ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಉತ್ತರಹಳ್ಳಿಯಲ್ಲಿ ರಾಮ, ಸೀತೆ ಪ್ರತ್ಯಕ್ಷ!

|
Google Oneindia Kannada News

ಬೆಂಗಳೂರು, ಸೆ.1 : ಉತ್ತರಹಳ್ಳಿಯಲ್ಲಿ ಜಲಮಂಡಳಿ ಪೈಪ್ ಆಳವಡಿಸಲು ಗುಂಡಿ ತೆಗೆಯುವ ವೇಳೆ ರಾಮ ಮತ್ತು ಸೀತೆಯ ಪಂಚಲೋಹದ ವಿಗ್ರಹಗಳು ಪತ್ತೆಯಾಗಿವೆ. ವಿಗ್ರಹಗಳನ್ನು ಸಮೀಪದ ದೇವಾಲಯದಲ್ಲಿ ಇಡಲಾಗಿದ್ದು, ಅವುಗಳಿಗೆ ಪೂಜೆ ಸಲ್ಲಿಸಲಾಗುತ್ತಿದೆ.

ಉತ್ತರಹಳ್ಳಿ ಸಮೀಪದ ಶಿವಗಂಗಾ ಲೇಔಟ್‌ ಬಳಿ ಶನಿವಾರ ಸಂಜೆ ಜಲಮಂಡಳಿ ಕಾರ್ಮಿಕರು ಪೈಪ್ ಆಳವಡಿಸಲು ಗುಂಡಿ ತೆಗೆಯುತ್ತಿದ್ದಾಗ ಈ ವಿಗ್ರಹಗಳು ಪತ್ತೆಯಾಗಿವೆ. ಕಾರ್ಮಿಕರು ಈ ವಿಷಯವನ್ನು ಅಧಿಕಾರಿಗಳಿಗೆ ತಿಳಿಸಿದ್ದಾರೆ. ವಿಗ್ರಹಗಳು ಪತ್ತೆಯಾಗಿವೆ ಎಂಬ ಸುದ್ದಿ ತಿಳಿದ ನೂರಾರು ಜನರು ಸ್ಥಳಕ್ಕೆ ಆಗಮಿಸಿ ರಾಮ ಮತ್ತು ಸೀತೆಯ ವಿಗ್ರಹಗಳಿಗೆ ಪೂಜೆ ಸಲ್ಲಿಸಿದರು.

ವಿಗ್ರಹ ಸಿಕ್ಕಿರುವ ಕುರಿತು ಮಾಹಿತಿ ನೀಡಿರುವ ಉತ್ತರಹಳ್ಳಿ ಬಿಬಿಎಂಪಿ ಸದಸ್ಯ ಕೆ.ರಮೇಶ್ ರಾಜು ಅವರು, ಸ್ಥಳೀಯರು ಈ ವಿಗ್ರಹಗಳು ಸುಮಾರು 150 ವರ್ಷ ಪುರಾತನವಾದವು ಎಂದು ಹೇಳಿದ್ದಾರೆ. ವಿಗ್ರಹ ಸಿಕ್ಕಿರುವ ಕುರಿತು ನಾವು ಪೊಲೀಸರಿಗೂ ಮಾಹಿತಿ ನೀಡಿದ್ದೇವೆ ಎಂದು ತಿಳಿಸಿದರು. [ಜಲಮಂಡಳಿ ಅಪೂರ್ಣ ಕಾಮಗಾರಿ, ಸವಾರರ ಪರದಾಟ]

Uttarahalli

ಸದ್ಯ, ರಾಮ ಮತ್ತು ಸೀತೆಯ ಮೂರ್ತಿಯನ್ನು ಸಮೀಪದ ದೇವಾಲಯವೊಂದರಲ್ಲಿ ಇಟ್ಟು ಪೂಜೆ ಸಲ್ಲಿಸಲಾಗುತ್ತಿದೆ. ಪಂಚಲೋಹದಿಂದ ಮಾಡಿದ ವಿಗ್ರಹಗಳು ಇದಾಗಿದ್ದು, ರಾಮನ ವಿಗ್ರಹ 8 ಕೆ.ಜಿ. ಮತ್ತು ಸೀತೆಯ ವಿಗ್ರಹ 2 ಕೆ.ಜಿ.ತೂಕವಿದೆ.

English summary
Bangalore Water Supply and Sewerage Board workers engaged in laying new pipelines for providing Cauvery water to homes in Shivaganga Layout near Uttarahalli found idols of Lord Rama and Sita.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X