ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಗ ಸಿದ್ಧಾರ್ಥ್ ಅಕ್ರಮ ನೇಮಕ: ಇಸ್ರೋ ಅಧ್ಯಕ್ಷ ಶಿವನ್ ವಿರುದ್ಧ ಗಂಭೀರ ಆರೋಪ

|
Google Oneindia Kannada News

ಬೆಂಗಳೂರು, ಫೆಬ್ರವರಿ 13: ಇಸ್ರೋ ಅಧ್ಯಕ್ಷ ಹಾಗೂ ಬಾಹ್ಯಾಕಾಶ ಇಲಾಖೆಯ (ಡಿಒಎಸ್) ಕಾರ್ಯದರ್ಶಿ ಡಾ. ಕೆ. ಶಿವನ್ ಅವರ ವಿರುದ್ಧ ಕೇಂದ್ರ ಜಾಗೃತಾ ಆಯೋಗವು (ಸಿವಿಸಿ) ದೂರು ದಾಖಲಿಸಿಕೊಂಡಿದೆ. ತಿರುವನಂತಪುರಂನ ವಲೈಮಾಲಾದಲ್ಲಿರುವ ಇಸ್ರೋದ ಲಿಕ್ವಿಡ್ ಪ್ರೊಪುಲ್ಷನ್ ಸಿಸ್ಟಂ ಸೆಂಟರ್‌ಗೆ (ಎಲ್‌ಪಿಎಸ್‌ಸಿ) ನಿಯಮಾವಳಿಗಳನ್ನು ಉಲ್ಲಂಘಿಸಿ ತಮ್ಮ ಮಗನನ್ನು ನೇಮಕಾತಿ ಮಾಡುವಲ್ಲಿ ಶಿವನ್ ಅವರು ಅಕ್ರಮಗಳನ್ನು ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

'ಡಾ. ಶಿವನ್ ಅವರ ಮಗ ಸಿದ್ಧಾರ್ಥ್ ಎಸ್. ನೇಮಕಾತಿಯು ಹಿತಾಸಕ್ತಿ ಸಂಘರ್ಷದ ವಿಚಾರವಷ್ಟೇ ಅಲ್ಲ, ಡಿಒಎಸ್ ಕಾರ್ಯದರ್ಶಿ ಮತ್ತು ಇಸ್ರೋ ಅಧ್ಯಕ್ಷ ಹಾಗೂ ಅವರ ಮಗನ ಲಾಭಕ್ಕಾಗಿ ಪಕ್ಷಪಾತಿ ಹಾಗೂ ಸಂಚು ನಡೆಸಿದ ಪ್ರಕರಣವೂ ಹೌದು' ಎಂದು ಎಲ್‌ಪಿಎಸ್‌ಸಿ ನಿರ್ದೇಶಕ ಡಾ. ವಿ. ನಾರಾಯಣನ್ ಜನವರಿ 25ರಂದು ದೂರು ನೀಡಿದ್ದಾರೆ.

ಉತ್ತರಾಖಂಡ ಅನಾಹುತ: ಹಿಮಸ್ಫೋಟದ ಚಿತ್ರಗಳನ್ನು ಬಿಡುಗಡೆ ಮಾಡಿದ ಇಸ್ರೋಉತ್ತರಾಖಂಡ ಅನಾಹುತ: ಹಿಮಸ್ಫೋಟದ ಚಿತ್ರಗಳನ್ನು ಬಿಡುಗಡೆ ಮಾಡಿದ ಇಸ್ರೋ

ಡಾ. ನಾರಾಯಣನ್ ಅವರು ವರ್ಗಾವಣೆಯಾಗುವ ನಿರೀಕ್ಷೆಯಿದ್ದು, ಅದಕ್ಕೂ ಮೊದಲೇ ತರಾತುರಿಯಲ್ಲಿ ಎಲ್‌ಪಿಎಸ್‌ಸಿಗೆ ಸಿದ್ಧಾರ್ಥ್ ಅವರನ್ನು ನೇಮಿಸಲಾಗಿದೆ. ರಾಕೆಟ್ ಪ್ರೊಪಲ್ಷನ್ ಪರಿಣತರಾದ ಡಾ. ನಾರಾಯಣನ್ ಅವರು 1984ರಲ್ಲಿ ಇಸ್ರೋಗೆ ಸೇರ್ಪಡೆಯಾಗಿದ್ದರು. 2018ರ ಜನವರಿಯಿಂದ ಎಲ್‌ಪಿಎಸ್‌ಸಿಯ ನಿರ್ದೇಶಕರಾಗಿದ್ದಾರೆ. ಮುಂದೆ ಓದಿ.

ಕೇವಲ ಸಂದರ್ಶನ ಮಾಡಿ ನೇಮಕ

ಕೇವಲ ಸಂದರ್ಶನ ಮಾಡಿ ನೇಮಕ

ಸಿದ್ಧಾರ್ಥ್ ಅವರ ನೇಮಕಾತಿಯನ್ನು ಸಾಮಾನ್ಯವಾಗಿ ನಡೆಸಲಾಗುವ ಪ್ರಕ್ರಿಯೆಯಂತೆ ಇಸ್ರೋದ ಕೇಂದ್ರೀಯ ನೇಮಕಾತಿ ಮಂಡಳಿಯ ಮೂಲಕ ನಡೆಸದೆ ಆತುರವಾಗಿ ಮಾಡಲಾಗಿದೆ. ಪರಿಶೀಲನೆ, ಲಿಖಿತ ಪರೀಕ್ಷ ಮತ್ತು ಸಂದರ್ಶನಗಳನ್ನು ನೇಮಕಾತಿ ಮಂಡಳಿ ನಡೆಸುತ್ತದೆ. ಆದರೆ ಸಿದ್ಧಾರ್ಥ್ ಅವರನ್ನು ಕೇವಲ ಸಂದರ್ಶನ ಮಾಡಿ ನೇಮಿಸಲಾಗಿದೆ ಎಂದು ಆರೋಪಿಸಲಾಗಿದೆ.

ಫೆ.28ಕ್ಕೆ ಬ್ರೆಜಿಲಿಯನ್,ಭಾರತೀಯ ಸ್ಟಾರ್ಟ್‌ಅಪ್ ಉಪಗ್ರಹ ಉಡಾವಣೆಫೆ.28ಕ್ಕೆ ಬ್ರೆಜಿಲಿಯನ್,ಭಾರತೀಯ ಸ್ಟಾರ್ಟ್‌ಅಪ್ ಉಪಗ್ರಹ ಉಡಾವಣೆ

ಸೈಂಟಿಸ್ಟ್ ಎಂಜಿನಿಯರ್ ಹುದ್ದೆಗಳು

ಸೈಂಟಿಸ್ಟ್ ಎಂಜಿನಿಯರ್ ಹುದ್ದೆಗಳು

ಬೆಂಗಳೂರು, ತಿರುವನಂತಪುರಂ ಮತ್ತು ವಲೈಮಾಲಾದಲ್ಲಿರುವ ಎಲ್‌ಪಿಎಸ್‌ಸಿ ಘಟಕಗಳಿಗೆ 738 ಸೈಂಟಿಸ್ಟ್ ಎಂಜಿನಿಯರ್ 'ಎಸ್‌ಸಿ' ಹುದ್ದೆ ನೇಮಕಾತಿಗೆ ಬಾಹ್ಯಾಕಾಶ ಇಲಾಖೆ, ಇಸ್ರೋ ಮತ್ತು ಎಲ್‌ಪಿಎಸ್‌ಸಿ ಜಾಹೀರಾತು ಪ್ರಕಟಿಸಿದ್ದವು.

ಪ್ರಕ್ರಿಯೆ ವಿವರ

ಪ್ರಕ್ರಿಯೆ ವಿವರ

ಆಸಕ್ತ ಅಭ್ಯರ್ಥಿಗಳು ಎಲ್‌ಪಿಎಸ್‌ಸಿ ವೆಬ್‌ಸೈಟ್‌ ಮೂಲಕ ಅರ್ಜಿ ಭರ್ತಿ ಮಾಡಿ ಕಳಿಸಬೇಕಿತ್ತು. ಇದಕ್ಕೆ ಬಿ.ಇ/ಬಿಟೆಕ್ ಅಥವಾ ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ಎಂಜಿನಿಯರಿಂಗ್ ಸಮಾನ ಪದವಿ+ಎಂಇ/ಎಂಟೆಕ್ ಅಥವಾ ವಿಎಲ್‌ಎಸ್‌ಐ ಮತ್ತು ಎಂಬೆಡೆಡ್ ಸಿಸ್ಟಂನಲ್ಲಿ ಪದವಿ ಪಡೆಯಬೇಕು ಎಂದು ಹೇಳಲಾಗಿತ್ತು.

ಕೊಲೆಯತ್ನದ ರಹಸ್ಯ ಬಿಚ್ಚಿಟ್ಟ ಇಸ್ರೋ ಹಿರಿಯ ವಿಜ್ಞಾನಿಕೊಲೆಯತ್ನದ ರಹಸ್ಯ ಬಿಚ್ಚಿಟ್ಟ ಇಸ್ರೋ ಹಿರಿಯ ವಿಜ್ಞಾನಿ

ಎಂಟೆಕ್ ಪದವಿ ಬೇಕಿಲ್ಲ

ಎಂಟೆಕ್ ಪದವಿ ಬೇಕಿಲ್ಲ

ಆದರೆ ಎಲ್‌ಪಿಎಸ್‌ಸಿಯ ನೇಮಕಾತಿಗೆ ವಿಎಲ್‌ಎಸ್‌ಐನಲ್ಲಿ ಎಂಟೆಕ್ ಪದವಿಯ ಅಗತ್ಯವಿಲ್ಲ. ಇದುವರೆಗೂ 'ಎಸ್‌ಸಿ' ಮಟ್ಟದ ಸೈಂಟಿಸ್ಟ್ ಎಂಜಿನಿಯರಿಂಗ್ ಹುದ್ದೆಗೆ ಎಲ್‌ಪಿಎಸ್‌ಸಿಯಲ್ಲಿ ಈ ವಿದ್ಯಾರ್ಹತೆಯಡಿ ನೇಮಕಾತಿ ಮಾಡಿಕೊಂಡಿಲ್ಲ. ಜಾಹೀರಾತಿನಲ್ಲಿ ನೀಡಿರುವ ವಿದ್ಯಾರ್ಹತೆಯು ಎಂಟೆಕ್ ಮಾಡಿರುವ ಸಿದ್ಧಾರ್ಥ್ ಅವರಿಗೆ ಸಂಪೂರ್ಣವಾಗಿ ಹೊಂದಾಣಿಕೆಯಾಗಿದೆ. ಒಬ್ಬ ನಿರ್ದಿಷ್ಟ ಅಭ್ಯರ್ಥಿಗಾಗಿಯೇ ಈ ಜಾಹೀರಾತನ್ನು ಸಿದ್ಧಪಡಿಸಿರುವುದು ಮೇಲ್ನೋಟಕ್ಕೆ ತಿಳಿಯುತ್ತದೆ ಎಂದು ಅವರು ಆರೋಪಿಸಿದ್ದಾರೆ.

Recommended Video

ನಿರ್ಮಲ ಸೀತಾರಾಮನ್ ಗೆ ಬಸವಣ್ಣನ ವಚನವನ್ನ ಬಿಡಿಸಿ ಹೇಳಿದ್ದು ಇದೆ ಕಾರಣಕ್ಕೆ | Oneindia Kannada
ಪ್ರಕ್ರಿಯೆ ಪಾಲಿಸಲಾಗಿದೆ

ಪ್ರಕ್ರಿಯೆ ಪಾಲಿಸಲಾಗಿದೆ

ಎಲ್‌ಪಿಎಸ್‌ಸಿ ಪ್ರಕಟಿಸಿದ ಮೆರಿಟ್ ಪಟ್ಟಿಯಲ್ಲಿ ಸಿದ್ಧಾರ್ಥ್ ಎರಡನೆಯ ಶ್ರೇಯಾಂಕ ಪಡೆದಿದ್ದರು. ಈ ಪಟ್ಟಿ ಜನವರಿ 13ರವರೆಗೂ ಚಾಲ್ತಿಯಲ್ಲಿತ್ತು. ತಮ್ಮ ವಿರುದ್ಧದ ಆರೋಪಕ್ಕೆ ಡಾ. ಶಿವನ್ ಪ್ರತಿಕ್ರಿಯೆ ನೀಡಿಲ್ಲ. ಎಂಟೆಕ್ ಪದವೀಧರ ಸಿದ್ಧಾರ್ಥ್ ಅವರ ಅರ್ಜಿಯನ್ನು ಸೂಕ್ತ ಸಮಿತಿ ಪರಿಶೀಲಿಸಿದೆ. ಈ ನೇಮಕಾತಿಯಲ್ಲಿ ಎಲ್ಲ ಪ್ರಕ್ರಿಯೆಗಳನ್ನೂ ಪಾಲಿಸಲಾಗಿದೆ ಎಂದು ಇಸ್ರೋ ಅಧ್ಯಕ್ಷರ ಕಚೇರಿ ತಿಳಿಸಿದೆ.

English summary
LPSC director Dr Narayanan has lodeged a complaint to CVC against ISRO chairman K Sivan over allegation of irregularities in recruiting his son Sidharth.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X