ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾರುಕಟ್ಟೆಗೆ ಚಿಕನ್‌ ಅಸಮರ್ಪಕ ಪೂರೈಕೆ, ಮಾರಾಟದಲ್ಲಿ 20% ರಷ್ಟು ಕುಸಿತ

|
Google Oneindia Kannada News

ಬೆಂಗಳೂರು, ಏಪ್ರಿಲ್ 20 : ಬೇಸಿಗೆ ಕಾಲ ಆರಂಭವಾದರೆ ಸಾಕು ಕೋಳಿ ಸಾಕಾಣಿಕೆ ಮಾಡುವವರಿಗೆ ಹಾಗೂ ಮಾರಾಟ ಮಾಡುವವರಿಗೆ ಭಾರೀ ಸಮಸ್ಯೆ ಉಂಟಾಗುತ್ತದೆ. ಬಿಸಿಲಿನ ತಾಪಕ್ಕೆ ಕೋಳಿಗಳು ಬೇಗ ಸಾಯುತ್ತವೆ. ಅಲ್ಲದೆ ಈ ಸಮಯದಲ್ಲಿ ಕೋಳಿಗಳು ಕಡಿಮೆ ಆಹಾರ ಸೇವಿಸುವುದರಿಂದ ಅವುಗಳ ತೂಕವೂ ಸಹ ಸರಿಯಾಗಿರುವುದಿಲ್ಲ. ಹೀಗಾಗಿ ಮಾರುಕಟ್ಟೆಗೆ ಕೋಳಿಗಳ ಪೂರೈಕೆಗೂ ಕೂಡ ಭಾರಿ ಹೊಡೆತ ಬೀಳುತ್ತದೆ. ಇದರಿಂದ ಕೋಳಿ ಮಾರಾಟಗಾರರಿಗೆ 20%ರಷ್ಟು ನಷ್ಟ ಅನುಭವಿಸಬೇಕಾದ ಪರಿಸ್ಥಿತಿ ಇದೆ.

ಈ ಬಗ್ಗೆ ಕೋಳಿ ಸಾಕಾಣಿಕೆ ರೈತರು ಹಾಗೂ ತಳಿಗಾರರ ಸಂಘದ ಎಸ್‌.ಎನ್‌ ರಘುನಾಥ್‌ ಪ್ರತಿಕ್ರಿಯೆ ನೀಡಿದ್ದು, "ಬೇಸಿಗೆಯಲ್ಲಿ ಕೋಳಿಗಳ ಸಾವು ದ್ವಿಗುಣವಾಗಿರುತ್ತದೆ. ಇತರ ಸೀಸನ್‌ಗಳಲ್ಲಿ 5 ರಿಂದ 6% ಕೋಳಿಗಳು ಸಾವನ್ನಪ್ಪಿದ್ದರೆ, ಬೇಸಿಗೆಯಲ್ಲಿ ಮಾತ್ರ ಇದು 10 ರಿಂದ 12% ರಷ್ಟು ಹೆಚ್ಚಾಗುತ್ತದೆ. ಅಲ್ಲದೆ ಈ ಸಮಯದಲ್ಲಿ ಕೋಳಿಗಳ ಆಹಾರ ಮಟ್ಟವು ಸಹ 30%ರಷ್ಟು ಕುಸಿತವಾಗಲಿದ್ದು, ಕೋಳಿಗಳ ಸಾವಿಗೆ ಇದು ಕೂಡ ಎಂದು ಕಾರಣ," ಎಂದು ತಿಳಿಸಿದ್ದಾರೆ.

ಕಳೆದ ಕೆಲ ವಾರಗಳ ಹಿಂದೆ ನಗರದಲ್ಲಿ ಒಂದು ಕಿಲೋ ಕೋಳಿ 200 ರಿಂದ 230 ರೂಪಾಯಿಗೆ ಮಾರಾಟ ಮಾಡಲಾಗುತ್ತಿತ್ತು. ಆದರೆ ಈಗ ಮಾರುಕಟ್ಟೆಗೆ ಕೋಳಿಗಳ ಸಮರ್ಪಕ ಪೂರೈಕೆ ಇಲ್ಲದ ಕಾರಣ ಚಿಕನ್ ಅಂಗಡಿಗಳಲ್ಲಿ ಒಂದು ಕಿಲೋಗೆ 250 ರೂ ಮಾರಾಟವಾಗುತ್ತಿದೆ. ಬೇಸಿಗೆ ಕಾಲವಾದ್ದರಿಂದ ಜನರು ಹೆಚ್ಚಾಗಿ ಚಿಕನ್ ತಿನ್ನಲು ಇಷ್ಟ ಪಡುವುದಿಲ್ಲ.

Low Consumption, High Poultry Death Soar Chicken Prices in Bengaluru

"ಬೇಸಿಗೆ ಕಾಲವಾದ್ದರಿಂದ ಚಿಕನ್‌ ಅನ್ನು ಎರಡು ದಿನಗಳ ಕಾಲ ಸಂಸ್ಕರಿಸಿ ಇಡಲು ಸಾಧ್ಯವಾಗುವುದಿಲ್ಲ. ಬೇರೆ ಸೀಸನ್‌ಗಳಲ್ಲಿ ಇಂದು ಕತ್ತರಿಸಿದ ಚಿಕನ್‌ ನಾಳೆವರೆಗೂ ಸಂಸ್ಕರಿಸಿ ಇಡಬಹುದಿತ್ತು. ಆದ್ರೆ ಈಗ ಬೇಸಿಗೆ ತಾಪಮಾನ ಹೆಚ್ಚಿರುವುದರಿಂದ ಸಂಸ್ಕರಿಸಿ ಇಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಆ ದಿನ ಕೊನೆಯವರೆಗೂ ಕಟ್ ಮಾಡಿದ ಚಿಕನ್ ಸೇಲ್ ಆಗದಿದ್ದರೆ ಅದನ್ನ ಬೀಸಾಡಬೇಕಾಗುತ್ತದೆ. ಇದರಿಂದ ನಮಗೆ ಹೆಚ್ಚು ನಷ್ಟ ಉಂಟಾಗುತ್ತದೆ. ಹೀಗಾಗಿ ಬೇಸಿಗೆಯಲ್ಲಿ ಚಿಕನ್ ವ್ಯಾಪಾರ ಮಾಡಲು ಹೆಣಗಾಡಬೇಕಾದ ಪರಿಸ್ಥಿತಿ ಇದೆ," ಅಂತ ಕತ್ರಿಗುಪ್ಪೆಯಲ್ಲಿರುವ ಸುಗುಣ ಚಿಕನ್ ಅಂಗಡಿಯ ಮಾರಾಟಗಾರರೊಬ್ಬರು ತಿಳಿಸಿದ್ದಾರೆ.

Low Consumption, High Poultry Death Soar Chicken Prices in Bengaluru

"ಬೇಸಿಗೆಯಲ್ಲಿ ಕೋಳಿಗಳು ಸಾಯುವುದು ಮಾತ್ರವಲ್ಲದೆ, ಶೇಖರಿಸಿಟ್ಟ ಕೋಳಿ ಮೊಟ್ಟೆಗಳೂ ಹಾಳಾಗುತ್ತವೆ. ಮೊಟ್ಟೆಗಳಿಗೆ ನಿರ್ದಿಷ್ಟ ಕೂಲಿಂಗ್ ವ್ಯವಸ್ಥೆ ನಮ್ಮಲ್ಲಿ ಇಲ್ಲ. ಇದರಿಂದಾಗಿ ಈ ಬೇಸಿಗೆಯಲ್ಲಿ ಮೊಟ್ಟೆಗಳು ಮೂರು ದಿನಗಳಿಗಿಂತ ಹೆಚ್ಚು ಕಾಲ ಉಳಿಯುವುದಿಲ್ಲ. ಆದರೆ ಮೊಟ್ಟೆ ವ್ಯಾಪಾರಕ್ಕೆ ಯಾವುದೇ ಸಮಸ್ಯೆ ಉಂಟಾಗಿಲ್ಲ. ಜನರು ಹೆಚ್ಚಾಗಿ ಆಹಾರದಲ್ಲಿ ಮೊಟ್ಟೆ ಬಳಸುವುದರಿಂದ ಹಾಗೂ ಬಹುತೇಕ ಎಲ್ಲಾ ಬೇಕರಿಗಳಲ್ಲೂ ಮೊಟ್ಟೆ ಬಳಸಿ ಆಹಾರ ಪದಾರ್ಥ ತಯಾರಿಸುವುದರಿಂದ ವ್ಯಾಪಾರ ಕುಸಿತ ಉಂಟಾಗಿಲ್ಲ," ಅಂತ ಅಂತ ವರ್ತೂರಿನಲ್ಲಿರುವ ವೆಂಕೀಸ್‌ ಚಿಕನ್‌ನ ಮ್ಯಾನೇಜರ್ ತಿಳಿಸಿದ್ದಾರೆ.

Recommended Video

RCB ಯ ಬೌಲಿಂಗ್ ಮತ್ತು ಬ್ಯಾಟಿಂಗ್ ದಾಳಿಗೆ ಲಕ್ನೋ ಧೂಳೀಪಟ | Oneindia Kannada

ಸದ್ಯ ಇಷ್ಟೆಲ್ಲಾ ಸಮಸ್ಯೆಯಿರುವುದರಿಂದ ಮೊಟ್ಟೆ, ಚಿಕನ್‌ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಹೋಟೆಲ್‌ಗಳಲ್ಲಿ ಚಿಕನ್‌ ಪದಾರ್ಥಗಳ ಬೆಲೆ ಕೂಡ ಏರಿಕೆಯಾಗುವ ಸಾಧ್ಯತೆ ಇದೆ.

English summary
Chicken Price in Bengaluru: Retail Chicken sellers have reported a 20% drop in sales. Due to Low consumption, high poultry death soar Chicken prices in Bengaluru. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X