• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಾಲಿಸಿದರೆ ವರ, ಉಲ್ಲಂಘಿಸಿದರೆ ಶಾಪ, ಇದು ಗಣೇಶನ ನಿಯಮ

By Nayana
|

ಬೆಂಗಳೂರು, ಆಗಸ್ಟ್ 3: ಗಣೇಶನ ಹಬ್ಬಕ್ಕೂ ಮುನ್ನವೇ ಬೆಂಗಳೂರಿನ ಬೀದಿಬೀದಿಗಳಲ್ಲಿ ಗಣೇಶ ಕಾಣಿಸಿಕೊಳ್ಳುತ್ತಿದ್ದಾನೆ, ಟ್ರಾಫಿಕ್‌ ನಿಯಮ ಪಾಲಿಸಿದರೆ ವರ ಕೊಡ್ತಾನೆ ಉಲ್ಲಂಘಿಸಿದರೆ ಶಾಪ ಕೊಡ್ತಾನೆ.ನಿಮಗೆ ಜಾಗೃತಿ ಮೂಡಿಸಲು ಬಂದಿದ್ದಾನೆ.

ಈಗಾಗಲೇ ಹಲಸೂರು ಟ್ರಾಫಿಕ್‌ ಪೊಲೀಸರು ಕಲಾವಿದ ವೀರೇಶ್‌ ಅವರ ಸಹಾಯ ಪಡೆದು ಯಮನ ವೇಷಧರಿಸಿ ಜಾಗೃತಿ ಮೂಡಿಸಿದ್ದಾರೆ, ಇದೀಗ ಬೆಂಗಳೂರು ಉತ್ತರ ರಾಜಾಜಿನಗರ ಟ್ರಾಫಿಕ್‌ ಪೊಲೀಸರು ಗಣೇಶನ್ನು ಬಳಸಿಕೊಂಡು ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

ಡ್ರೋಣ್‌ ಬಳಸಿ ಟ್ರಾಫಿಕ್ ಮೇಲೆ ನಿಗಾ ಇಡ್ತಾರಂತೆ ಪೊಲೀಸರು

ನಗರದಲ್ಲಿ ಈಗಘಾಲೇ 70 ಲಕ್ಷಕ್ಕೂ ಹೆಚ್ಚು ವಾಹನಗಳಿವೆ, ದಿನನಿತ್ಯ ನಗರದೊಳಗೆ 25 ಲಕ್ಷಕ್ಕೂ ಹೆಚ್ಚು ವಾಹನಗಳು ಸಂಚರಿಸುತ್ತವೆ, ಸಿಗ್ನಲ್‌ ಉಲ್ಲಂಘನೆ, ಹೆಲ್ಮೆಟ್‌ ಧರಿಸದೇ ಇರುವುದು, ಅತಿಯಾದ ವೇಗದಲ್ಲಿ ಚಾಲನೆ ಹೀಗೆ ಅನೇಕ ಸಂಚಾರ ನಿಯಮವನ್ನು ಉಲ್ಲಂಘಿಸಲಾಗುತ್ತಿದೆ ಅವರಿಗೆ ಜಾಗೃತಿ ಮೂಡಿಸುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ.

Lord Ganesh will bless you if not violate traffic rules!

ಇಷ್ಟು ದಿನ ಜಾಗೃತಿ ಕಾರ್ಯಕ್ರಮ ಎಂದು ಪೊಲೀಸರು ಕರಪತ್ರಗಳನ್ನು ಹಂಚುತ್ತಿದ್ದರು, ಹೆಲ್ಮೆಟ್‌ ಇಲ್ಲದವರಿಗೆ ದಂಡ ವಿಧಿಸುತ್ತಿದ್ದರು ಜನರು ಮಾತ್ರ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ದಂಡ ಕಟ್ಟಿ ಹೋಗುತ್ತಿದ್ದರು.

ಅಣ್ಣನ ಸಾವಿಗೆ ನೊಂದ ಪರೋಪಕಾರಿ ಯಮಧರ್ಮನ ಕತೆ ಕೇಳಿ

ಇದೆಲ್ಲವನ್ನೂ ಗಮನಸಿಸಿದ ಟ್ರಾಫಿಕ್‌ ಪೊಲೀಸರು ನಿಯಮ ಉಲ್ಲಂಘಿಸಿ ದಂಡ ಕಟ್ಟುವುದು ಮುಖ್ಯವಲ್ಲ ನಿಯಮವನ್ನು ಉಲ್ಲಂಘಿಸಬಾರದು ಎಂದು ಅವರ ಮನಸ್ಸಿನಲ್ಲಿಯೇ ಅಂದುಕೊಳ್ಳುವಂತೆ ಮಾಡಬೇಕು ಇದಕ್ಕೆ ದೇವರೇ ಬರಬೇಕು ಎಂದು ಹೇಳಿ ದೇವರ ವೇಷವನ್ನು ಹಾಕಿಸಿದ್ದಾರೆ.

Lord Ganesh will bless you if not violate traffic rules!

ಈ ಕುರಿತು ಬೆಂಗಳೂರು ಉತ್ತರ ಟ್ರಾಫಿಕ್ ಎಸಿಪಿ ಜಗದೀಶ್‌ ಒನ್‌ ಇಂಡಿಯಾಗೆ ಪ್ರತಿಕ್ರಿಯೆ ನೀಡಿದ್ದು, ಜನರಿಗೆ ದೇವರೆಂದರೆ ಭಯ ಅವರು ದೇವರು ಹೇಳಿದರೆ ಮಾತ್ರ ಒಪ್ಪುತ್ತಾರೆ, ಹಾಗಾಗಿ ಸಂಚಾರ ನಿಯಮ ಉಲ್ಲಂಘಿಸಿದಂತೆ ಜಾಗೃತಿ ಮೂಡಿಸಲು ಗಣೇಶನ ವೇಷವನ್ನು ಹಾಕಿಸಲಾಗಿದೆ. ಆದರೆ ಈ ವೇಷ ಹಾಕಿರುವುದು ಕಲಾವಿದರಲ್ಲ ಬದಲಾಗಿ ಪೊಲೀಸ್‌ ಕಾನ್‌ಸ್ಟೆಬಲ್‌ ಬಸವರಾಜ್‌, ಇದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru traffic north division police have taken an initiative by deploying a constable who is a mace wielding as lord Ganesha to create awareness about traffic rules.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more