ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಬಿಟ್‌ಕಾಯಿನ್ ಆಸೆ ತೋರಿಸಿ 13.7 ಲಕ್ಷ ರೂ. ವಂಚನೆ

|
Google Oneindia Kannada News

ಬೆಂಗಳೂರು, ಜನವರಿ 6: ಬಿಟ್‌ಕಾಯಿನ್‌ಗಳಲ್ಲಿ ಹೂಡಿಕೆ ಮಾಡುವಂತೆ ಆಮಿಷವೊಡ್ಡಿದ ವಂಚಕರ ಬಲೆಗೆ ಬಿದ್ದ ಬೆಂಗಳೂರಿನ ಟೆಕ್ಕಿಯೊಬ್ಬರು 13.7 ಲಕ್ಷ ರೂಪಾಯಿ ಅನ್ನು ಕಳೆದುಕೊಂಡಿರುವ ಘಟನೆ ಬೆಂಗಳೂರಿನ ಗೊಟ್ಟಿಗೆರೆಯಲ್ಲಿ ನಡೆದಿದೆ. 31 ವರ್ಷದ ಈರಪ್ಪ ನಾಯ್ಕ್ ಎಂಬುವವರಿಗೆ ಬಿಟ್‌ಕಾಯಿನ್‌ಗಳಲ್ಲಿ ಹೂಡಿಕೆ ಮಾಡುವ ಆಸೆ ತೋರಿಸಿ ಮಕ್ಮಲ್ ಟೋಪಿ ಹಾಕಲಾಗಿದೆ. ಕಳೆದ ಅಕ್ಟೋಬರ್ 11 ಮತ್ತು ಡಿಸೆಂಬರ್ 15ರ ನಡುವೆ ಒಟ್ಟು 13.7 ಲಕ್ಷ ರೂಪಾಯಿ ಅನ್ನು ವಂಚಿಸಲಾಗಿದೆ ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ.

"ಕಳೆದ ಅಕ್ಟೋಬರ್ 11ರಂದು 00202A NEXBTC ಫಾರ್ಚೂನ್ 019 ಎಂಬ ಹೆಸರಿನ ಅಪರಿಚಿತ ವಾಟ್ಸಾಪ್ ಗುಂಪಿಗೆ ಅವರನ್ನು ಸೇರಿಸಲಾಯಿತು. ಗುಂಪಿನಲ್ಲಿರುವ ವಂಚಕರು ಬಿಟ್‌ಕಾಯಿನ್ ವಹಿವಾಟು ಪ್ರಕ್ರಿಯೆಯ ಬಗ್ಗೆ ಮಾಹಿತಿ ಹಂಚಿಕೊಂಡರು, ಅದರಿಂದ ದೊಡ್ಡ ಲಾಭ ಗಳಿಸುವ ಸಲುವಾಗಿ ಹೂಡಿಕೆ ಮಾಡುವಂತೆ ಕೇಳಿದರು," ಎಂದು ವಿವರಿಸಲಾಗಿದೆ.

Recommended Video

ಬಿಟ್ ಕಾಯಿನ್ ಧಂದೆ ಬಗ್ಗೆ ಜಗದೀಶ್ ಶೆಟ್ಟರ್ ಹೇಳಿಕೆ | Oneindia Kannada

ನಿರ್ಮಲಾ ಸೀತಾರಾಮನ್ ಹೆಸರಿನಲ್ಲಿ ಬೆಂಗಳೂರು ವ್ಯಕ್ತಿಗೆ ಟೋಪಿ !ನಿರ್ಮಲಾ ಸೀತಾರಾಮನ್ ಹೆಸರಿನಲ್ಲಿ ಬೆಂಗಳೂರು ವ್ಯಕ್ತಿಗೆ ಟೋಪಿ !

ಆರಂಭದಲ್ಲೇ 3,04,262 ರೂಪಾಯಿ ಹೂಡಿಕೆ:

ಬಿಟ್‌ಕಾಯಿನ್ ಹೂಡಿಕೆಯ ಆಮಿಷದ ಹಿಂದಿನ ದುರಾಲೋಚನೆ ಬಗ್ಗೆ ಅರಿತುಕೊಳ್ಳದೇ ಆರಂಭಿಕ ಹಂತದಲ್ಲಿ 3,04,262 ರೂಪಾಯಿ ಹೂಡಿಕೆ ಮಾಡಲು ಒಪ್ಪಿಕೊಳ್ಳಲಾಯಿತು. ಹೆಚ್ಚಿನ ಮೊತ್ತ ಹೊರತೆಗೆಯಲು, ಗ್ರೂಪಿನ ಸದಸ್ಯರು ಹೆಚ್ಚು ಹೆಚ್ಚು ಹೂಡಿಕೆ ಮಾಡಿ ಲಾಭ ಗಳಿಸಿದ್ದಾರೆ ಎನ್ನುವಂತೆ ತಿಳಿಸಿದ್ದಾರೆ. ಆದಾಗ್ಯೂ, ಹಣವನ್ನು ಪಡೆಯಲು, ಅವರು ಇನ್ನೂ ಕೆಲವು ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ ಎಂದರು, ಅದಕ್ಕೂ ಒಪ್ಪಿಕೊಳ್ಳಲಾಯಿತು. ಹಲವು ಶುಲ್ಕಗಳ ಹೆಸರಿನಲ್ಲಿ 10 ಲಕ್ಷ ರೂಪಾಯಿ ಹಣವನ್ನು ಪಾವತಿ ಮಾಡಿದರು. ಅದಾಗ್ಯೂ, ಒಂದು ರೂಪಾಯಿ ಕೂಡಾ ಹಿಂತಿರುಗಿ ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಆಗ ತಾವು ವಂಚನೆಗೆ ಒಳಗಾಗಿರುವುದು ಗೊತ್ತಾಯಿತು.

Bengaluru: Lured with investing into bitcoins, techie loses Rs13.7 lakh from cyber crooks

ವಂಚನೆ ಪ್ರಕರಣ ದಾಖಲಿಸಿ ಪೊಲೀಸರು:

ಇದರ ಮಧ್ಯೆ ವಂಚನೆ ಪ್ರಕರಣವನ್ನು ತಿಳಿದ ಪೊಲೀಸರು ಅಪರಿಚಿತ ದುಷ್ಕರ್ಮಿಗಳ ವಿರುದ್ಧ 66ಸಿ (ಯಾವುದೇ ವ್ಯಕ್ತಿಯ ಎಲೆಕ್ಟ್ರಾನಿಕ್ ಸಹಿ, ಪಾಸ್‌ವರ್ಡ್ ಅಥವಾ ಯಾವುದೇ ಇತರ ವಿಶಿಷ್ಟ ಗುರುತಿನ ವೈಶಿಷ್ಟ್ಯವನ್ನು ಮೋಸದಿಂದ ಬಳಸುವುದು) ಮತ್ತು 66 ಡಿ (ಯಾವುದೇ ಸಂವಹನದ ಮೂಲಕ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

English summary
Bengaluru: Lured with investing into bitcoins, techie loses Rs13.7 lakh from cyber crooks. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X