ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಚ್‌ಎಎಲ್ ನಿರ್ಮಿತ ಹೆಲಿಕಾಪ್ಟರ್'ಎಲ್‌ಯುಎಚ್' ಯಶಸ್ವಿ ಹಾರಾಟ

|
Google Oneindia Kannada News

ಬೆಂಗಳೂರು, ಡಿಸೆಂಬರ್ 11: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನಿರ್ಮಿಸಿರುವ ಹೆಲಿಕಾಪ್ಟರ್‌ ಎಲ್‌ಯುಎಚ್‌ ಯಶಸ್ವಿ ಹಾರಾಟ ನಡೆಸಿದೆ.

ನಾಗವಾರ-ಕೆಂಪೇಗೌಡ ವಿಮಾನ ನಿಲ್ದಾಣ ನಮ್ಮ ಮೆಟ್ರೋ ಮಾರ್ಗ ಬದಲು ನಾಗವಾರ-ಕೆಂಪೇಗೌಡ ವಿಮಾನ ನಿಲ್ದಾಣ ನಮ್ಮ ಮೆಟ್ರೋ ಮಾರ್ಗ ಬದಲು

ಎಲ್‌ಯುಎಸ್ 6 ಕಿ.ಮೀ ಹಾರಾಟ ನಡೆಸುವ ಮೂಲಕ ಟ್ರಯಲ್ ಹಾರಾಟ ಪರೀಕ್ಷೆಯನ್ನು ಪೂರ್ಣಗೊಳಿಸಿದೆ. 2019ರ ಜನವರಿಯಲ್ಲಿ ಎತ್ತರದ ತಂಪು ಪ್ರದೇಶದಲ್ಲಿ ಟ್ರಯಲ್ ನಡೆಸಲು ಸಿದ್ಧವಾಗಿದೆ.ಇದು ಪೂರ್ಣ ಪ್ರಮಾಣದ ಬಳಕೆಗೆ ಪ್ರಮಾಣಪತ್ರ ಪಡೆದುಕೊಳ್ಳಲು 6 ಕಿ.ಮೀ ಹಾರಾಟ ನಡೆಸಲೇಬೇಕು.

ಲಂಡನ್ ಇನ್ನು ಬೆಂಗಳೂರಿಗೆ ಹತ್ತಿರ: ಧನ್ಯವಾದ ಏರ್ ಇಂಡಿಯಾ ಲಂಡನ್ ಇನ್ನು ಬೆಂಗಳೂರಿಗೆ ಹತ್ತಿರ: ಧನ್ಯವಾದ ಏರ್ ಇಂಡಿಯಾ

ಸೇನೆ, ರಕ್ಷಣೆ ಮತ್ತು ನಾಗರಿಕ ಬಳಕೆಗೆ ಉಪಯುಕ್ತವಾದ ಮೂರು ಟನ್ ಸರಿಣಿಯ ಹೊಸ ತಲೆಮಾರಿನ ಎಲ್‌ಯುಎಚ್, ಎಚ್‌ಎಎಲ್‌ನ ರೋಟರಿ ವಿಂಗ್ ರಿಸರ್ಚ್ ಅಂಡ್ ಡಿಸೈನ್ ಸೆಂಟರ್‌ನಲ್ಲಿ ವಿನ್ಯಾಸಗೊಳಿಸಲಾಗಿದೆ.

https://kannada.oneindia.com/news/bangalore/air-to-india-start-bengaluru-to-london-direct-air-service-from-november-17-151583.html

ಈ ಹೆಲಿಕಾಪ್ಟರ್ 220 ಕೆಎಂಪಿಎಚ್ ವೇಗದಲ್ಲಿ ಸಂಚರಿಸಬಲ್ಲದು. ಮೊದಲ ಎಲ್‌ಯುಎಚ್ ಪಿಟಿ-1 2016ರ ಸೆಪ್ಟೆಂಬರ್‌ನಲ್ಲಿ ಹಾರಾಟ ಆರಂಭಿಸಿತ್ತು. ಎರಡನೇ ಹೆಲಿಕಾಪ್ಟಟರ್ 2017ರ ಮೇನಲ್ಲಿ ಹಾರಾಟ ಆರಂಭಿಸಿತ್ತು.

ಭಾರತೀಯ ಸೇನೆಗೆ 126 ಹಾಗೂ ವಾಯು ಸೇನೆ 61 ಸೇರಿ ಒಟ್ಟು 187 ಎಲ್‌ಯುಎಚ್‌ ಹೆಲಿಕಾಪ್ಟರ್‌ಗಳ ಆರ್ಡರ್‌ಗಳನ್ನು ಎಚ್‌ಎಎಲ್ ನೀಡಿದೆ.

ಮುಖ್ಯ ಪರೀಕ್ಷಾರ್ಥ ಪೈಲಟ್, ನಿವೃತ್ತವಿಂಗ್ ಕಮಾಂಡರ್ ಉನ್ನಿ ಕೆ ಪಿಳ್ಳೈ ಮತ್ತು ಟೆಸ್ಟ್ ಪೈಲಟ್ ನಿವೃತ್ತ ವಿಂಗ್ ಕಮಾಂಡರ್ ಅನಿಲ್ ಭಂಭಾನಿ ಅವರು ಬೆಂಗಳೂರಿನಲ್ಲಿ 6 ಕಿ.ಮೀ ಎತ್ತರಕ್ಕೆ ಎಲ್‌ಯುಎಚ್‌ನ್ನು ಹಾರಿಸಿದರು.

English summary
The Light Utility Helicopter has achieved an important milestone of flying at 6km altitude in Bengaluru recently.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X