• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹರಿಪ್ರಸಾದ್ ಗೆ ಬ್ರಾಹ್ಮಣರ ಬೆಂಬಲ ಎಂಬುದು ಕಟ್ಟುಕತೆ, ನಿಜಕ್ಕೂ ನಡೆದಿದ್ದೇನು?

|
   Lok Sabha Elections 2019:ನಿಜವಾಗಲೂ ಬ್ರಾಹ್ಮಣರು ಹರಿಪ್ರಸಾದ್ ಅವರನ್ನು ಬೆಂಬಲಿಸುತ್ತಿದ್ದಾರಾ?|Oneindia Kannada

   ಬೆಂಗಳೂರು, ಏಪ್ರಿಲ್ 16: ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿಕೆ ಹರಿಪ್ರಸಾದ್ ಅವರಿಗೆ ಬ್ರಾಹ್ಮಣರು ಬೆಂಬಲ ನೀಡಿದ್ದಾರೆ ಎಂಬುದು ಶುದ್ಧ ಸುಳ್ಳು ಎಂಬುದನ್ನು ಬ್ರಾಹ್ಮಣರೇ ಸ್ಪಷ್ಟಪಡಿಸಿದ್ದಾರೆ.

   ಬನಶಂಕರಿ ಎರಡನೇ ಹಂತದ ಬನಗಿರಿ ವರಸಿದ್ದಿ ವಿನಾಯಕ ದೇವಾಲಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿಕೆ ಹರಿಪ್ರಸಾದ್ ನೇತೃತ್ವದಲ್ಲಿ ಸಭೆಯೊಂದನ್ನು ನಡೆಸಲಾಗಿತ್ತು. ಈ ಸಭೆಗೆ ವಿಪ್ರರನ್ನು ಆಮಂತ್ರಿಸಲಾಗಿತ್ತು. ಆದರೆ ಈ ಸಭೆಯನ್ನು ಯಾರು ನಡೆಸುತ್ತಿದ್ದಾರೆ, ಯಾಕಾಗಿ ಎಂಬ ಯಾವ ಮಾಹಿತಿಯನ್ನೂ ವಿಪ್ರರಿಗೆ ನೀಡಿರಲಿಲ್ಲ. "ನೀವು ಸಭೆಗೆ ಬಂದು ಆಶೀರ್ವದಿಸಬೇಕು" ಎಂದಷ್ಟೇ ಹೇಳಲಾಗಿತ್ತು. ಆದ್ದರಿಂದ ಸಾಕಷ್ಟು ಸಂಖ್ಯೆಯ ಬ್ರಾಹ್ಮಣರು ಸಭೆಗೆ ಆಗಮಿಸಿದ್ದರು.

   ಬಿಕೆ ಹರಿಪ್ರಸಾದ್ ಬೆಂಬಲಿಸಲು ನಿರ್ಧರಿಸಿದ ಬ್ರಾಹ್ಮಣರು

   ಕನ್ನಡ ಸುದ್ದಿವಾಹಿನಿಯೊಂದು ಈ ಸಭೆಯ ಲೈವ್ ಪ್ರಸಾರ ಮಾಡುತ್ತಿತ್ತು. ಈ ಸಂದರ್ಭದಲ್ಲಿ ಸಭೆಯಲ್ಲಿ, "ಇಲ್ಲಿಗೆ ಆಗಮಿಸಿರುವ ಬ್ರಾಹ್ಮಣರೆಲ್ಲರೂ ಪ್ರಧಾನಿ ನರೇಂದ್ರ ಮೋದಿ ಮತ್ತು ತೇಜಸ್ವಿ ಸೂರ್ಯ(ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ) ಅವರ ವಿರೋಧಿಗಳು. ಅವರು ಕಾಂಗ್ರೆಸ್ ಅನ್ನು ಬೆಂಬಲಿಸಲಿದ್ದಾರೆ. ತೇಜಸ್ವಿನಿ ಅನಂತ್ ಕುಮಾರ್ ಅವರಿಗೆ ಟಿಕೆಟ್ ಕೈತಪ್ಪಿದ್ದು ಅವರಲ್ಲಿ ಪಕ್ಷದ ಬಗ್ಗೆ ಆಕ್ರೋಶ ಹುಟ್ಟುವಂತೆ ಮಾಡಿದೆ" ಎಂಬಂತೆ ಬಿಂಬಿಸಲಾಯ್ತು.

   ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?

   ಅದುವರೆಗೂ ಸಭೆಯ ಬಗ್ಗೆ ಏನೂ ತಿಳಿದಿರದ ವಿಪ್ರರಿಗೆ ಸಭೆಯ ಉದ್ದೇಶ ಅರ್ಥವಾಗುತ್ತಿದ್ದಂತೆಯೇ ಆಕ್ರೋಶಗೊಂಡು ತಾವು ಯಾವತ್ತಿಗೂ ಕಾಂಗ್ರೆಸ್ ಅನ್ನು ಬೆಂಬಲಿಸುವುದಿಲ್ಲ. ನಾವ್ಯಾರೂ ಮೋದಿ ವಿರೊಧಿಗಳಲ್ಲ. ನಮಗೆ ಸಭೆಯ ಉದ್ದೇಶವನ್ನೇ ಹೇಳದೆ ಇಲ್ಲಿಗೆ ಕರೆತಂದು, ನಮ್ಮ ಬಗ್ಗೆ ತಪ್ಪು ಮಾಹಿತಿ ನೀಡಲಾಗುತ್ತಿದೆ ಎಂದು ಸಿಡಿದೆದ್ದರು. ಆದರೆ ದುರದೃಷ್ಟವಶಾತ್ ಈ ಬೆಳವಣಿಗೆಗಳು ಮಾಧ್ಯಮಗಳಲ್ಲಿ ಪ್ರಸಾರವಾಗಲಿಲ್ಲ!

   ಜಯನಗರದಲ್ಲಿ ಹಸಿರು ಬೆಂಗಳೂರು ಸಂಕಲ್ಪ ಕೈಗೊಂಡ ಕೈ ಅಭ್ಯರ್ಥಿ

   ಆದ್ದರಿಂದ ಬಿಕೆ ಹರಿಪ್ರಸಾದ್ ಅವರನ್ನು ಬ್ರಾಹ್ಮಣರು ಬೆಂಬಲಿಸುತ್ತಾರೆ ಎಂದೇ ವರದಿ ಪ್ರಕಟವಾಯಿತು.

   ಸತ್ಯ ಗೊತ್ತಾಗಿದ್ದು ಹೇಗೆ?

   ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ 'ನಿಜಕ್ಕೂ ಸಭೆಯಲ್ಲಿ ನಡೆದಿದ್ದೇನು?' ಎಂಬುದನ್ನು ವಿವರಿಸುವ ಕೆಲವು ವಿಡಿಯೋಗಳು ಹರಿದಾಡತೊಡಗಿದವು. ಇದರಿಂದಾಗಿ ಆ ಪೂರ್ತಿ ಘಟನೆಗೆ ಬೇರೆಯದೇ ಆಯಾಮ ಸಿಕ್ಕಿತು. ಸೋಮವಾರ ಸಭೆಯಲ್ಲಿ ನಿಜಕ್ಕೂ ನಡೆದಿದ್ದೇನು ಎಂಬುದನ್ನು ಈ ವಿಡಿಯೋಗಳು ಸಾಬೀತುಪಡಿಸಿವೆ. ಸಭೆಯಲ್ಲಿ ಮೋದಿ ಅಭಿಮಾನಿಗಳು "ಮೋದಿ ಮೋದಿ" ಎಂದು ಘೋಷಣೆ ಕೂಗುತ್ತಿದ್ದುದೂ ಇದರಲ್ಲಿ ದಾಖಲಾಗಿದೆ.

   ಸಭೆಯಲ್ಲಿ ನಿಜಕ್ಕೂ ನಡೆದಿದ್ದೇನು?

   ಸಭೆಯಲ್ಲಿ ನಿಜಕ್ಕೂ ನಡೆದಿದ್ದೇನು?

   "ಸಭೆಯೊಂದನ್ನು ನಡೆಸುತ್ತಿದ್ದೇವೆ. ನೀವು ಬಂದು ಆಶೀರ್ವದಿಸಿ ಎಂದು ನಮ್ಮನ್ನು ಆಮಂತ್ರಿಸಿದರು. ಯಾವ ಸಭೆ? ಯಾರು ನಡೆಸುತ್ತಿರುವುದು? ಅದು ರಾಜಕೀಯ ಸಭೆಯಾ? ಪಕ್ಷಕ್ಕೆ ಸೇರಿದ್ದಾ ಅಥವಾ ಯಾವುದಾದರೂ ಸಮುದಾಯಕ್ಕೆ ಸೇರಿದ್ದಾ ಎಂಬುದೂ ನಮಗೆ ಗೊತ್ತಿರಲಿಲ್ಲ. ನಾವು ಇಲ್ಲಿಗೆ ಬಂದ ಮೇಲೆ ನಾವೆಲ್ಲ ಕಾಂಗ್ರೆಸ್ ಅನ್ನು ಬೆಂಬಲಿಸುತ್ತೇವೆ ಎಂದರು. ಅದನ್ನು ಹೇಳುವುದಕ್ಕೆ ಇವರ್ಯಾರು? ಇವರಿಗೆ ಆತ್ಮಸಾಕ್ಷಿ ಕಾಡೋಲ್ವಾ? ಇವರನ್ನು ನಾವೇ ಕರೆಸಿದ್ದು ಅಂತ ಧೈರ್ಯವಾಗಿ ಹೇಳಲಿ ನೋಡೋಣ" ಎಂದು ವಿಪ್ರರೊಬ್ಬರು ಸವಾಲು ಹಾಕಿದ್ದಾರೆ.

   'ಬಿಜೆಪಿ ಧರ್ಮ ಮತ್ತು ಜಾತಿ ಆಧಾರದ ಮೇಲೆ ದೇಶವನ್ನು ಒಡೆಯುತ್ತಿದೆ'

   ಇದು ಸುಳ್ಳು ಸುದ್ದಿ

   ಇದು ಸುಳ್ಳು ಸುದ್ದಿ

   "ಇದು ಸುಳ್ಳು ಸುದ್ದಿ. ನನ್ನ ಸಹೋದರನೂ ಆ ಸಭೆಗೆ ಹೋಗಿದ್ದರು. ಅಲ್ಲಿ ನಡೆದಿದ್ದೇ ಬೇರೆ. ಇವೆಲ್ಲವೂ ಕಾಂಗ್ರೆಸ್ ನ ಕುತಂತ್ರ. ಇಂಥ ಸುಳ್ಳು ಸುದ್ದಿ ಸೃಷ್ಟಿಸುವವರಿಗೆ ಧಿಕ್ಕಾರ" ಎಂದು ಸಂದೀಪ್ ಜೋಷಿ ಎಂಬುವವರು ಫೇಸ್ ಬುಕ್ ನಲ್ಲಿ ಕಮೆಂಟ್ ಮಾಡಿದ್ದಾರೆ.

   ಬ್ರಾಹ್ಮಣರು ಹೀಗೆಲ್ಲಾ ಯೋಚಿಸಲ್ಲ !

   ಬ್ರಾಹ್ಮಣರು ಹೀಗೆಲ್ಲಾ ಯೋಚಿಸಲ್ಲ !

   ಬ್ರಾಹ್ಮಣರು ಹೀಗೆಲ್ಲಾ ಯೋಚಿಸಲ್ಲ ಇಲ್ಲಿ ಯಾವುದೋ ಮಿಕ್ಸ ಕೆಲಸ ಮಾಡುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ ಶ್ರೀಧರ್ ಎಚ್ ಆರ್.

   English summary
   Brahmin Community clarifies it will not support Bangalore South Congress candidate BK Hariprasad. Some media are reported that Brahmin Community announced that they will support Hariprasad because Modi Betrayed Ananth Kumar family. But Brahmins clarify this report itself is wrong.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X