ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಂಟಿಸಿಗೆ ಬಿಳಿಯಾನೆಯಾದ ವೋಲ್ವೊ ಬಸ್, ನಷ್ಟವೇ ಹೆಚ್ಚು!

|
Google Oneindia Kannada News

ಬೆಂಗಳೂರು, ಜೂನ್ 06 : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಕೆಂಪು ವೋಲ್ವೊ ಬಸ್‌ಗಳು ಬಿಳಿಯಾನೆಯಾಗಿವೆ. ಈ ಬಸ್‌ಗಳಿಂದ ಲಾಭಕ್ಕಿಂತ ನಷ್ಟವೇ ಹೆಚ್ಚಾದ ಕಾರಣ ಕೆಎಸ್ಆರ್‌ಸಿಗೆ ಕೆಲವು ಬಸ್‌ಗಳನ್ನು ಹಸ್ತಾಂತರ ಮಾಡುವ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ.

ಕೆಲವು ವರ್ಷಗಳ ಹಿಂದೆ ಬಿಎಂಟಿಸಿಗೆ ಸಾಲು-ಸಾಲು ವೋಲ್ವೊ ಬಸ್ ಖರೀದಿ ಮಾಡಲಾಯಿತು. ಆದರೆ, ಇವುಗಳ ದರ ಹೆಚ್ಚು ಎಂಬ ಕಾರಣಕ್ಕೆ ಜನರು ಹವಾನಿಯಂತ್ರಿತ ಬಸ್‌ಗಳಿಂದ ದೂರವಾದರು. ಆದರೆ, ವಿಮಾನ ನಿಲ್ದಾಣಕ್ಕೆ ವೋಲ್ವೊ ಬಸ್‌ಗಳನ್ನು ಬಿಎಂಟಿಸಿ ಓಡಿಸುತ್ತಿದೆ.

ಅಕ್ಟೋಬರ್‌ನಿಂದ ಬಸ್‌-ಮೆಟ್ರೋ ಪ್ರಯಾಣಕ್ಕೆ ಒಂದೇ ಸ್ಮಾರ್ಟ್ ಕಾರ್ಡ್ಅಕ್ಟೋಬರ್‌ನಿಂದ ಬಸ್‌-ಮೆಟ್ರೋ ಪ್ರಯಾಣಕ್ಕೆ ಒಂದೇ ಸ್ಮಾರ್ಟ್ ಕಾರ್ಡ್

ಈ ಬಸ್‌ಗಳ ಖರೀದಿ ಬಳಿಕ ಸಂಸ್ಥೆಗೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿದೆ. ಆದ್ದರಿಂದ, ಕೆಲವು ಬಸ್‌ಗಳನ್ನು ಕೆಎಸ್ಆರ್‌ಟಿಸಿಗೆ ನೀಡಿ, ಮೈಸೂರು, ತುಮಕೂರು, ಕೋಲಾರ ಮುಂತಾದ ನಗರಗಳಲ್ಲಿ ಓಡಿಸಲು ಬಿಎಂಟಿಸಿ ಚಿಂತನೆ ನಡೆಸಿದೆ.

ಬಂದ್, ಮುಷ್ಕರ : ಕೆಎಸ್ಆರ್‌ಟಿಸಿ, ಬಿಎಂಟಿಸಿಯ ನಷ್ಟದ ಲೆಕ್ಕಬಂದ್, ಮುಷ್ಕರ : ಕೆಎಸ್ಆರ್‌ಟಿಸಿ, ಬಿಎಂಟಿಸಿಯ ನಷ್ಟದ ಲೆಕ್ಕ

ಈ ಬಸ್‌ಗಳನ್ನು ಕೆಎಸ್ಆರ್‌ಟಿಸಿಗೆ ನೀಡಿದರೆ ಅದನ್ನು ಸ್ವೀಕಾರ ಮಾಡಲಾಗುತ್ತದೆಯೇ? ಎಂಬ ಪ್ರಶ್ನೆ ಹುಟ್ಟಿಕೊಂಟಿದೆ. ಈ ಬಸ್‌ಗಳ ನಿರ್ವಹಣಾ ವೆಚ್ಚವೇ ಅಧಿಕವಾಗಿದೆ. ಆದ್ದರಿಂದ, ಕೆಎಸ್ಆರ್‌ಟಿಸಿ ಈ ಬಸ್ ಓಡಿಸಿ ಹೇಗೆ ಲಾಭ ಗಳಿಸಲಿದೆ? ಎಂಬುದು ಸದ್ಯದ ಪ್ರಶ್ನೆ.....

ಬಸ್ ಚಾಲಕನ ಪರಿಸರ ಪ್ರೇಮ, ಜನರಿಗೆ ಹಸಿರು ಬಳ್ಳಿಯ ಸ್ವಾಗತಬಸ್ ಚಾಲಕನ ಪರಿಸರ ಪ್ರೇಮ, ಜನರಿಗೆ ಹಸಿರು ಬಳ್ಳಿಯ ಸ್ವಾಗತ

600 ಬಸ್ ಹಸ್ತಾಂತರ

600 ಬಸ್ ಹಸ್ತಾಂತರ

ಬೆಂಗಳೂರು ನಗರದಲ್ಲಿ ಬಿಎಂಟಿಸಿಯ 825 ವೋಲ್ವೊ ಬಸ್ ಕಾರ್ಯಚರಣೆ ನಡೆಸುತ್ತಿವೆ. ಇವುಗಳಲ್ಲಿ 600 ಬಸ್‌ಗಳನ್ನು ಕೆಎಸ್ಆರ್‌ಟಿಸಿಗೆ ನೀಡಲು ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ಈ ಬಸ್‌ಗಳ ಕಾರ್ಯಾಚರಣೆಯಿಂದ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿದೆ. ಆದ್ದರಿಂದ, ಬಸ್‌ಗಳನ್ನು ಕೆಎಸ್ಆರ್‌ಸಿಗೆ ನೀಡಲು ಚಿಂತನೆ ನಡೆದಿದೆ.

70 ರೂ. ಆದಾಯ, 85 ರೂ. ಖರ್ಚು

70 ರೂ. ಆದಾಯ, 85 ರೂ. ಖರ್ಚು

ಬಿಎಂಟಿಸಿಯ ಕೆಂಪು ವೋಲ್ವೊ ಬಸ್ ಸಂಚಾರದಿಂದ 70 ರೂ. ಆದಾಯ ಬರುತ್ತದೆ. ಆದರೆ, ಖರ್ಚು 85 ರೂ. ಆಗಲಿದೆ. ವೋಲ್ವೊ ಬಸ್‌ಗಳ ಕಾರ್ಯಾಚರಣೆಯಿಂದಾಗಿ ಬಿಎಂಟಿಸಿಗೆ ಸತತವಾಗಿ ನಷ್ಟ ಉಂಟಾಗುತ್ತಿದೆ. ಈ ಬಸ್‌ಗಳ ನಿರ್ವಹಣಾ ವೆಚ್ಚವೇ ಅಧಿಕವಾಗಿದ್ದು, ನಷ್ಟಕ್ಕೆ ಪ್ರಮುಖ ಕಾರಣವಾಗಿದೆ.

ಆಯ್ದ ಮಾರ್ಗಗಳಲ್ಲಿ ಮಾತ್ರ ಸಂಚಾರ

ಆಯ್ದ ಮಾರ್ಗಗಳಲ್ಲಿ ಮಾತ್ರ ಸಂಚಾರ

ಬಿಎಂಟಿಸಿಯು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ವಾಯು ವಜ್ರ ವೋಲ್ವೊ ಬಸ್ ಓಡಿಸುತ್ತಿದೆ. ಎಲೆಕ್ಟ್ರಾನಿಕ್ ಸಿಟಿ ಕಡೆ ಸಂಚರಿಸುವ ಬಸ್‌ಗಳು ಲಾಭದಾಯಕವಾಗಿವೆ. ಉಳಿ ಮಾರ್ಗದಲ್ಲಿ ಸಂಚಾರ ನಡೆಸುವ ಬಸ್‌ಗಳಿಂದ ನಷ್ಟವೇ ಹೆಚ್ಚಾಗಿದೆ. ಪ್ರಸ್ತುತ ಆಯ್ದ ಮಾರ್ಗಗಳಲ್ಲಿ ಮಾತ್ರ ಬಸ್‌ಗಳ ಸಂಚಾರವನ್ನು ನಡೆಸಲಾಗುತ್ತಿದೆ.

ಜಿಲ್ಲಾ ಕೇಂದ್ರಗಳಲ್ಲಿ ಸಂಚಾರ

ಜಿಲ್ಲಾ ಕೇಂದ್ರಗಳಲ್ಲಿ ಸಂಚಾರ

ಕೆಎಸ್ಆರ್‌ಟಿಸಿಗೆ ಬಸ್‌ಗಳನ್ನು ನೀಡಿದರೆ ನಗರ ಸಾರಿಗೆಯಾಗಿ ಅವರು ಬಳಕೆ ಮಾಡಲಿದ್ದಾರೆ. ಮೈಸೂರು, ತುಮಕೂರು, ಕೋಲಾರ ಮುಂತಾದ ಜಿಲ್ಲೆಗಳಲ್ಲಿ ವೋಲ್ವೊ ಬಸ್‌ ಸಂಚಾರವನ್ನು ನಡೆಸಬಹುದಾಗಿದೆ. ಆದರೆ, ವೋಲ್ವೊ ಬಸ್‌ಗಳನ್ನು ತೆಗೆದುಕೊಳ್ಳಲು ಕೆಎಸ್ಆರ್‌ಟಿಸಿ ಒಪ್ಪಿಗೆ ನೀಡಲಿದೆಯೇ?.

English summary
Bangalore Metropolitan Transport Corporation (BMTC) suffering loss from Volvo bus. Corporation come up with a proposal to handover 600 bus to KSRTC.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X