ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಾಕ್‌ಡೌನ್ ಸಂದರ್ಭದಲ್ಲಿ ನಮ್ಮ ಮೆಟ್ರೋ ಅನುಭವಿಸಿದ ನಷ್ಟವೆಷ್ಟು?

|
Google Oneindia Kannada News

ಬೆಂಗಳೂರು, ಜೂನ್ 23: ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ನಮ್ಮ ಮೆಟ್ರೋ ಶೇ.82 ಆದಾಯವನ್ನು ಕಳೆದುಕೊಂಡಿದೆ. ಸಿಬ್ಬಂದಿ ವೇತನ, ನಿರ್ವಹಣೆ, ಸೇವೆಯನ್ನು ನಿರ್ವಹಿಸಲು ಕಂಪನಿಗೆ ಕನಿಷ್ಠ 300 ಕೋಟಿ ರೂ. ಬೇಕು, ಹೀಗಾಗಿ ಸರ್ಕಾರದಿಂದ ಸಾಲವನ್ನು ಪಡೆಯುವ ಕುರಿತು ಆಲೋಚಿಸುತ್ತಿದೆ.

ಸಿಬ್ಬಂದಿ ವೇತನ, ನಿರ್ವಹಣೆ, ಸೇವೆಯನ್ನು ನಿರ್ವಹಿಸಲು ಕಂಪನಿಗೆ ಕನಿಷ್ಠ 300 ಕೋಟಿ ರೂ. ಬೇಕು, ಕಳೆದ ವರ್ಷ ನಮ್ಮ ಮೆಟ್ರೋ ಸೇವೆಯನ್ನು ಕುಂಠಿತಗೊಳಿಸಿದ್ದರಿಂದ , ಏಕಾಏಕಿ ಕೋವಿಡ್ 19 ನಿರ್ಬಂಧ ವಿಧಿಸಿದ ಕಾರಣ ರೈಲುಗಳನ್ನು ಸೀಮಿತ ಗಂಟೆಯವರೆಗೆ ಓಡಿಸಲು ಒತ್ತಾಯಿಸಲಾಗಿತ್ತು.

ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ; ಮತ್ತೆ ಬರಲಿದೆ ಟೋಕನ್ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ; ಮತ್ತೆ ಬರಲಿದೆ ಟೋಕನ್

2019ರಲ್ಲಿ ಮೆಟ್ರೋ ನಿಗಮವು 418.78 ಕೋಟಿ ಆದಾಯ ಗಳಿಸಿತ್ತು. ಆದರೆ 2020ರಲ್ಲಿ ಕೊರೊನಾ ಸೋಂಕಿನಿಂದಾಗಿ ಆದಾಯ 78.92 ಕೋಟಿಗೆ ಇಳಿದಿತ್ತು. ಪ್ರಸ್ತುತ ಹಣಕಾಸು ವರ್ಷದಲ್ಲಿ ಅಂಕಿಅಂಶಗಳು ಉತ್ತಮಗೊಳ್ಳಬಹುದು ಎಂಬ ಭರವಸೆಯನ್ನು ಅಧಿಕಾರಿಗಳು ಹೊಂದಿಲ್ಲ.

Losing 82 Percent Revenue In pandemic Times, BMRCL Looks To Karnataka Govt For Loan

ಏಪ್ರಿಲ್‌ನಲ್ಲಿ ಮೆಟ್ರೋ ಸೇವೆಗಳು ಮುಂದುವರೆದಾಗ 9.42 ಕೋಟಿ ಆದಾಯ ಬಂದಿತ್ತು, ಗರಿಷ್ಠ ಮಾಸಿಕ ಆದಾಯದ ಶೇ.30ರಷ್ಟು ಕಡಿಮೆಯಾದಂತಾಗಿದೆ. ಡೈರಿ ಸರ್ಕಲ್‌ ಮತ್ತು ನಾಗವಾರ ನಡುವಿನ 13.88 ಕಿ.ಮೀ ನಮ್ಮ ಮೆಟ್ರೋ ಯೋಜನೆಗಾಗಿ ಟನೆಲ್‌ ಬೋರಿಂಗ್‌ ಮೆಶಿನ್‌ (ಟಿಬಿಎಂ) ಭದ್ರಾ ಉದ್ದೇಶಿತ ವೆಂಕಟೇಶಪುರ ನಿಲ್ದಾಣ ಬಳಿ ಸುರಂಗ ಕೊರೆಯಲು ಆರಂಭಿಸಿದೆ.

ಕಳೆದ ಎರಡು ವರ್ಷಗಳಿಂದ ಈ ಮಾರ್ಗದಲ್ಲಿ ಕಾಮಗಾರಿ ನಡೆಯುತ್ತಿದೆ. ಸುಮಾರು 50 ಮೀಟರ್‌ ಸುರಂಗ ಕೊರೆಯುವ ಕಾಮಗಾರಿಯನ್ನು ಟಿಬಿಎಂ ಭದ್ರಾ ಪೂರ್ಣಗೊಳಿಸಿದ ನಂತರ ಟಿಬಿಎಂ ತುಂಗಾ ನಿಯೋಜಿಸಲಾಗುವುದು ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದರು.

ಉತ್ತರ ಬೆಂಗಳೂರಿನಲ್ಲಿ ನಿಯೋಜಿಸಲಾಗಿರುವ ಟಿಬಿಎಂಗಳನ್ನು ನಿರ್ಮಾಣ ಸಂಸ್ಥೆಯಾದ ಐಟಿಡಿ ಸೆಮೆಂಟೇಶನ್‌ ಇಂಡಿಯಾ ನಿರ್ವಹಿಸುತ್ತಿದೆ. 4.5 ಕಿ.ಮೀ ಸುರಂಗ ಮಾರ್ಗದಲ್ಲಿ ನಾಲ್ಕು ಮೆಟ್ರೋ ನಿಲ್ದಾಣಗಳನ್ನು ನಿರ್ಮಿಸುವ ಗುತ್ತಿಗೆಯನ್ನು 1,771 ಕೋಟಿ ರೂ.ಗೆ 2019ರ ನವೆಂಬರ್‌ನಲ್ಲಿ ಐಟಿಡಿ ಸೆಮೆಂಟೇಶನ್‌ ಇಂಡಿಯಾ ಪಡೆದಿದೆ.

Recommended Video

ನಮಗೆ ವಿಷ ಕೊಡಿ ಎಂದು ಭಾರತದ ಬಳಿ ಮನವಿ ಮಾಡಿದ Australia | Oneindia Kannada

English summary
With the pandemic paralysing its operations, the BMRCL is looking at the government to raise loans.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X