ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ದಕ್ಷಿಣದಲ್ಲಿ ಬಿಜೆಪಿಗೆ ಹಿನ್ನಡೆ, ಪಕ್ಷ ಬಿಟ್ಟ ಲಕ್ಷ್ಮೀನಾರಾಯಣ!

|
Google Oneindia Kannada News

Recommended Video

Lok Sabha Elections 2019:ಬಿಜೆಪಿ ಬಿಟ್ಟು ಕೈ ಸೇರಿದ ವಿ ಸೋಮಣ್ಣ ಆಪ್ತ | ಬೆಂಗಳೂರು ದಕ್ಷಿಣ ಬಿಜೆಪಿಗೆ ಕಷ್ಟ

ಬೆಂಗಳೂರು, ಏಪ್ರಿಲ್ 08 : ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಬೆಂಗಳೂರು ದಕ್ಷಿಣ ಕೇತ್ರದಲ್ಲಿ ಬಿಜೆಪಿಗೆ ಭಾರಿ ಹಿನ್ನಡೆಯಾಗಿದೆ. ವಿ.ಸೋಮಣ್ಣ ಆಪ್ತರಾದ ಎಂ.ಲಕ್ಷ್ಮೀನಾರಾಯಣ ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದಾರೆ.

ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಎಂ.ಲಕ್ಷ್ಮೀನಾರಾಯಣ ಅವರು ದಿನೇಶ್ ಗುಂಡೂರಾವ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದರು. ವಿಜಯನಗರ, ಹಂಪಿ ನಗರ ಭಾಗದ 100ಕ್ಕೂ ಅಧಿಕ ಬಿಜೆಪಿ ಮುಖಂಡರು ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು.

ಬೆಂಗಳೂರು ದಕ್ಷಿಣ: ಸೋಷಿಯಲ್ ಮೀಡಿಯಾದಲ್ಲಿ ಏನಿದೆ ಹವಾ?ಬೆಂಗಳೂರು ದಕ್ಷಿಣ: ಸೋಷಿಯಲ್ ಮೀಡಿಯಾದಲ್ಲಿ ಏನಿದೆ ಹವಾ?

ಕಾಂಗ್ರೆಸ್ ಸೇರಿದ ಬಳಿಕ ಮಾತನಾಡಿದ ಎಂ.ಲಕ್ಷ್ಮೀನಾರಾಯಣ ಅವರು, 'ಯಾವುದೋ ಲೀಡರ್ ನಂಬಿಕೊಂಡು ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಹೋದೆವು, ಈಗ ಸರ್ವಾಧಿಕಾರಿ ಧೋರಣೆ ಖಂಡಿಸಿ ಬಿಜೆಪಿಯನ್ನು ಬಿಟ್ಟು ಬಂದೆವು' ಎಂದು ಹೇಳಿದರು.

ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ ಆಸ್ತಿ ವಿವರಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ ಆಸ್ತಿ ವಿವರ

ವಿಜಯನಗರ ಹಾಗೂ ಚಿಕ್ಕ ಪೇಟೆಯಲ್ಲಿ ಲಕ್ಷ್ಮೀನಾರಾಯಣ ಅವರು ಸಾಕಷ್ಟು ಪ್ರಭಾವವನ್ನು ಹೊಂದಿದ್ದಾರೆ. 2018ರ ವಿಧಾನಸಭೆ ಚುನಾವಣೆಗೆ ಬಿಜೆಪಿಯಿಂದ ಚಾಮರಾಜಪೇಟೆ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಅವರು ಸೋಲು ಕಂಡಿದ್ದರು....

ಬೆಂಗಳೂರು ದಕ್ಷಿಣ ಚುನಾವಣಾ ಪುಟ

ಯಾರು ಎಂ.ಲಕ್ಷ್ಮೀನಾರಾಯಣ

ಯಾರು ಎಂ.ಲಕ್ಷ್ಮೀನಾರಾಯಣ

ಎಂ.ಲಕ್ಷ್ಮೀ ನಾರಾಯಣ ಅವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾಜಿ ಉಪ ಮೇಯರ್. ವಿ.ಸೋಮಣ್ಣ ಆಪ್ತರಾಗಿದ್ದ ಅವರು 2018ರ ವಿಧಾನಸಭೆ ಚುನಾವಣೆಯಲ್ಲಿ ಚಾಮರಾಜಪೇಟೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದರು. ಚುನಾವಣೆಯಲ್ಲಿ 32,202 ಮತಗಳನ್ನು ಪಡೆದು ಜಮೀರ್ ಅಹಮದ್ ಖಾನ್ ಅವರ ವಿರುದ್ಧ ಸೋಲು ಅನುಭವಿಸಿದ್ದರು.

ಕಾಂಗ್ರೆಸ್‌ಗೆ ಮರಳಿದ್ದೇನೆ

ಕಾಂಗ್ರೆಸ್‌ಗೆ ಮರಳಿದ್ದೇನೆ

ಕಾಂಗ್ರೆಸ್ ಸೇರಿದ ಬಳಿಕ ಮಾತನಾಡಿದ ಎಂ.ಲಕ್ಷ್ಮೀನಾರಾಯಣ ಅವರು, 'ಕಾಂಗ್ರೆಸ್ ಪಕ್ಷ ನನಗೆ ಹೊಸದಲ್ಲ. ಇಲ್ಲೇ ಎಲ್ಲಾ ಅಧಿಕಾರವನ್ನು ಅನುಭವಿಸಿದ್ದೇನೆ. ಅಲ್ಲಿನ ಸರ್ವಾಧಿಕಾರಿ ಧೋರಣೆಯಿಂದ ಬೇಸತ್ತು ಪಕ್ಷ ಬಿಟ್ಟಿದ್ದೇನೆ' ಎಂದು ಹೇಳಿದರು.

ಹರಿಪ್ರಸಾದ್ ಋಣ ನಮ್ಮ ಮೇಲಿದೆ

ಹರಿಪ್ರಸಾದ್ ಋಣ ನಮ್ಮ ಮೇಲಿದೆ

'ವಿಜಯನಗರ ಶಾಸಕ ಕೃಷ್ಣಪ್ಪ ಅವರ ಮೂಲಕ, ಬಿ.ಕೆ.ಹರಿಪ್ರಸಾದ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ್ದೇವೆ. ಹರಿಪ್ರಸಾದ್ ಅವರ ಋಣ ನಮ್ಮ ಮೇಲಿದೆ. ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಲು ಒಟ್ಟಾಗಿ ಕೆಲಸ ಮಾಡುತ್ತೇವೆ' ಎಂದು ಎಂ.ಲಕ್ಷ್ಮೀನಾರಾಯಣ ಹೇಳಿದರು.

ತೇಜಸ್ವಿ ಸೂರ್ಯಗೆ ಹಿನ್ನಡೆ

ತೇಜಸ್ವಿ ಸೂರ್ಯಗೆ ಹಿನ್ನಡೆ

ಎಂ.ಲಕ್ಷ್ಮೀನಾರಾಯಣ ಅವರು ಬಿಜೆಪಿ ತೊರೆದಿದ್ದು ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯಗೆ ಹಿನ್ನಡೆ ಉಂಟು ಮಾಡಿದೆ. ವಿಜಯನಗರ ಹಾಗೂ ಚಿಕ್ಕ ಪೇಟೆಯಲ್ಲಿ ಅವರು ಪ್ರಭಾವವನ್ನು ಹೊಂದಿದ್ದು ಬಿ.ಕೆ.ಹರಿಪ್ರಸಾದ್ ಅವರ ಪರವಾಗಿ ಕೆಲಸ ಮಾಡಲಿದ್ದಾರೆ.

English summary
Set back for BJP in Bangalore South lok sabha seat. BJP leader and Former BBMP deputy mayor M.Lakshminarayana quit BJP and joined Congress in the presence of KPCC president Dinesh Gundu Rao.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X