಮೂಡಿ ಬಂದ ಪಾತ್ರಗಳಲ್ಲಿ ಮಾರೀಕಾಡು ಎಷ್ಟರ ಮಟ್ಟಿಗೆ ದೇಸೀ ನಾಟಕವೇ ಆಗಿಬಿಟ್ಟಿದೆಯೆಂದರೆ ಇದನ್ನು ಕಂಬಾರರ ನಾಟಕವೆಂದೇ ಕರೆಯಬೇಕು.

ಕನ್ನಡದಲ್ಲಿ ಇದುವರೆಗೆ ಇದ್ದ ಕಾಡುಗಳು ಮೂರು. ಮನುಷ್ಯನಿಗೆ ಸವಾಲಾಗಿದ್ದ ಶಿವರಾಮ ಕಾರಂತರ ಕಾಡು, ಸಮಾನತೆಗೆ ಸಂವಾ ದಿಯಾಗಿದ್ದ ಕುವೆಂಪು ಕಾಡು, ವಿಸ್ಮಯ ಮತ್ತು ದುಗುಡಕ್ಕೆ ಕಾರಣವಾಗಿದ್ದ ತೇಜಸ್ವಿ ಕಾಡು. ಇದೀಗ ನಾಲ್ಕನೆಯ ಕಾಡು ಕನ್ನಡಕ್ಕೆ ದೊರೆತಿದೆ.

ಕಂಪಿಲರಾಯ, ಮದಕರಿನಾಯಕ ಮತ್ತು ಕರಿಭಂಟರೆಂಬ ಶೂರರು, ಅವರ ಸತ್ವವನ್ನು ಅಡಗಿಸುವ ರಾಣಿ, ಇವರೆಲ್ಲರನ್ನೂ ಕಂಗೆಡಿಸಬಲ್ಲ ಮಾರಿ; ಪಿತೂರಿಗಳು, ಷಡ್ಯಂತ್ರಗಳು, ಕೊಲೆಗಳು...ಇದು ಕಂಬಾರರ ಕಾಡು. ಈ ನಾಟಕ ನಮ್ಮನ್ನು ಹೊಸ ಅನುಭವಕ್ಕೆ ತೆರೆದುಕೊಳ್ಳುವಂತೆ ಮಾಡುವುದರ ಜೊತೆಗೆ ಹಳೆಯದರ ಮರು ಅನ್ವೇಷಣೆಯಲ್ಲೂ ತೊಡಗಿಸುತ್ತಾ ಹೋಗುತ್ತದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Maari Kaadu is a Kannada play will be staged at Ranga Shankara on Friday and Saturday(Mar.28). The directed by S Surendranath which is based on Shakespeare's Macbeth, Chandrashekhara Kambara has beautifully transformed the Elizabethan classic into a Kannada folk tale.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more