ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿಗರ ಎದೆ ನಡುಗಿಸಿದ ನಿಗೂಢ ಸದ್ದು: ನೆಟ್ಟಿಗರು ಹೇಳಿದ್ದೇನು.?

|
Google Oneindia Kannada News

ಬೆಂಗಳೂರು, ಮೇ 20: ಮಾರಣಾಂತಿಕ ಕೊರೊನಾ ವೈರಸ್ ಆತಂಕದಲ್ಲಿ ದಿನಗಳನ್ನು ದೂಡುತ್ತಿರುವಾಗಲೇ, ಬೆಂಗಳೂರಿಗರು ಬೆಚ್ಚಿ ಬೀಳುವ ಘಟನೆಯೊಂದು ಇಂದು ನಡೆದಿದೆ. ಇಂದು ಮಧ್ಯಾಹ್ನ 1.20 ರಿಂದ 1.30 ರ ಸುಮಾರಿಗೆ ಕೇಳಿಬಂದ ನಿಗೂಢ ಶಬ್ದ ಬೆಂಗಳೂರಿಗರ ಎದೆ ನಡುಗಿಸಿದೆ.

ಬೆಂಗಳೂರಿನ ವೈಟ್ ಫೀಲ್ಡ್, ಟಿನ್ ಫ್ಯಾಕ್ಟರಿ, ಕೋರಮಂಗಲ, ಜಯನಗರ, ಬಸವನಗುಡಿ, ಎಚ್.ಎಸ್.ಆರ್.ಲೇಔಟ್, ಕೆ.ಆರ್.ಪುರಂ, ಬನ್ನೇರುಘಟ್ಟ ರಸ್ತೆ ಮುಂತಾದ ಕಡೆ ಭೂಕಂಪದಂತೆ ಭಾರಿ ಶಬ್ದ ಕೇಳಿಬಂದಿದೆ.

ಬೆಂಗಳೂರಿಗರನ್ನು ಬೆಚ್ಚಿಬೀಳುವಂತೆ ಮಾಡಿದ ನಿಗೂಢ ಶಬ್ದಬೆಂಗಳೂರಿಗರನ್ನು ಬೆಚ್ಚಿಬೀಳುವಂತೆ ಮಾಡಿದ ನಿಗೂಢ ಶಬ್ದ

''ಇದು ಭೂಕಂಪವಾಗಿರಲು ಸಾಧ್ಯವಿಲ್ಲ. ನಮ್ಮ ಮಾಪಕಗಳಲ್ಲಿ ಯಾವುದೇ ದಾಖಲೆ ರೆಕಾರ್ಡ್ ಆಗಿಲ್ಲ'' ಎಂದು ಕೆ.ಎಸ್.ಎನ್.ಡಿ.ಎಂ.ಸಿ ನಿರ್ದೇಶಕ ಶ್ರೀನಿವಾಸ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ.

ಇನ್ನೂ ''ಏರ್ ಫೋರ್ಸ್ ಕಂಟ್ರೋಮ್ ರೂಮ್ ಅಧಿಕಾರಿಗಳನ್ನು ಸಂಪರ್ಕಿಸಿ ಈ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ'' ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದ್ದಾರೆ.

ದಿಢೀರ್ ಅಂತ ಕೇಳಿಬಂದ ಸದ್ದಿನಿಂದ ಗಾಬರಿಗೊಂಡ ಬೆಂಗಳೂರಿಗರು ಟ್ವೀಟ್ ಮಾಡುತ್ತಿರುವುದು ಹೀಗೆ...

ಬೆಚ್ಚಿಬಿದ್ದ ಬೆಂಗಳೂರು

''ವಾತಾವರಣದ ವಿದ್ಯಾಮಾನವೊಂದರಿಂದ ಬೆಂಗಳೂರು ಬೆಚ್ಚಿಬೆದ್ದಿದೆ. ಈ ವರ್ಷ ಮನುಷ್ಯರನ್ನು ಮನೆಯೊಳಗೆ ಕಟ್ಟಿಹಾಕಲಿದೆ'' ಎಂದು ಡಿಯೋನ್ ಕಾರ್ಡೋಝಾ ಎಂಬುವರು ಟ್ವೀಟ್ ಮಾಡಿದ್ದಾರೆ.

ಚಂಡಮಾರುತದ ಪರಿಣಾಮವೇ.?

''ಆ ನಿಗೂಢ ಶಬ್ದ ಭೂಕಂಪ ಅಲ್ಲ. ಜೆಟ್ ಸೌಂಡ್ ಕೂಡ ಅಲ್ಲ. ಅದು ಚಂಡಮಾರುತದ ಪರಿಣಾಮ'' ಎಂದು ಸೈಯ್ಯದ್ ಸಲೀಮ್ ಎಂಬುವರು ಟ್ವೀಟ್ ಮಾಡಿದ್ದಾರೆ.

ಅಲುಗಾಡಿದ ಕಟ್ಟಡಗಳು, ಕಿಟಕಿಗಳು

''ಆ ಶಬ್ದ ಸಾನಿಕ್ ಬೂಮ್ ರೀತಿ ಕೇಳಿಬಂತು. ಕಟ್ಟಡಗಳು, ಕಿಟಕಿಗಳು ಅಲುಗಾಡಿದವು'' ಎಂದು ಅಶೋಕ್ ಪಂತ್ ಎಂಬುವರು ಟ್ವೀಟ್ ಮಾಡಿದ್ದಾರೆ.

ಯುದ್ಧ ವಿಮಾನದ ಶಬ್ಧವೇ.?

''ಬೆಂಗಳೂರಿಗರೇ ಹೆದರದಿರಿ, ಆ ಶಬ್ದ ವಾಯುಪಡೆಯ ಮಿರಾಜ್ 2000 ಯುದ್ಧ ವಿಮಾನದ್ದು. ಬೆಂಗಳೂರಿನಲ್ಲಿ ಭೂಕಂಪ ಸಂಭವಿಸಿಲ್ಲ'' ಎಂದು ಓರ್ವ ಟ್ವೀಟಿಗರು ಟ್ವೀಟಿಸಿದ್ದಾರೆ.

ತನಿಖೆ ಆಗುವವರೆಗೂ ಸುಮ್ಮನಿರಿ

''ಬೆಂಗಳೂರಿಗರೇ.. ನಿಗೂಢ ಶಬ್ದದ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಸದ್ಯದಲ್ಲೇ ವಾಸ್ತವ ಗೊತ್ತಾಗಲಿದೆ. ದಯವಿಟ್ಟು ನೀವು ತನಿಖೆ ಮಾಡುವುದನ್ನು ನಿಲ್ಲಿಸಿ'' ಎಂದು ರುಮಾನಾ ಎಂಬುವರು ಮನವಿ ಮಾಡಿದ್ದಾರೆ.

English summary
Loud Sound with Vibration experienced at different places in Bengaluru. Have a look at Bengalureans reaction in Twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X